ನವಮ ಸ್ಕಂದ – ಅಧ್ಯಾಯ -3
ಶ್ರೀರಾಮ ಕಥಾ – 3
ಶ್ರೀರಾಮಲೋಕ ಜೀವಿತಾಚರಣೆ
ಮನುಕುಲಕ್ಕೆಲ್ಲಾ ಮಾದರಿ
ಸಕಲ ಲೋಕಕ್ಕೊಂದು ಆದರ್ಶ
ಲೋಕಜೀವಿತದಲಿ
ಮಗ, ಸಹೋದರ, ತಂದೆ
ಪತ್ನಿ, ಸ್ನೇಹಿತ, ರಾಜ, ಶತ್ರು
ಪ್ರಜೆಗಳೆಲ್ಲರ ಜೊತೆ ನಡೆದುಕೊಂಡ ಪರಿ
ಎಲ್ಲರ ಲೋಕಜೀವಿತವ ಹಸನಾಗಿಪ ಗುಣಧರ್ಮ
ಅದಕೆ ರಾಮಕಥೆ, ರಾಮಾಯಣ ನಾಮ್ಮೆಲ್ಲರಿಗೆ ದಾರಿದೀಪ
ಮಹಾವಿಷ್ಣುವಿನವತಾರಿಯಾಗಿಯೂ
ಮಾನವ ಸಹಜ ಗುಣಗಳ ಪ್ರತಿಪಾದಿಸುತ
ರಜಕನೊಬ್ಬನ ಕಟುನುಡಿಗಳಿಗೆ
ಸ್ಪಂದಿಸುತ, ಎಲ್ಲ ಬಲ್ಲವನಾದರೂ
ಗರ್ಭಿಣಿ ಸೀತೆಯ ತೊರೆದುದು
ವಿಪರ್ಯಾಸವೆನಿಸಿದರೂ, ರಾಜ ಪ್ರಜೆಯ
ಸಂಬಂಧಕ್ಕೊಂದು ಹೊಸ ಆಯಾಮ
ವಾಲ್ಮೀಕಿ ಆಶ್ರಮದಲಿ ಜನಿಸಿದ
ಸೂರ್ಯವಂಶದೀಪಕರಾದ
ಶ್ರೀರಾಮ ಸಂತಾನ ಕುಶ ಲವ
ರಾಮನ ಅಶ್ವಮೇಧಾಶ್ವವ ಬಂಧಿಸಿ
ಯುದ್ಧದಲಿ
ರಾಮ ಲಕ್ಷ್ಮಣ ಶತೃಘ್ನ ಭರತರ ಸೋಲಿಸಿ
ವಾಲ್ಮೀಕಿ ಮಹರ್ಷಿಗಳಾಣತಿಯಂತೆ
ತಂದೆ ಶ್ರೀರಾಮನ ಸೇರಿದರೂ
ಮಾತೆ ಸೀತೆ ಅಶ್ವಮೇಧಯಾಗದ
ಸಭಾಸಮ್ಮುಖದಲಿ ತನ್ನ ಪಾತಿವ್ರತ್ಯ ನಿಷ್ಠೆಯ
ಪ್ರಮಾಣಿಸಬೇಕೆಂಬ ನುಡಿಕೇಳಿ
ಅವಮಾನಿತಳಾಗಿ
ಶ್ರೀರಾಮ ಪಾದಗಳಲ್ಲೇ ತನ್ನ ನಿಷ್ಠೆ
ಎಂದು ಮೂರು ಬಾರಿ ನುಡಿದು, ಆ ಸಮಯದಿ
ಪ್ರತ್ಯಕ್ಷಳಾದ ಭೂದೇವಿಯ ಉದರವ ಪ್ರವೇಶಿಸಿದಳು
ವಿಷ್ಣು ಅವತಾರಿ ಶ್ರೀರಾಮ ಸಾಮಾನ್ಯ ನರನಂತೆ
ಅಪಾರ ದುಃಖವನನುಭವಿಸುತ
ಬ್ರಹ್ಮಚರ್ಯನಿಷ್ಠಯಿಂದ ಸಹಸ್ರಾರು
ವರುಷಗಳ ರಾಜ್ಯವಾಳಿದ
ಶ್ರೀರಾಮ ಕಥೆ, ಮನುಕುಲಕ್ಕೊಂದು
ಆದರ್ಶ ಕಥೆ
ರಾಮ ನಮ್ಮೆಲ್ಲರ ಆದರ್ಶ ಪುರುಷ
ಇಂದಿಗೂ, ಎಂದೆಂದಿಗೂ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43241
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಬಹಳ ಚೆನ್ನಾಗಿ ಸರಳವಾಗಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ..ಧನ್ಯವಾದಗಳು ಸಾರ್
ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ವಂದನೆಗಳು.
ಅತ್ಯಂತ ಸೂಕ್ತವಾದ ಚಿತ್ರದೊಂದಿಗೆ ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.
ರಾಮಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿರುವ ಪರಿ ಸೊಗಸಾಗಿದೆ.
ಚೆನ್ನಾಗಿದೆ
ಎಂದೆಂದಿಗೂ ಆದರ್ಶ ಪುರುಷನೆನಿಸಿದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಕುರಿತು ಮೂಡಿಬಂದ ಕಾವ್ಯ ಭಾಗವತ ಚೆನ್ನಾಗಿದೆ ಸರ್.
ಪ್ರತಿ ವಾರದ ಪಾರಾಯಣ ಸರ್ ನನಗಿದು
ಧನ್ಯವಾದಗಳು, ನಿಮ್ಮ ಎಣೆಯಿಲ್ಲದ ಆಸಕ್ತಿಗೆ ಮತ್ತು ಬರೆವ ಶಕ್ತಿಗೆ
ನಮನಗಳು, ಹಿರಿಯರು ನೀವು, ಪೂಜ್ಯರು