ಗಜಲ್

Share Button

ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿ
ಗೆದ್ದವರ ಗುರುತು ಮನುಜ
ಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿ
ಬೆಂದವರ ಗುರುತು ಮನುಜ.

ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿ
ಕಣ್ಣೀರ ಸುರಿಸಿದವರ ಗುರುತು ಮನುಜ
ಉರಿದ ಬತ್ತಿಗಷ್ಟೆ ಗೊತ್ತು ಬೆಳಕಿನಲ್ಲಿ
ಬಣ್ಣ ಹಚ್ಚಿದವರ ಗುರುತು ಮನುಜ.

ಹರಿದ ನದಿಗಷ್ಟೆ ಗೊತ್ತು ಮಡಿಲಲ್ಲಿ
ತಿಳಿನೀರ ಕದಡಿವರ ಗುರುತು ಮನುಜ
ಬಿರಿದ ಭೂಮಿಗಷ್ಪೆ ಗೊತ್ತು ಒಡಲಲ್ಲಿ
ಸಿಡಿ ಮದ್ದುಗಳನಿಟ್ಟವರ ಗುರುತು ಮನುಜ.

ಸವೆದ ಚಪಲಿಗಷ್ಟೆ ಗೊತ್ತು ಕಲ್ಲುಮುಳ್ಳುಗಳಲ್ಲಿ
ಕಾಲು ಸವೆಸಿದವರ ಗುರುತು ಮನುಜ
ಮುರಿದ ಮನಸಿಗಷ್ಟೆ ಗೊತ್ತು ಬದುಕಲ್ಲಿ
ಹುಳಿ ಹಿಂಡಿದವರ ಗುರುತು ಮನುಜ.

ಮನದ ದರ್ಪಣಕ್ಕಷ್ಟೆ ಗೊತ್ತು ತನ್ನೆದುರಲ್ಲಿ
ಮುಖವಾಡ ಧರಿಸಿದವರ ಗುರುತು ಮನುಜ
ಜ್ಯೋತಿಪ್ರಿಯ ಶಿವನಿಗಷ್ಟೆ ಗೊತ್ತು ಜಗದಲ್ಲಿ
ತನ್ನಂತೆ ಪರರ ಬಗೆದೊಡೆದವರ ಗುರುತು ಮನುಜ.

-ಶಿವಮೂರ್ತಿ.ಹೆಚ್. ದಾವಣಗೆರೆ.

12 Responses

  1. ಚೆಂದ ಗಜ಼ಲ್

  2. SHARANABASAVEHA K M says:

    ಬಹಳ ಸುಂದರವಾಗಿ ಮೂಡಿ ಬಂದಿದೆ ನಿಮ್ಮ ಘಜಲ್ ಶಿವಮೂರ್ತಿ ಸರ್

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಗಝಲ್

  4. ಶಂಕರಿ ಶರ್ಮ says:

    ಚಂದದ ಗಝಲ್

  5. Padma Anand says:

    ಅರ್ಥಪೂರ್ಣ ಗಜ಼ಲ್. ಮನ ತಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: