ಹೆಣ್ಣಲ್ಲವೇ ನಮ್ಮನೆಲ್ಲ ಪೊರೆವ ತಾಯಿ
ಆ ಬಸ್ಸು ಒಂದು ಐದು ನಿಮಿಷ ಅಲ್ಲಿಯೇ ನಿಂತಿತ್ತು.ಬೇರೆ ಬರುವ ಮಕ್ಕಳಿಗಾಗಿ ಕಾಯುತ್ತಿರಬಹುದು ಅಂದುಕೊಂಡೆ.ಬಸ್ಸಿನೊಳಗೆ ಬರಿಯ ಮುಗ್ಧತೆಯದ್ದೇ ಓಡಾಟ ಕಂಡೆ. ಬೆನ್ನಿನಿಂದ ಬ್ಯಾಗನ್ನು ಕೆಳಗಿಳಿಸದೆ ಹೊರಜಗತ್ತನ್ನು ಕಿಟಿಕಿಯಾಚೆ ದಿಟ್ಟಿಸಿ ನೋಡುವ ಮಗು(ವರುಷ ಎಂಟು ಹತ್ತು ಇದ್ದರೂ ನಾನು ಅವರನ್ನು ಮಗು ಎಂದೇ ಹೇಳುತ್ತೇನೆ.ಕಾರಣ ಅವರಲ್ಲಿ ಇರುವ ಮುಗ್ಧತೆ), ಬೆರಳಿನಿಂದ ತಲೆಯನ್ನು ಮುಟ್ಟಿ ಮುಟ್ಟಿ ನೋಡುವ ಇನ್ನೊಂದು ಕಂದ, ತಣ್ಣನೆಗಾಳಿಗೆ ಹಾಗೆಯೇ ಸಣ್ಣಕೆ ನಿದ್ದೆ ಹೋದ ಮಗು, ಕೆಳಗೊಮ್ಮೆ ಬಗ್ಗಿ ನೋಡಿ ಅದೇನೋ ಹೆಕ್ಕಿಕೊಂಡ ಕೂಸು, ಆ ಶಾಲೆಯ ಟೀಚರ್(ಇರಬಹುದು) ಸಮಾಧಾನ ಪಡಿಸುತ್ತಿರುವ ಅಳುತ್ತಿರುವ ಮಗು, ಅಕ್ಕ ಪಕ್ಕ ಕೂತು ಕಣ್ಣಲ್ಲೇ ಸಂಭಾಷಿಸುತ್ತಿರುವ ಮುದ್ದು ಮಕ್ಕಳು, ಬಸ್ಸಿನ ಸ್ಟಿಯರಿಂಗ್ ಮೇಲೆ ಕೈ ಇಟ್ಟು ಇನ್ನೆಲ್ಲೋ ಹೊರಗೆ ದಿಟ್ಟಿಸುತ್ತಿರುವ ಬಸ್ ಡ್ರೈವರ್…..
ಹೀಗೆ ನನ್ನ ಕಣ್ಣು ಬಸ್ಸಿನೊಳಗೆ ದೃಷ್ಟಿಹಾಯಿಸಿಕೊಂಡು, ಮನಸಿನೊಳಗೆ ಸಾವಿರ ಯೋಚನೆಗಳು ನುಗ್ಗಿಬರುತ್ತಿರುವಾಗ ಮಧ್ಯವಯಸ್ಸಿನ ಅಪ್ಪ ಅಮ್ಮ ಒಂದು ಮಗು(ಏಳೆಂಟು ವರುಷದ ಪ್ರಾಯ ಇರಬಹುದು)ವನ್ನು ಕೈ ಕೈ ಹಿಡಿದು ,ಅಮ್ಮ ಇನ್ನೊಂದು ಕೈಯಲ್ಲಿ ಮಗುವಿನ ಬ್ಯಾಗ್ ಹಿಡಿದುಕೊಂಡು ಧಾವಂತದಲ್ಲಿ ಬಸ್ ಬಳಿ ಬಂದು ,ಇನ್ನೇನು ಮಗುವನ್ನು ಬಸ್ಸಿಗೆ ಹತ್ತಿಸಬೇಕು ಅನ್ನುವಷ್ಟರಲ್ಲಿ,ಆ ಮಗು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿತು.
ಅದೊಂದು ಶಾಲೆ.ಶಾಲೆ ಬಿಡುವ ಹೊತ್ತು. ಅಪ್ಪ ಅಮ್ಮಂದಿರೆಲ್ಲ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯ. ಅಲ್ಲೊಬ್ಬಾಕೆ ತಾಯಿ ಕಂಕುಳಲ್ಲಿ ಒಬ್ಬ ಪುಟ್ಟ ಹುಡುಗನನ್ನು ಎತ್ತಿಕೊಂಡು ಬರುತ್ತಿದ್ದಳು.ಆ ಶಾಲೆಯಿಂದ ಬಂದ ತನ್ನ ಮಗಳನ್ನು ಕರೆದುಕೊಂಡು ಹೋಗುತ್ತಿದ್ದಳು.ಸ್ವಲ್ಪ ದೂರ ಹೋದ ಮೇಲೆ ಕಂಕುಳಲ್ಲಿದ್ದ ಹುಡುಗನನ್ನು (ಮಗ) ಕೆಳಗಿಳಿಸಿ,”ನಡೀ ನಡೀ,ನೀನು ನಡೆಯದೇ ನಡೆಯದೇ ಹಿಂಗಾಗಿದ್ದಿ.ನಡಿ”ಅಂತ ಗದರುತ್ತಾ ನಡೆಯುತ್ತಿದ್ದಾಗ ಆ ಮಗು ಅತ್ತುಕೊಂಡೇ ,”ಎತ್ತು ಎತ್ತು” ಅಂತಲೇ ಕುಂಟುಕಾಲಿನಲ್ಲಿ ಅಮ್ಮನನ್ನು ಆವರಿಸಿಕೊಂಡುಬಿಟ್ಟ. ಮತ್ತಷ್ಟು ಗದರಿದಳು.ಕೂಗಿದಳು.ಕೊನೆಗೆ ಒಂದು ಏಟನ್ನೇ ಕೊಟ್ಟಳು.ಊಹೂ…ಆ ಪುಟ್ಟ ಹುಡುಗ ಬೆನ್ನು ಉಜ್ಜಿಕೊಂಡೇ,
ನಾನೂ ಒಬ್ಬ ತಾಯಿ, ಕಂಬಕ್ಕೊರಗಿ ಕಣ್ಣೊರಿಸಿದವಳೂ ತಾಯಿ, ಮಗುವಿಗೆ ಸಣ್ಣ ಪೆಟ್ಟುಕೊಟ್ಟು ಗೊಣಗಿಕೊಂಡು ಎತ್ತಿದವಳೂ ತಾಯಿ.ಆ ಅಮ್ಮಂದಿರಿಗೆ ನನ್ನ ಪರಿಚಯವಿಲ್ಲ.ನನಗೂ ಅವರ ಪರಿಚಯವಿರಲಿಲ್ಲ.ಅಲ್ಲಿ ಮಾತೃತ್ವ ಮಾತ್ರ ಮೂವರಿಗೂ ಚಿರಪರಿಚಿತವಾಗಿತ್ತು.
ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಎಂದೇ ಮಾತನಾಡುವ ಈ ಕಾಲಘಟ್ಟದಲ್ಲಿ ಇದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳದೆ ಬದುಕಿನ ಗುರಿ ಕೇವಲ ಕಣ್ಣ ಮುಂದಿರುವ ಮಗುವಿನ ಭವಿಷ್ಯ ವೆಂದೇ ತಿಳಿದಿರುವ ಇಂತಹ ತ್ಯಾಗಮಯಿ ಮಾತೃಕೆಯರಿಗೆ ನನ್ನದೊಂದು ನಮನ. ನಮ್ಮ ಸುತ್ತಲಿನ ಅಷ್ಟೂ ಇಂತಹ ಅಮ್ಮಂದಿರಿಗೆ ಹಾಗೆಯೇ ಇಂತಹ ಮಕ್ಕಳನ್ನ ನೋಡಿಕೊಳ್ಳುವ,ಸಲಹುವ ಪ್ರತಿಯೊಬ್ಬ ಹೆಣ್ಣುಮಗಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
ಇಂತಹ ಅಮ್ಮಂದಿರಿಗೆ ಸಮಾಜ, ಮನೆಮಂದಿ, ಕುಟುಂಬಿಕರು, ಸಂಬಂಧಿಕರು, ಸ್ನೇಹಿತರು ಹೀಗೆ ಎಲ್ಲರ ಸಹಾಯ ಬೇಕು, ಮೆಚ್ಚುಗೆ ಬೇಕು.ಬರಿಯ ಕನಿಕರ ತೋರಿಸಿದರೆ ಆಗದು.ಕೈಲಾದ ಸಹಾಯ ಮಾಡಬೇಕು.ಅವರಲ್ಲಿ ಜೀವನೋತ್ಸಾಹ ತುಂಬಬೇಕು,ಬದುಕು ಚೆಂದವಿದೆ ಅನ್ನುವುದನ್ನು ತೋರಿಸಬೇಕು,ಕುಗ್ಗದಂತೆ ನೋಡಿಕೊಳ್ಳಬೇಕು.ಆ ನೋಡಿಕೊಳ್ಳುವ ಕೆಲಸ ಮಗುವಿನ ಅಮ್ಮನಿಗೇ ಸೀಮಿತವೆಂದು ತಿಳಿಯದೆ ಸಾಧ್ಯವಾದ ಸಹಾಯ ಮಾಡಬೇಕು.ಯಾಕೆಂದರೆ, ಆ ಅಮ್ಮನೂ ಅನೇಕ ಕನಸು ಕಟ್ಟಿಕೊಂಡಾಕೆ, ತ್ಯಾಗಮಾಡಿದಾಕೆ, ಆಕೆಯೂ ಅವಳ ಅಪ್ಪ ಅಮ್ಮನ ಮುದ್ದಿನ ಮಗಳೇ ಆಗಿದ್ದವಳು,ಇರುವವಳು….ಅಲ್ವಾ? ಯೋಚಿಸಿ.
(ಇದು ಕತೆಯಲ್ಲ..ಕಂಡ ಬದುಕು)
ನಿಜ.ಯಶಸ್ವಿ ಅಮ್ಮನಾಗುವುದು ಮಹಿಳೆಯರ ಜೀವನದ ಅತಿ ದೊಡ್ಡ ರಿಯಾಲಿಟಿ ಟಾಸ್ಕ್…ಚೆಂದದ ಬರಹ
Thank you
ಸಕಾಲಿಕ ಸುಂದರ ಬರಹ
ಅಳು ಬರ್ತಿದೆ. ಆ ಅಮ್ಮಂದಿರ ಸಾಧನೆಯನ್ನು ಗುರುತಿಸಿದ ನಿಮ್ಮ ಮನಸು, ಹೃದಯಕ್ಕೊಂದು ಸಲಾಂ. ಬಹಳ ಚೆನ್ನಾಗಿ ಬರ್ದಿದ್ದೀರಿ
ಸಹಜ ಘಟನೆ, ಮನ ಕಲಕುವಂತಹ ದೆ,ಅಮ್ಮಂದಿರ ದಿನ ಪ್ರತ್ಯೇಕ ಇದೆಯಲ್ಲವೇ