ಏಕೀ ಕ್ರೌರ್ಯ ?
ನಮ್ಮನ್ನೆಲ್ಲಾ ಸುಡುವ
ಕ್ರೌರ್ಯ ನಿಮಗೇಕೆ
ನಾವಿರುವುದೆ ನಿಮ್ಮ
ಅನುಕ್ಷಣದ ಸಹಾಯಕೆ
ಯಾರದೋ ದ್ವೇಷದ ದಳ್ಳುರಿಗೆ
ನಮ್ಮನ್ನೇಕೆ ಆಹುತಿ ಮಾಡುವಿರಿ
ನಿರ್ಜೀವದೊಳಗೊಂದು ಭಾವವಿದೆ
ಜೀವವಿರುವ ನಿಮ್ಮಿಂದ ನೋವಾಗಿದೆ
ನಿಮ್ಮನ್ನೆಲಾ ಹೊತ್ತು ಸಾಗೋ ರಥವು ನಾವು
ನಮಗಿಂತ ಸ್ಥಿತಿಗೆ ತರಲು ನೋಯುವೆವು
ನಮ್ಮದೇನಿದೆ ಇದರಲಿ ತಪ್ಪು
ನಿಮ್ಮ ಆಕ್ರೋಶಕ್ಕೆ ನಾವಾಗಿಹೆವು ಬೆಪ್ಪು
ಕ್ರಾಂತಿಯ ಜ್ವಾಲೆಯೊಳಗೂ
ಶಾಂತಿ ಜ್ಯೋತಿ ಬೆಳಗಬೇಕು
ನಿಮ್ಮವರಿಗೇ ಹಿಂಸೆ ಕೊಟ್ಟು
ನೀವೇನು ಸಾಧಿಸಬೇಕು
ಹೋರಾಡಿ ನೀವೂ ಕಾನೂನಿನಲ್ಲಿ
ಹಾರಾಡಿದರೇನು ಫಲ ಬೀದಿಯಲ್ಲಿ
ನಮ್ಮ ಬದುಕನೇ ಸುಟ್ಟು
ನೀವು ಪಡೆಯುವುದೇನನು
ಬದುಕಲು ಬಿಡಿ ನಮ್ಮನು
ಅದಕೆ ಬೆಂಬಲಿಸುವೆವು ನಾವೂ ನಿಮ್ಮನು
ದಯಮಾಡಿ ನಮ್ಮ ಸುಡಬೇಡಿ
ಜಯ ಸಾಧಿಸಿ ಶಾಂತಿಯಿಂದ ಹೋರಾಡಿ
– ಅಮುಭಾವಜೀವಿ