ಬತ್ತಿದ ಮರದಲಿ
ಬತ್ತಿದ ಮರದಲಿ
ಸತ್ತಿದೆ ಬದುಕು
ಕಟ್ಟಿದ ಗೂಡಿಗೆ
ಉರಿಬಿಸಿಲ ತೊಡಕು
ಮಳೆಯೇ ಮಾಯವಾಗಿ
ಹಸಿರು ತಾ ನಾಶವಾಗಿ
ನೆರಳೇ ನರಳಾಡಿದೆ
ಬದುಕೇ ಬರಡಾಗಿದೆ
ಮಾನವನ ಅತಿಯಾಸೆಗೆ
ಪರಿಸರ ನಾಶವಾಯ್ತು
ಮುಗಿಲು ಬಂಜೆಯಾಗಿ
ಅಂತರ್ಜಲ ಪಾತಾಳ ಸೇರಿತು
ನಿತ್ಯವೂ ಇಲ್ಲಿ ಹೋರಾಟ
ಹೇಳತೀರದು ಆ ಸಂಕಟ
ಮರುಭೂಮಿಯಲಿಷ್ಟು ತಂಪಿರಬಹುದು
ಸಮೃದ್ಧ ಈ ಭೂಮಿ ಸುಡುತಿಹುದು
ಬರ ಬಂದಿದೆ ಈಗ ಎಲ್ಲೆಲ್ಲೂ
ಪರದಾಡಿದೆ ಜೀವ ಹಗಲಿರುಳು
ಏನಾಗುವುದೋ ಈಗ ಬದುಕು
ಯಾಕಾಗೆಯೋ ಈ ಕೆಡುಕು
– ಅಮುಭಾವಜೀವಿ