ತೂತು ಕೈಗಳ ಜಗವೀಗ..

Share Button

 Nagesha MN

 

Hole in handಕಾಸು ನಿಲ್ಲದ ಕೈ ಸ್ಟೋರಿ
ತತಾಂತೂತು ಜಾಲರಿ
ಸೊನ್ನೆ ದಾಟಿದರೆ ಖಾತೆ
ಬರಿ ಖರ್ಚಾಗುವ ಮಾತೆ ||

ಸೊನ್ನೆಯಿಂದಿಳಿದರು ಕೆಳಗ
ಕ್ರೆಡಿಟ್ಟು ಕಾರ್ಡುಗಳ ಬಳಗ
ಹುರಿದುಂಬಿಸುವ ವ್ಯಾಪಾರ
ಸರಕಿನಂತೆ ಸಾಲವೂ ಅಪಾರ ||

ಸರಿಯೊ ತಪ್ಪೊ ಭರದಿ ಸರತಿ
ಅಗ್ಗ ಕೊಳ್ಳಲೇ ಸರದಿಗೆ ಭರ್ತಿ
ಸಾಲವಾದರು ಮೃಷ್ಟಾನ್ನ ಭೋಜನ
ತೀರಿಸಿದರಾಯ್ತು ನಾಳೆ ನೋಡೋಣ ||

ಸಾಲ ತಂದಾದರೂ ತುಪ್ಪ ತಿನ್ನುವ ಕಾಲ
ನಮ್ಮದಾದರೆ ಸಾಕೇನು ಉಳಿಸಬೇಕಿಲ್ಲ
ಪೀಳಿಗೆಗೆ ಕಾಪಿಡುವ ಹಳೆ ಜಮಾನ ಬೇಡ
ಬದುಕಿರುವವರೆಗೆ ನೀ ತಿನ್ನುವುದ ನೋಡಾ ||

ಕೊಡುತಾರೆ ಸಂಬಳ ಕಣ್ಬಾಯಿ ಬಿಡುವಂತೆ
ಬೆಲೆಯೇರಿಸಿದ ಸರಕು ಕಚ್ಚಿದ್ದರಿವಾಗದಂತೆ
ಸಾವಿರಗಟ್ಟಲೆ ಬಂದೂ ತಿಂಗಳ ಕೊನೆ ಗೋತ
ತುದಿಗಳೆಟುಕಿಸೆ ತೂತು ಕೈಯಲ್ಲೆ ತರ ದ್ಯೂತ ||

– ನಾಗೇಶ ಮೈಸೂರು

 

 

6 Responses

  1. Rama MV says:

    Nice composition by Mr nagesh

  2. Vasanth Shenoy says:

    Nice

  3. Sneha Prasanna says:

    Very nice…

  4. ಥ್ಯಾಂಕ್ಸ್ 🙂

Leave a Reply to nagesha mysore Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: