ಕಾಂಡ್ಲಾಕಾಡು ಉಳಿಸಿ…
ಉಷ್ಣವಲಯದ ಸಮುದ್ರದ ದಂಡೆಯಲ್ಲಿ ಹಲವೆಡೆ ವಿಶೇಷ ಗಿಡ, ಮರಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಅಲೆ ಬಂದಾಗ ಮುಳುಗುತ್ತದೆ. ಇವು ಕಾಂಡ್ಲಗಿಡ ಮರಗಳು. ಇವು ಹೆಚ್ಚಾಗಿದ್ದಾಗ ಕಾಂಡ್ಲಕಾಡು (ಮ್ಯಾಂಗ್ರೋವ್) ಎನ್ನುತ್ತೇವೆ. ಈ ಗಿಡ ಮರಗಳಿಗೆ ಉಪ್ಪು ನೀರು ಬೇಕು. ಸಮುದ್ರಕ್ಕೆ ಸಿಹಿ ನೀರು ಸೇರುವ ಕಡೆ ಇರಬಹುದು. ಇಂತಹ ಕಾಂಡ್ಲಕಾಡು ವಿಶೇಷ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಒಳಗೊಂಡಿರುತ್ತದೆ.
ಸೂಕ್ಷ್ಮ ಜೀವಿಗಳು, ಸೀಗಡಿ, ವಿವಿಧ ಮೀನುಗಳು ಮತ್ತು ಪಕ್ಷಿಗಳೂ ಇರುತ್ತವೆ. ಈ ಜೀವ ವೈವಿಧ್ಯತೆ ಯನ್ನು, ಕಾಂಡ್ಲ ಗಿಡಗಳನ್ನು ಮತ್ತು ಕಾಡುಗಳನ್ನು ಉಳಿಸಿ ಕೊಳ್ಳಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಅಲ್ಲಿಯ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಕಾಂಡ್ಲಕಾಡು ಭೂಮಿಯ ಸವಕಳಿಯನ್ನು, ಅಲೆಗಳ ಮತ್ತು ಗಾಳಿಯ ಹೊಡೆತವನ್ನು ತಡೆಯುತ್ತದೆ. ಸುನಾಮಿಯನ್ನು ತಡೆಯಬಲ್ಲದು. ಕಾಂಡ್ಲ ಗಿಡ-ಮರಗಳಿಗೆ ಮೇಲೆ ಎದ್ದು ನೆಟ್ಟಗೆ ನಿಂತಿರುವ ಬೇರುಗಳಿರುತ್ತವೆ. ಇವು ಉಸಿರಾಟಕ್ಕೆಂದೇ ಇರುತ್ತವೆ. ಕಾಂಡ್ಲಗಿಡಗಳು ನೀರನ್ನು ಸೋಸುತ್ತವೆ.

ಘನ ಲೋಹಗಳನ್ನು ಮತ್ತು ಲವಣಗಳನ್ನು ಹೀರಿಕೊಳ್ಳುತ್ತವೆ. ಇನ್ನೊಂದು ಮುಖ್ಯ ಅನುಕೂಲವೆಂದರೆ ಕಾಂಡ್ಲ ಇಂಗಾಲದ ಇಂಗುದಾಣವಾಗಿದೆ. ನೆಲದ ಮೇಲಿನ ಇಂಗಾಲ ಹೀರುವಿಕೆಗಿಂತ ಇಲ್ಲಿ ನಾಲ್ಕು ಪಟ್ಟು ಹೆಚ್ಚಾಗಿ ಇಂಗಾಲ ಹೀರುವಿಕೆ ಆಗುತ್ತದೆ. ನಮ್ಮ ದೇಶದ ಸುಂದರ ಬನ, ಪಶ್ಚಿಮ ಬಂಗಾಳ, ಅತಿ ದೊಡ್ಡ ವಿಸ್ತೀರ್ಣದಲ್ಲಿ ಕಾಂಡ್ಲಕಾಡುಗಳನ್ನು ಹೊಂದಿದೆ. ಇಲ್ಲಿ ಬಂಗಾಳದ ಹುಲಿ ಕೂಡ ಇದೆ. ನಮ್ಮ ಕರಾವಳಿಯಲ್ಲೂ ಕಾಂಡ್ಲವನಗಳಿವೆ.
-ಡಾ. ಎಸ್. ಸುಧಾ
Nice
ಕಾಂಡ್ಲಾಕಾಡು ಲೇಖನ…ಮಾಹಿತಿ ಇದೆ…ತೀರಾ ಪುಟ್ಟದೆನಿಸಿತು ಸುಧಾ ಮೇಡಂ..
ಹೌದು. ಇದು ಬೇರೆ ಅಭಿಪ್ರಾಯ ದಿಂದ ಪುಸ್ತಕ ಕೆಂದು ಬರೆದಿದ್ದು. ಆದ್ದರಿಂದ ಚಿಕ್ಕದು
ಕಾಂಡ್ಲಾಕಾಡು ಬೆಳೆಸುವುದರಿಂದ ನಿಸರ್ಗದ ಮೇಲೆ ಆಗುವಂತಹ ಉತ್ತಮ ಪರಿಣಾಮಗಳಲ್ಲಿ ಇಂಗಾಲದ ಹೀರುವಿಕೆಯು ವಿಶೇಷವೆನಿಸಿತು. ಲೇಖನವನ್ನು ಸ್ವಲ್ಪ ಹಿಗ್ಗಿಸಿದ್ದರೆ ಒಳ್ಳೆದಿತ್ತೇನೋ .
ಮಾಹಿತಿಪೂರ್ಣ ಲೇಖನ ಎಚ್ಚರಿಸುವಂತಿದೆ.