ರಾಗಿ ಸೂಪ್

Share Button

ragi-soup

 

ಚಳಿಗಾಲ ಆರಂಭವಾಗಿದೆ. ಬಿಸಿಬಿಸಿಯಾಗಿ, ರುಚಿರುಚಿಯಾಗಿ, ಆರೋಗ್ಯಕ್ಕೆ ಹಿತಕರವಾದ ಸೂಪ್ ಅನ್ನು ಸವಿಯಲು ಸಕಾಲ.  ‘ರಾಗಿ ಸೂಪ್ ‘ ನ ತಯಾರಿಕಾ ವಿಧಾನ ಇಲ್ಲಿದೆ :

  1. ಒಂದು ಕ್ಯಾರೆಟ್, 5-6 ಬೀನ್ಸ್ ಚಿಕ್ಕ ಕ್ಯಾಬೇಜಿನ ಹೋಳು, ಒಂದು ಈರುಳ್ಳಿ, ಒಂದು ಹಸಿರುಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು..ಇವಿಷ್ಟನ್ನು ಚಿಕ್ಕದಾಗಿ ಹೆಚ್ಚಿ ಬಾಣಲೆಯಲ್ಲಿ ಹುರಿಯಿರಿ.
  2. ಬೇಕೆನಿಸಿದರೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪವನ್ನು ಸೇರಿಸಿಕೊಳ್ಳಬಹುದು.
  3. ಎರಡು ಚಮಚ ರಾಗಿಹಿಟ್ಟನ್ನು ನಾಲ್ಕುಲೋಟ ನೀರಿನಲ್ಲಿ ಗಂಟುಗಳಿಲ್ಲದಂತೆ ಕಲೆಸಿ, ಬೆಂದ ತರಕಾರಿಗೆ ಸೇರಿಸಿ.
  4. ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ, ಸೌಟಿನಲ್ಲಿ ಕೈಯಾಡಿಸುತ್ತಾ ಕುದಿಸಿ .
  5. ಅವರವರ ಆಯ್ಕೆಗೆ ತಕ್ಕಂತೆ ಬೇಯಿಸಿದ ಬಟಾಣಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನೂ ಸೇರಿಸಿಕೊಳ್ಳಬಹುದು.

ಬಿಸಿಬಿಸಿಯಾದ ರಾಗಿ ಸೂಪ್ ಸವಿಯಲು ಸಿದ್ಧವಾಗುತ್ತದೆ.

 

 – ಭಾರತಿ. ಎಂ.ಎನ್ , ಮೈಸೂರು

 

4 Responses

  1. savithri s bhat says:

    ವಾಹ್ ಚುಮು ಚುಮು ಚಳಿಗೆ ಘಮ ಘಮ ರಾಗಿ ಸೂಪ್ ಸೂಪರ್

  2. ನವೀನ್ ಮಧುಗಿರಿ says:

    ಥ್ಯಾಂಕ್ಯೂ .. ನಮ್ಮನೇಲಿ ಮಾಡ್ತೀವಿ..

  3. Lathika Bhat says:

    ನಾನು ಮಾಡಿ ನೋಡ್ತೇನೆ.

  4. ರುಕ್ಮಿಣಿಮಾಲಾ says:

    ಭಾರತಿಯವರೇ
    ಈ ಸೂಪು ಸವಿಯಲು ನಿಮ್ಮ ಮನೆಗೆ ಬರುವೆ .

Leave a Reply to savithri s bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: