‘ವೆನಿಲ್ಲಾ’ ಈಗ ಏನಿಲ್ಲಾ…
ಐಸ್ ಕ್ರೀಂಗಳಲ್ಲಿ ಹಲವಾರು ಸ್ವಾದಗಳು ಇವೆಯಾದರೂ ಇಂದಿಗೂ ಹಲವಾರು ಮಂದಿಯ ಪ್ರಥಮ ಆಯ್ಕೆ ‘ವೆನಿಲ್ಲಾ ಐಸ್ ಕ್ರೀಂ’ ಆಗಿರುತ್ತದೆ. ಸಂಸ್ಕರಿತ ಆಹಾರಗಳಾದ ಕೇಕ್, ಪುಡ್ಡಿಂಗ್, ಐಸ್ ಕ್ರೀಂ, ಕಸ್ಟಾರ್ಡ್ ಇತ್ಯಾದಿಗಳಿಗೆ ರುಚಿ ಮತ್ತು ಸುವಾಸನೆ ಕೊಡಲು ವೆನಿಲ್ಲಾ ಎಸ್ಸೆನ್ಸ್ ಬೇಕಾಗುತ್ತದೆ. ವೆನಿಲ್ಲಾವನ್ನು ಸುಗಂಧವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.
ವೆನಿಲ್ಲಾ ವಿದೇಶೀ ಮೂಲದ ಬೆಳೆ. ಸುಮಾರು 10 ವರುಷಗಳ ಹಿಂದೆ, ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಕಂಗೊಳಿಸಿ, ಕೃಷಿಕರಲ್ಲಿ ವಿಪರೀತ ಆಸಕ್ತಿ ಮೂಡಿಸಿ, ಲಾಭದ ನಿರೀಕ್ಷೆಯನ್ನು ಹುಟ್ಟಿಸಿ, ಪ್ರಸಿದ್ಧಿಗೆ ಬಂದಷ್ಟೇ ವೇಗವಾಗಿ ‘ವೆನಿಲ್ಲಾ’ ಈಗ ಏನಿಲ್ಲಾ… ಎಂಬಂತೆ ನೇಪಥ್ಯಕ್ಕೆ ಸರಿದ ಬೆಳೆ. ಈಗಲೂ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುತ್ತುಮುತ್ತಲಿನ ಕೆಲವು ಅಡಿಕೆ ತೋಟಗಳಲ್ಲಿ ವೆನಿಲ್ಲಾ ಬಳ್ಳಿಗಳನ್ನು ಕಾಣಬಹುದು.
ವೆನಿಲ್ಲಾ ಬಹುವಾರ್ಷಿಕ ಬಳ್ಳಿಯಾಗಿದೆ. ಇದಕ್ಕೆ ಆಧಾರ ಗಿಡ-ಮರಗಳು ಬೇಕಾಗಿರುವುದರಿಂದ ರೈತರು ಅಡಿಕೆ, ತೆಂಗು, ಕಾಫಿ, ಕೊಕ್ಕೊ ಮುಂತಾದ ಬೆಳೆಗಳೊಂದಿಗೆ ಉಪಬೆಳೆಯಾಗಿ ಇರುತ್ತದೆ. ವೆನಿಲ್ಲಾದ ಎಲೆಗಳು ದಪ್ಪವಾಗಿದ್ದು, ದಟ್ಟ ಹಸಿರಾಗಿ ದಪ್ಪವಾಗಿರುತ್ತವೆ . ವೆನಿಲ್ಲಾ ಬಳ್ಳಿಯ ಹೂಗಳಿಗೆ ಕೃತಕವಾಗಿ ಪರಾಗಸ್ಪರ್ಶ ಮಾಡಿದಾಗ ಮಾತ್ರ ಕೋಡುಗಳು ಮೂಡುತ್ತವೆ.
ಕರಾವಳಿಯ ಬಿಸಿಲಿನ ಹವೆಗೆ ಒಗ್ಗದಿರುವಿಕೆ, ಮಾರುಕಟ್ಟೆಗೆ ಆಮದಾದ ವೆನಿಲ್ಲಾ ಬರುವುದರಿಂದ ಸ್ಥಳೀಯ ವೆನಿಲ್ಲಾ ಕೋಡುಗಳಿಗೆ ಬೇಡಿಕೆ ಕಡಿಮೆಯಾದುದು, ಕೃಷಿ ಕಾರ್ಮಿಕರ ಅಲಭ್ಯತೆ… ಹೀಗೆ ಹಲವಾರು ಸಮಸ್ಯೆಗಳಿಂದಾಗಿ ವೆನಿಲ್ಲಾ ಕೃಷಿಯನ್ನು ಮುಂದುವರಿಸಲಾಗಲಿಲ್ಲ ಎಂದು ಸ್ಥಳೀಯ ಕೃಷಿಕರು ವಿವರಿಸುತ್ತಾರೆ.
ನಮ್ಮ ನೆಲದ ಸಾಂಪ್ರದಾಯಿಕ ಬೆಳೆ ಅಲ್ಲದಿದ್ದರೂ ವೆನಿಲ್ಲಾ ಬೆಳೆಯಲು ಆಸಕ್ತಿ ತೋರಿಸಿದ ಕೃಷಿಕರಿಗೆ ಸೂಕ್ತ ತರಬೇತಿ, ಮಾರುಕಟ್ಟೆ ಬಗ್ಗೆ ಮಾಹಿತಿ ಮತ್ತು ಸರಕಾರದ ಪ್ರೋತ್ಸಾಹ ಸಿಕ್ಕಿದ್ದರೆ, ಚೆನ್ನಾಗಿರುತಿತ್ತು. ಕನಿಷ್ಟ ಕೆಲವರಾದರೂ ಲಾಭ ಪಡೆಯುತ್ತಿದ್ದರು ಅಥವಾ ಆಸಕ್ತಿ ಉಳಿಸಿಕೊಳ್ಳುತ್ತಿದ್ದರು.
– ಹೇಮಮಾಲಾ.ಬಿ
(ಚಿತ್ರಕೃಪೆ : ಅಂತರ್ಜಾಲ)
ಆದರೀಗ ಸಂಸ್ಕರಿತ ಆಹಾರಗಳಲ್ಲಿ ಬಳಸಲ್ಪಡುತ್ತಿರುವುದು ಕೃತಕವಾಗಿ ತಯಾರಿಸಿದ ವೆನಿಲ್ಲಾ ಅಷ್ಟೇ…ಸಹಜ ವೆನಿಲ್ಲಾದ ಬಳಕೆಯನ್ನು ಉತ್ತೇಜಿಸಿದರೆ ಈಗಲೂ ಬೇಡಿಕೆಯಿದೆ… ವೆನಿಲ್ಲಾ ಬೆಳೆಯಲ್ಲಿ ’ಪರಾಗ ಸ್ಪರ್ಷ’ ಅತ್ಯಂತ ಸಂಕೀರ್ಣವಾದ ಕೆಲಸ(ಸಹಜವಾಗಿ ಪರಾಗ ಸ್ಪರ್ಷವಾಗುವುದಿಲ್ಲವಾದ್ದರಿಂದ)
eevagaloo venillaa bedike ide…beeing food items…used extensively…..aadare growersge laabha ideyo gothilla ashte