ಕೆ ಎಸ್ ನ ನೆನಪು 8 : ರಾಷ್ಟ್ರಕವಿ ಜಿ ಎಸ್ ಎಸ್ ಹಾಗೂ ಕೆ ಎಸ್ ನ
ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು. 1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ...
ನಿಮ್ಮ ಅನಿಸಿಕೆಗಳು…