ಮಾಕಳಿ ಬೇರು
ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು ತಿಳಿಯಿತು. ಮಾಕಳಿ ಸಸ್ಯದ ಎಲೆಗಳು ದೀರ್ಘವೃತ್ತಾಕಾರದಲ್ಲಿದ್ದು ಬೇರುಗಳು ವಿಶಾಲವಾಗಿ ಹಬ್ಬಿಕೊಳ್ಳುತ್ತವೆ. ಇದರ ಬೇರುಗಳ ಹೊರಪದರವು ಮೆತ್ತಗಿದ್ದು ಒಳಪದರವು ಗಟ್ಟಿಯಾಗಿರುತ್ತದೆ. ಜೊತೆಯಲ್ಲಿ ವೆನಿಲದಂತಹ ಸಣ್ಣ ಪರಿಮಳವಿರುತ್ತದೆ.
ಆಯುರ್ವೇದ ಹಾಗೂ ಹಳ್ಳಿ ಮದ್ದುಗಳಲ್ಲಿ ಇದನ್ನು ತಂಪಿಗೆ ಹಾಗೂ ರಕ್ತ ಶುದ್ಧಿಗಾಗಿ ಉಪಯೋಗಿಸಲಾಗುತ್ತದೆ. ಅಜೀರ್ಣ, ಗರ್ಭಾಶಯದ ತೊಂದರೆ, ದೀರ್ಘಕಾಲದ ಸಂಧಿವಾತ, ಕೆಲವು ಚರ್ಮ ರೋಗಗಳು, ನಿಶ್ಯಕ್ತಿ, ಹಿಮೋಗ್ಲೋಬಿನ್ ಕೊರತೆ, ಇತ್ಯಾದಿಗಳಿಗೂ ಇದರ ಔಷಧಿಯನ್ನೀಯಲಾಗುತ್ತದೆ, ಮಾಕಳಿ ಬೇರಿನ ಅಂಶಗಳು ಪ್ಯಾಕ್ಡ್ ಆಹಾರದಲ್ಲಿ ಅಥವಾ ಜಂಕ್ ಫ಼ುಡ್ ಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳಿಗೆ ರಾಮಬಾಣ. ಮಾತ್ರವಲ್ಲ, ಹೊಟ್ಟೆ ಸೇರುವ ಅನಾರೋಗ್ಯಕರ ಪ್ಯಾಕ್ಡ್ ಆಹಾರಕ್ಕೆ ಕೀಟನಾಶಕದಂತೆ ವರ್ತಿಸುತ್ತದೆ. Decalepis hamiltonii ಅಥವಾ Swallow Root ಎನ್ನುವುದು ಮಾಕಳಿ ಬೇರಿನ ಇಂಗ್ಲಿಷ್ ನಾಮ. ಇದು ಎಷ್ಟು ಪ್ರಭಾವೀ ಪ್ರಾಕೃತಿಕ ಕೀಟನಾಶಕವೆಂದರೆ ಸಂಗ್ರಹಿಸಿದ ಧಾನ್ಯಗಳಲ್ಲೂ ಕೀಟಗಳು ಹಾವಳಿ ಮಾಡದಂತೆ ಮಾಕಳಿ ಬೇರಿನ ತುಂಡುಗಳನ್ನಿರಿಸಲಾಗುತ್ತದೆ.
ಮಾಕಳಿ ಬೇರನ್ನು ಕುದಿಸಿದ ಪಾನೀಯ ಅಥವಾ ಉಪ್ಪಿನಕಾಯಿಯ ರೂಪದಲ್ಲಿ ಸೇವಿಸಬಹುದು. ಬೇರನ್ನು ಸೀಳಿ ಅದರ ಗಟ್ಟಿಯಾದ ಒಳಪದರವನ್ನು ಬೇರ್ಪಡಿಸಿ ಸಿಪ್ಪೆಯನ್ನೂ ತೆಗೆದು ಬೆಲ್ಲದೊಂದಿಗೆ ನೀರಿನಲ್ಲಿ ಹಾಕಿ ಕುದಿಸಿದರೆ ಪಾನೀಯ ರೆಡಿ. ಬೇಸಿಗೆಯಲ್ಲಿ ತಂಪಿಗಾಗಿ ಇದರ ಸೇವನೆ ಉತ್ತಮವೆನ್ನಲಾಗುತ್ತದೆ. ಇದೇ ರೀತಿ ಒಳಪದರವನ್ನೂ ಸಿಪ್ಪೆಯನ್ನೂ ಬೇರ್ಪಡಿಸಿ ನಿಂಬೆ ಹಣ್ಣಿನೊಂದಿಗೆ ಉಪ್ಪಿನಕಾಯನ್ನೂ ತಯಾರಿಸಿಟ್ಟುಕೊಂಡು ಸೇವಿಸಬಹುದು.
ಮಾಕಳಿ ಬೇರಿನ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು ಅದರ ಬೆಲೆಯೂ ಮಾರುಕಟ್ಟೆಯಲ್ಲಿ ಹೆಚ್ಚು.
– ಶ್ರುತಿ ಶರ್ಮಾ
ಗುಡ್ .ವಿವರ ಓದಿ ಇಷ್ಟವಾಯಿತು .
ಉತ್ತಮವಾದ ಮಾಹಿತಿ….ಧನ್ಯವಾದಗಳು.
ನೀವು ಕೊಟ್ಟ ವಿವರ ಉಪಯುಕ್ತ. ಲೇಖನ ಚೆನ್ನಾಗಿದೆ.
ಧನ್ಯವಾದಗಳು
ಮಾಕಳಿ ಬೇರು ಇದರಲ್ಲಿ 3 ಭಾಗದಲ್ಲಿ ಸಿಪ್ಪೆ ಮದ್ಯದ ಮೃದು ಭಾಗ ಹಾಗೂ ಒಳ ಪದರದ ಗಟ್ಟಿ ಭಾಗದಲ್ಲಿ – ಯಾವ ಭಾಗಗಳು ಕುದಿಸಿದ ಪಾನೀಯಕ್ಕೆ ಯೋಗ್ಯ ತಿಳಿಸಿ.