ಸಂಸ್ಕೃತಿ ಮತ್ತು ಮಹಿಳೆ
ಸಂಸ್ಕೃತಿ ಎನ್ನುವುದು ಸಮಾಜದ ಎಲ್ಲ ಸಂಸ್ಥೆಗಳ್ಲಲೂ ಒಂದಲ್ಲ ಒಂದು ಬಗೆಯ ಲಿಂಗತಾರತಮ್ಯ ವ್ಯವಸ್ಥೆಯ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿದೆ. ಸಂಸ್ಕೃತಿ ಎನ್ನುವುದು ಒಂದು ಸಮರೂಪವಾದ ವ್ಯವಸ್ಥೆಯಲ್ಲ. ಸಂಸ್ಕೃತಿ ಎನ್ನುವುದು ಆಯಾ ಸಮಾಜದ ಒಟ್ಟು ಜನಜೀವನದ ಕ್ರಮವನ್ನೂ, ಮೌಲ್ಯಗಳನ್ನೂ, ಆಚರಣೆಗಳನ್ನೂಬಿಂಬಿಸುವಂಥ ಒಂದು ವ್ಯವಸ್ಥೆ. ಸಂಸ್ಕೃತಿಯಲ್ಲಿ ನಿರಂತರತೆಯೂ ಇದೆ ಬದಲಾವಣೆಯೂ ಇದೆ. ಕೆಲವು ಮೌಲ್ಯಗಳೂ, ಆಚರಣೆಗಳು, ಕಾಲಾತೀತವಾದುದು. ನಾಗರಿಕತೆಯ ಪ್ರಭಾವಕ್ಕೆ ಒಂದು ಸಂಸ್ಕೃತಿ ತನ್ನನ್ನು ತೆರೆದುಕೊಳ್ಳುತ್ತಾ ಹೋದ ಹಾಗೆ ಆ ಸಂಸ್ಕೃತಿಯ ಕೆಲವು ಅಂಶಗಳಲ್ಲಿ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರತಿ ಸಂಸ್ಕೃತಿಯೂ ಮಹಿಳೆಯರಿಗೆ ಆಯಾ ಸಂಸ್ಕೃತಿಯ ಪರಿಸರಕ್ಕೆ ಅನುಗುಣವಾಗಿ ಪಾತ್ರಗಳು ಹಾಗೂ ಜವಾಬ್ಧಾರಿಗಳನ್ನು ವಹಿಸುತ್ತದೆ. ಆಯಾ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಲಿಂಗವ್ಯವಸ್ಥೆಯ ಮೌಲ್ಯಗಳು ಹಾಗೂ ಸಾಂಸ್ಕೃತಿಕವಾಗಿ ಮಹಿಳೆಯರನ್ನು ಕುರಿತಂತೆ ತಳೆದಿರುವಂಥ ಧೋರಣೆಗಳು ಮಹಿಳೆಯರಿಗೆ ಸಂಸ್ಕೃತಿಯಲ್ಲಿ ಎಂಥ ಪರಿಸರವಿದೆ ಎಂಬುದನ್ನು ನಮಗೆ ತಿಳಿಸಿಕೊಡುತ್ತದೆ.
ಇನ್ನೂ ಶಿಕ್ಸಣ, ಲಿಂಗ ಬೇಧವನ್ನು ತೊಡೆದು ಹಾಕಲು ಅತ್ಯಂತ ಉಪಯುಕ್ತವಾದ ಸಾಧನ ಎನ್ನುವುದು ನಿಜವಾದರೂ ಈ ಶಿಕ್ಷಣ ವ್ಯವಸ್ಥೆಯಲ್ಲಿಯೇ ಲಿಂಗ ತಾರತಮ್ಯ ಹಾಸು ಹೊಕ್ಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಡುವಳಿಕೆ, ಶಿಕ್ಷಕರು ಲಿಂಗಸಂಬಂಧಿ ವಿಚಾರಗಳ ಬಗ್ಗೆ ತಳೆಯುವ ನಿಲುವುಗಳು, ಹೆಣ್ಣು ಗಂಡು ಮಕ್ಕಳಿಗೆ ದೊರೆಯುವ ವಿಭಿನ್ನ ಅವಕಾಶಗಳು, ಅವರ ಮೇಲೆ ಹೇರುವ ವಿಭಿನ್ನ ನಿಬಂಧನೆಗಳು, ಆಧುನಿಕತೆಯ ಮೌಲ್ಯಗಳನ್ನು ಬಿತ್ತುವ ಶಿಕ್ಷಣದಂಥ ಒಂದು ವ್ಯವಸ್ಥೆ ಕೂಡ ಸಾಂಪ್ರದಾಯಿಕ, ಸಾಂಸ್ಕೃತಿಕ ಸಂದರ್ಭಗಳ ಹಿಡಿತದಿಂದ ಹೊರ ಬಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಪ್ರತಿಯೊಂದು ಸಮಾಜದ್ಲಲೂ ವ್ಯಕ್ತಿಯ ಲಿಂಗ ಹಾಗೂ ವಯಸ್ಸಿನ ಆಧಾರದ ಮೇಲೆ ಪಾತ್ರ ಹಂಚಿಕೆಯನ್ನು ಮಾಡುವಂಥ ವ್ಯವಸ್ಥೆ ಜಾರಿಯಲ್ಲಿದೆ. ಮಹಿಳೆಯರು ತಮ್ಮ ಜೈವಿಕ ರಚನೆಯ ಕಾರಣದಿಂದಾಗಿ ಶಿಶುಜನನ, ಹಾಗೂ ಶಿಶುವಿನ ಲಾಲನೆ-ಪಾಲನೆಯ ಜವಾಬ್ಧಾರಿಗಳನ್ನು ವಹಿಸಿಕೊಳ್ಳುತ್ತಾರೆ. ಮಹಿಳೆಯರ ಸ್ಥಾನ-ಮಾನವನ್ನು ನಿರ್ಧರಿಸುವಲ್ಲಿ ಅವರ ಆರ್ಥಿಕ, ರಾಜಕೀಯ, ಸಾಮಾಜಿಕ ಅಂಶಗಳು ಕಾರಣವಾಗಿವೆ. ದೇಶದ ಯಾವ ಸಂಸ್ಕೃತಿಯನ್ನೇ ನೋಡಲಿ ಪುರುಷರಿಗೆ ಮೊದಲ ಸ್ಥಾನವಿದ್ದು ಮಹಿಳೆಯರಿಗೆ ನಂತರದ ಸ್ಥಾನವಿದೆ. ಮಹಿಳೆಯರ ಲೋಕದಲ್ಲೂ ಮಹಿಳೆಯರ ಸ್ಥಾನ-ಮಾನ ಏಕ ರೂಪವಾಗಿಲ್ಲ. ಮಹಿಳೆಯರ ಸ್ಥಾನಮಾನಗಳು ಆಯಾಜಾತಿ, ಸ್ತರ, ಸಮುದಾಯಗಳಿಗೆ ಅನುಸಾರವಾಗಿ ಹಂಚಿ ಹೋಗಿದೆ. ಕುಟುಂಬದಲ್ಲಿ ಗಂಡು ಮಕ್ಕಳಿಗೆ ನೀಡುವ ಅತಿ ಪ್ರಾಶಸ್ತ್ಯ,ಹೆಣ್ಣು-ಗಂಡು ಮಕ್ಕಳಿಗೆ ಸಂಪನ್ಮೂಲಗಳಲ್ಲಿ ಹಂಚಿಕೆಯಲ್ಲಿ ಕಂಡುಬರುವ ತಾರತಮ್ಯ, ಸ್ತ್ರೀ ಸದಸ್ಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯದ ವಿವಿಧ ಮುಖಗಳನ್ನು ಕಾಣುತ್ತೇವೆ.
ಒಟ್ಟಿನಲ್ಲಿ ಸಂಸ್ಕೃತಿ ಪರಿಸರ ಮಹಿಳೆಯರ ಸ್ಥಾನ, ಅವರಿಗಿರುವ ಅಥವಾ ಇಲ್ಲದಿರುವ ಅಭಿವೃದ್ಧಿ ಅವಕಾಶಗಳು ಹಾಗೂ ಅವರ ಜೀವನದ ವೈಖರಿ ಇದೇ ಮುಂತಾದ ಅಂಶಗಳನ್ನು ಬಹುಮಟ್ಟಿಗೆ ಪ್ರಭಾವಿಸುತ್ತವೆ. ಸಂಸ್ಕೃತಿಯಾಗಲಿ, ಮಹಿಳೆಯರಾಗಲಿ ಒಂದು ಸಮರೂಪವಾದ ಸಮಷ್ಟಿಯಲ್ಲ. ಹಾಗೆಯೇ ಸಂಸ್ಕೃತಿ ಒಂದು ತಟಸ್ಥವಾದ ವ್ಯವಸ್ಥೆಯೂ ಅಲ್ಲ. ಸಾಂಸ್ಕೃತಿಕ ಪರಿಸರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಈ ಬದಲಾವಣೆ ಮಹಿಳೆಯರಿಗೆ ಪೂರಕವಾಗಿರಬೇಕೇ ಹೊರತು ಕಟ್ಟುಪಾಡುಗಳಿಗೆ ಸೀಮಿತವಾಗಿರಬಾರದು. ಸಂಸ್ಕೃತಿ ಎಂಬ ಹೆಸರಿನಲ್ಲಿ ಮಹಿಳೆಯರನ್ನು ಬಂಧಿಸಬಾರದು.
-ಡಾ.ಶಾಂತಲಾ ಹೆಗಡೆ
ಲೇಖನ ಚೆನ್ನಾಗಿದೆ. ಲೇಖನda ವಿಷಯ ಬಹಳ ಗಂಭೀರದ್ದಾಗಿದೆ. ಲಿಂಗಭೇದ ಒಂದು ನಿಸರ್ಗ ನಿಯಮ. ಆದರೆ ಲಿಂಗ ತಾರತಮ್ಯ ಅನಾದಿಕಾಲದಿಂದ ಮುಂದುವರಿದು ಬಂದಿರುವುದರಿಂದ ವೊಮ್ಮೆಲೆ ಬಗೆಹರಿಸುವುದು ಕಷ್ಟ. ಅದಕ್ಕಾಗಿ ಬಾಲ್ಯದಿಂದ ಬದಲಾವಣೆಯ ಅಗತ್ಯವಿದೆ. ಶಾಲೆಗಳಲ್ಲಿ ಪ್ರಾಥಮಿಕದ ಹಂತದಿಂದಲೇ ಈ ತರಹದ ಶಿಕ್ಷಣ ಪದ್ಧತಿಯ ಅಗತ್ಯವಿದೆ. ಆದಾಗ್ಯೂ, ಲಿಂಗತಾರತಮ್ಯ ಬಗಳಷ್ಟು ಸುಧಾರಿಸಿದೆ. ಈಗ ಸೇನಾ ಮುಖ್ಯಸ್ಥ ಹುದ್ದೆಯವರೆಗೆ ಮಹಿಳೆ ಮುಂದುವರಿದಿದ್ದಾಳೆ. ಅದರೆ ನಿಸರ್ಗ ನಿಯಮಗಳನ್ನು ತಪ್ಪಿಸುವ ಹಾಗಿಲ್ಲ. ಏಕೆಂದರೆ, ಈ ತಾರತಮ್ಯ ಕೇವಲ ಮಾನವರಿಗೆ ಸೀಮಿತವಾಗಿರದೆ, ಪ್ರಾಣಿಗಳು, ಪಕ್ಷಿಗಳು ಹೀಗೆ ಎಲ್ಲಾ ಜೀವ ಜಂತುಗಳಲ್ಲಿಯೂ ಕಂಡುಬರುತ್ತದೆ.
Excellent
ಅಭಿನಂದನೆ ಶಾಂತಲಾ..
ಲೋಕದ ಡೊಂಕನ್ನು ತಿದ್ದುವವರಾರು?
ಚೆನ್ನಾಗಿದೆ ಮೇಡಂ ಬರಹ
ಸಮಕಾಲೀನ ಸಮಸ್ಯೆ ಬಗೆಗಿನ ಬರಹ ಚೆನ್ನಾಗಿದೆ.