ಪಾಪುಗೆ ಸ್ವಾಗತ ..ತಾಂತ್ರಿಕತೆಗೊಂದು ಸಲಾಮ್!

Share Button

 

Hema trek Aug2014

ಹೇಮಮಾಲಾ.ಬಿ

ಗೆಳತಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ನನ್ನ ಮೊಬೈಲ್ ಫೋನ್ ಗೆ ಬಂದ ಸಂದೇಶ ಹೀಗಿತ್ತು. “All of god’s grace in one little face….Ours came to us wrapped in blue. Mother and the junior are doing good”  ಎಷ್ಟು ಸೊಗಸಾದ ಪದಜೋಡಣೆ! ಮೆಸೇಜ್ ಅನ್ನು ಓದಿದಾಗ ಮಗುವಿನ ಜನನವಾಯಿತು ಎಂದು ಅರ್ಥವಾಯಿತು. ಆದರೆ ಗಂಡು ಮಗುವೋ ಹೆಣ್ಣು ಮಗುವೋ ಎಂದು ತಿಳಿಯಲಿಲ್ಲ. ಸಂಬಂಧಿಸಿದವರನ್ನು ವಿಚಾರಿಸಿದಾಗ, ನೀಲಿ (blue) ಬಣ್ಣವು ‘ಗಂಡು ಮಗುವಿನಸೂಚಕವೆಂದೂ, ಗುಲಾಬಿ (pink) ಬಣ್ಣವು ಹೆಣ್ಣು ಮಗುವಿನ ಸೂಚಕವೆಂದೂ, ಇದು ಈಗಿನ ಯುವಜನರ ಕಮ್ಯೂನಿಕೇಶನ್ ಶೈಲಿ ಎಂದೂ ಗೊತ್ತಾಯಿತು! 

baby

ಕೆಲವೇ ತಾಸುಗಳ ನಂತರ ಫ಼ೇಸ್ ಬುಕ್ ಅನ್ನು ತೆರೆದಾಗ ಆ ಪುಟ್ಟ ಕಂದನ ಫೋಟೊ ಆಗಲೇ ಭಿತ್ತಿಯಲ್ಲಿ ರಾರಾಜಿಸುತ್ತಿತ್ತು. ಇನ್ನೂ ಕಣ್ಣು ತೆರೆಯದ ಪುಟಾಣಿಗೆ ಖಂಡಾಂತರಗಳಿಂದ ಹಿತೈಷಿಗಳ ಶುಭಾಶಯ ಮತ್ತು ಅದರ ಅಪ್ಪ-ಅಮ್ಮಂದಿರಿಗೆ ಅಭಿನಂದನೆಯ ಮಹಾಪೂರವೇ ಹರಿದಿತ್ತು!

ಮನೆಗೊಂದು ಪುಟ್ಟ ಕಂದನ ಆಗಮನ ಮನೆಮಂದಿಗೆಲ್ಲಾ ಸಡಗರ ತರುತ್ತದೆ. ಈ ಸಡಗರವನ್ನು ಹಂಚಿಕೊಳ್ಳಲು ವಿವಿಧ ಸಂಪ್ರದಾಯ ಮತ್ತು ಪ್ರಾದೇಶಿಕತೆಯ ಮೆರುಗು ಬಳಕೆಯಲ್ಲಿದೆ. ನಾನು ತಿಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಕ ಸಮುದಾಯದಲ್ಲಿ, ಗಂಡು ಮಗು ಹುಟ್ಟಿದರೆ ‘ಸಕ್ಕರೆ-ತೆಂಗಿನಕಾಯಿ’ ಹಾಗೂ ಹೆಣ್ಣು ಮಗು ಹುಟ್ಟಿದರೆ ‘ಬೆಲ್ಲ-ತೆಂಗಿನಕಾಯಿ’ ಹಂಚುವ ಸಂಪ್ರದಾಯವಿದೆ. ನೆರೆಯ ಕೊಡಗು ಜಿಲ್ಲೆಯಲ್ಲಿ ಮಗುವಿನ ಜನನವನ್ನು ಸೂಚಿಸಲು ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ!

ಇನ್ನು ಚೀನಾ ದೇಶದಲ್ಲಿ ಮಗುವೊಂದು ಜನಿಸಿದಾದ, ಮಗುವಿನ ತಂದೆಯು ತನ್ನ ಅತ್ತೆ-ಮಾವಂದಿರಿಗೆ ದುಡ್ಡು ಮತ್ತು ವೈನ್ ಬಾಟಲ್ ಅನ್ನು ಕೊಡಬೇಕಂತೆ. ಕೆಂಪು ಬಣ್ಣ ಹಚ್ಚಿದ ಮೊಟ್ಟೆಗಳನ್ನು ಬಂಧು ಬಳಗಕ್ಕೆ ಹಂಚುವ ಪದ್ದತಿಯನ್ನು ಪಾಲಿಸುತ್ತಾರೆ. ಸಮಸಂಖ್ಯೆಯ ಮೊಟ್ಟೆಗಳು ಹೆಣ್ಣುಮಗುವನ್ನೂ ವಿಷಮ ಸಂಖ್ಯೆಯ ಮೊಟ್ಟೆಗಳು ಗಂಡುಮಗುವನ್ನೂ ಸೂಚಿಸುತ್ತವೆ!

 

 

ಕೊರಿಯಾ ದೇಶದಲ್ಲಿ ಮಗುವಿನ ಜನನವಾದ ನಂತರ, ಮನೆಯ ಬಾಗಿಲಿಗೆ ಒಂದು ಹುಲ್ಲಿನ ತೋರಣವನ್ನು ಕಟ್ಟುತ್ತಾರಂತೆ. ಆ ದಾರದಲ್ಲಿ  ಇದ್ದಿಲು ಮತ್ತು ಮೆಣಸಿನಕಾಯಿಯನ್ನು ಪೋಣಿಸಿದ್ದರೆ ಗಂಡುಮಗು ಜನಿಸಿತೆಂದೂ, ಇದ್ದಿಲು ಮತ್ತು ಪೈನ್ ಕಡ್ಡಿಯನ್ನು ಪೋಣಿಸಿದ್ದರೆ ಹೆಣ್ಣುಮಗುವಿನ ಆಗಮನವೆಂದೂ ಅರ್ಥವಂತೆ!

ಹಿಂದಿನ ಕಾಲದಲ್ಲಿ ಸುದ್ದಿಯನ್ನು ತಲಪಿಸಲು ನಡೆದುಕೊಂಡು ಹೋಗಬೇಕಿತ್ತು. ಹಾಗಾಗಿ ವಿಭಿನ್ನ ರೀತಿಯ ಪ್ರಾದೇಶಿಕ ಮತ್ತು ಸಾಂಪ್ರದಾಯಿಕ ಕಟ್ಟುಪಾಡುಗಳು ರೂಪುಗೊಂಡಿರಬಹುದು.  ಆಮೇಲೆ ಅಂಚೆ ಶುರುವಾಯಿತು. ತ್ವರಿತ ಸೇವೆ ಒದಗಿಸುತ್ತಿದ್ದ ಟೆಲಿಗ್ರಾಮ್ ಬಂದಿದ್ದೂ, ಹೋಗಿದ್ದೂ ಈಗ ಚರಿತ್ರೆಗೆ ಸೇರಿದೆ. ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಟೆಲೆಕ್ಸ್ , ಟೆಲೆಫ್ಯಾಕ್ಸ್ ಗಳೂ ಮೂಲೆಗುಂಪಾದುವು.

ಈಗ ಏನಿದ್ದರೂ ಇ-ಮೈಲ್, ಫೇಸ್ ಬುಕ್, ವಾಟ್ಸ್ ಆಪ್…ಇತ್ಯಾದಿಗಳ ಕಾಲ. ಕುಳಿತಲ್ಲಿಂದಲೇ ಅಂತರ್ಜಾಲದ ಮೂಲಕ ಪ್ರಪಂಚದ ಎಲ್ಲೆಡೆಗೂ ಕ್ಷಣಾರ್ಧದಲ್ಲಿ ಸುದ್ದಿ ತಲಪಿಸಬಲ್ಲ ವಿದ್ಯುನ್ಮಾನ ಆವಿಷ್ಕಾರಗಳು. ತಮಾಷೆಯೇನೆಂದರೆ ಇವು ನಿರಂತರ ಚಲನಶೀಲ. ಇವುಗಳು ತಮ್ಮ ಫೀಚರ್ಸ್ಸ ಅನ್ನು ತೀರ ತ್ವರಿತವಾಗಿ ಬದಲಿಸುತ್ತಾ ಹೋಗುವುದರಿಂದ ಬಳಕೆದಾರರಿಗೆ ಕೆಲವೊಮ್ಮೆ ತಬ್ಬಿಬ್ಬಾಗುತ್ತದೆ. ಇವುಗಳ ವಿವಿಧ ರೂಪಗಳು ನಮ್ಮನ್ನು ಸದಾ ‘ಅಪ್ ಡೇಟ್ ಆಗಿ ಇರಿ’ ಎಂದು ಎಚ್ಚರಿಸಿದಂತಾಗುತ್ತದೆ!

 ವಾವ್! ತಾಂತ್ರಿಕತೆಗೊಂದು ಸಲಾಮ್!

 

– ಹೇಮಮಾಲಾ.ಬಿ

6 Responses

  1. Ghouse says:

    I enjoyed reading this article. It made me remember those days when I had blessed with my children. Those moments are unforgettable. By reading this article, I understand that every part of the globe will celebrate these moments but, yes based on their different traditions and culture.

  2. Hema says:

    Thank you very much, Ghouse.

  3. Shruthi says:

    Very nice and informative article! Nice reading it:)

  4. VINAY KUMAR V says:

    ಸೂಪರ್ 🙂

  5. Krishnaveni Kidoor says:

    ತುಂಬಾ ಹಿಡಿಸಿತು ಈ ಬರಹ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: