ಉತ್ಸವದಲ್ಲಿ ಕಲ್ಲಿನ ಮೆರುಗು ..

Spread the love
Share Button
 

ತಂತ್ರಜ್ಞಾನಗಳ ಭರಾಟೆ ಮುಂದುವರಿಯುತ್ತಿದ್ದಂತೆ ಹಿರಿಯರು ಬಳಸುತ್ತಿದ್ದ ನೈಸರ್ಗಿಕ ವಸ್ತುಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಲ್ಲಿಯೂ ಇಂದು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಾಮಾಗ್ರಿಗಳು ಕಾಣಸಿಗುವುದು ಅಪರೂಪವಾಗಿದೆ. ಆದರೆ  ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕಲ್ಲಿನ ಕೆತ್ತನೆಯಿಂದ ಮಾಡಿದ ಮನೆಯಲ್ಲಿ ದಿನನಿತ್ಯದ ಕೆಲಸಗಳಿಗೆ ಬಳಸುವ ಅಳಿವಿನಂಚಿನಲ್ಲಿರುವ ವಿವಿಧ ಸಾಮಾಗ್ರಿಗಳು ಗಮನ ಸೆಳೆದವು.

ಲಕ್ಷದೀಪೋತ್ಸವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬೇಲೂರಿನ ಮಂಜುನಾಥ ಎಂಬವರು ಹಾಗೂ ಅವರ ಕುಟುಂಬಸ್ಥರು ಕಲ್ಲಿನಿಂದ ಸಣ್ಣ ಗಾತ್ರದಲ್ಲಿ ತಯಾರಿಸಿ ಧಾನ್ಯಗಳನ್ನು ಕುಟ್ಟಿ ಪುಡಿ ಮಾಡುವ ಕಲ್ಲು, ರಾಗಿ, ಅಕ್ಕಿ ಬೀಸುವ ಕಲ್ಲು, ಕಾವಲಿ, ಚಪಾತಿ ತಯಾರಿಸುವ ಕಲ್ಲನ್ನು ಮಾರಾಟಕ್ಕೆ ಇಟ್ಟಿದ್ದರು.

ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಇವರು ಪ್ರತಿ ವರ್ಷ ದೀಪೋತ್ಸವ ಮತ್ತು ಶಿವರಾತ್ರಿ ಸಂದರ್ಭದಲ್ಲಿ  ಬೇಲೂರಿನಿಂದ ಧರ್ಮಸ್ಥಳಕ್ಕೆ ಬಂದು ತಾವೇ ಕಲ್ಲನ್ನು ಕೆತ್ತಿ ತಯಾರಿಸಿದ ವಿವಿಧ ವಿನ್ಯಾಸಗಳ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಾರೆ. ಧಾನ್ಯಗಳನ್ನು ಪುಡಿಮಾಡಲು ಮಿಕ್ಸಿ ಇದ್ದರೂ ತುಂಬಾ ಜನ ಇದನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ  ಆರೊಗ್ಯವೂ ವೃದ್ಧಿಸುತ್ತದೆ. ನಮ್ಮ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ ಎಂದು ಮಾಲೀಕ ಮಂಜುನಾಥ ಅಭಿಪ್ರಾಯಪಟ್ಟರು.

ಇಷ್ಟೇ ಅಲ್ಲದೆ ದೀಪ, ಶಿವಲಿಂಗ, ಗಣಪತಿ ಮತ್ತು ಶಿವನ ವಿಗ್ರಹಗಳು, ನಂದಿ, ಆನೆ, ದೇವರ ಗುಡಿ ಹೀಗೆ ಬಗೆಬಗೆಯ ಕಲ್ಲುಕೆತ್ತನೆ ವಿನ್ಯಾಸದ ದೀಪಗಳನ್ನು ಮಾರಾಟಕಿಟ್ಟಿದ್ದರು. ಶೋಕೇಸ್‌ನಲ್ಲಿ ಇಡಬಹುದಾದ ಗಾತ್ರದ ಈ ಮನೆಯ ಸಾಮಾಗ್ರಿಗಳು ಜನರನ್ನು ಆಕರ್ಷಿಸುತ್ತಿದ್ದು, ದೀಪೊತ್ಸವದ ಮೆರುಗು ಹೆಚ್ಚಿಸಿವೆ.
.

ವರದಿ:ರಾಜೇಶ್ವರಿ ಬೆಳಾಲು
ಚಿತ್ರ: ಸ್ವಸ್ತಿಕ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ ಕಾಲೇಜು, ಉಜಿರೆ
.

1 Response

  1. ಜನರು ಪ್ರಾಕೃತಿಕ ವಸ್ತುಗಳಿಗೆ ಹತ್ತರವಾಗುತ್ತಿರುವುದು ಮುದನೀಡುವ ವಿಷಯ.
    ಬೀಸುವಕಲ್ಲೂ ಇದೆ ಎಂದಿರಲ್ಲ, ತುಂಬಾ ಖುಷಿಯಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: