ವಾಲ್ಮಿಕಿಗೆ ನಮನ
ಮರವನು ರಾಮನಾಗಿಸಿ
ಬರೆದೆ ರಾಮಾಯಣವನು
ಮಹಾಕಾವ್ಯದಿ ತಲುಪಿದೆ
ಕೋಟಿಕೋಟಿ ಜನಮನವನು
ಆದರ್ಶಪುರುಷನಿಗೆ
ಅದಮ್ಯಶಕ್ತಿಯನಿತ್ತು
ಅಮರವಾಗಿಸಿದೆ ನೀ
ಕಲ್ಪನೆಗೆ ಬಣ್ಣನೆಯಿತ್ತು
ದರೋಡೆಯನು ಬಿಟ್ಟು
ಬರವಣಿಗೆ ಇಷ್ಟಪಟ್ಟು
ಶ್ರಮದಿ.ಕ್ರಮದಿ ಎರೆದೆ
ಜೀವನ ಕಥೆಯ ಬರೆದೆ
ರಘುಕುಲ ತಿಲಕನೆಂದು
ಮನದೊಳಗಡೆ ತಂದು
ಹೇಳಿದೆ ಎಲ್ಲವ ಮುಂದು
ಮರೆಯಲಾಗದೆಂದೆಂದೂ
ಗೆದ್ದಿರುವೆ ನೀ ಅಸಂಖ್ಯ ಮನ
ಮರೆಯಲಾರರು ನಿನ್ನಾ ಜನ
ಇಂದು ನೀನು ಜನಿಸಿದ ದಿನ
ನಿನಗಿದೋ ನಮ್ಮೆಲ್ಲರ ನಮನ
.
– ಗಣೇಶಪ್ರಸಾದ ಪಾಂಡೇಲು