ಸ್ವಾತಿ ಮಳೆನೀರು ಮಹತ್ವ
ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇಡುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..??
ಈ ಸಲದ ಸ್ವಾತಿ ಮಹಾನಕ್ಷತ್ರವು, ಇದೇ ಅಕ್ಟೋಬರ್ 23 ರಿಂದ ನವೆಂಬರ್ 5 ರ ವರೆಗಿದೆ. ಈ ದಿನಗಳಲ್ಲಿ ಬೀಳುವ ಮಳೆ ನೀರು ಸಾದಾ ನೀರಾಗಿರದೆ, ಬಹಳ ಮಹತ್ವ ಉಳ್ಳದ್ದಾಗಿದೆ. ಈ ನೀರನ್ನು ನೀರನ್ನು ಶುಧ್ಧವಾಗಿ ಸಂಗ್ರಹಿಸುವುದೂ ಒಂದು ನಾಜೂಕಿನ ಕೆಲಸ. ಮಳೆ ನೀರು ನೆಲಕ್ಕೆ ಬೀಳುವ ಮೊದಲೇ ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ..!!
ಚಿಪ್ಪಿನೊಳಗೆ ಬಿದ್ದ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಒಂದು ಹನಿಯಿಂದ ಅನರ್ಘ್ಯ ಮುತ್ತು ರೂಪುಗೊಳ್ಳುವುದೆಂದು ಕೇಳಿದ್ದೇವೆ. ಅದೇ ನೀರು ಕೆಲವು ರೋಗಗಳಿಗೂ ದಿವ್ಯ ಔಷಧಿಯಾಗಿರುವುದು ವಿಶೇಷವಲ್ಲವೇ..? ಸ್ವಾತಿ ಮಳೆನೀರಿನ ಮಹತ್ವವು ಸ್ವತ: ನನ್ನ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಆಶ್ಚರ್ಯ! ನನ್ನ ಎಡ ಕೈಯ ಕಿರುಬೆರಳಿನ, ಉಗುರಿನ ಬುಡದಲ್ಲಿ ಒಮ್ಮಿಂದೊಮ್ಮೆಲೆ ಕೆಂಪಾಗಿ ನೋವು ಪ್ರಾರಂಭವಾಯ್ತು. ತಿಂಗಳುಗಟ್ಟಲೆ ಔಷಧೋಪಚಾರ ನಡೆಯಿತೆನ್ನಿ.. ಯಾವ ವೈದ್ಯರನ್ನೂ ಬಿಡಲಿಲ್ಲ. ಎಲೊಪತಿ, ಹೊಮಿಯೊಪತಿ, ಆಯುರ್ವೇದ ಎಲ್ಲವೂ ಮುಗಿಯಿತು. ಜಪ್ಪಯ್ಯ ಎಂದರೂ ನೋವು ಕಡಿಮೆಯಾಗಲಿಲ್ಲ..6ತಿಂಗಳು ಕಳೆಯಿತು. ಕಣ್ಣಿಗೆ ದಿನಾ ಬೆಳಗ್ಗೆ ಎರಡೆರಡು ಬಿಂದು ಸ್ವಾತಿ ನೀರು ಹಾಕುತ್ತಿದ್ದೆ. ಹಾಂ..ಇದನ್ನು ಮರೆತು ಬಿಟ್ಟೆನಲ್ಲ ಎನಿಸಿತು. ಇದನ್ನೂ ಯಾಕೆ ಪ್ರಯೋಗಿಸಿ ನೋಡಬಾರದು ಎಂದುಕೊಂಡು, ಸಮಯ ಸಿಕ್ಕಾಗಲೆಲ್ಲಾ ನೋವಿರುವ ಉಗುರಿಗೆ ಹಾಕುತ್ತಾ ಬಂದಾಗ ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಬರಲು ಪ್ರಾರಂಭವಾಯಿತು. ಸರಿಯಾಗಿ ಎರಡು ತಿಂಗಳುಗಳಲ್ಲಿ ಪೂರ್ತಿ ಉಗುರು ಸರಿಯಾಗಿ ಬಂದಿತ್ತು! ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ.
ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಲು ಕೂಡಾ ಉಪಯೋಗವಾಗುತ್ತದೆ. ರೇಶ್ಮೆ ಸೀರೆಗಳನ್ನು ಈ ಸಮಯದಲ್ಲಿ ಮಂದ ಬಿಸಿಲಿಗೆ ಒಂದು ತಾಸು ಅಥವಾ ಮನೆಯೊಳಗೆ ನೆರಳಿನಲ್ಲಿ ನಾಲ್ಕೈದು ತಾಸು ಹರವಿ ಹಾಕಿದರೆ ವರ್ಷವಿಡೀ ಕೀಟ ಬಾಧೆ ಇರುವುದಿಲ್ಲ. ಈ ಸಮಯದಲ್ಲಿ ಗಿಡಗಳನ್ನು ನೆಟ್ಟು ಚೆನ್ನಾಗಿ ಬದುಕಿದ ನಿದರ್ಶನ ನನ್ನಲ್ಲಿದೆ. ನನ್ನ ಈ ಸ್ವಾನುಭವಗಳನ್ನು ಇತರರಿಗೂ ತಿಳಿಸಿ, ಅವರು ಕೂಡಾ ಇದರ ಉಪಯೋಗ ಪಡೆಯುವಂತಾಗಲು ಸಹಕರಿಸುತ್ತಿರುವೆ. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ. ನನ್ನ ಗೆಳತಿಯೊಬ್ಬಳು ದೊಡ್ಡ ಹಂಡೆಯಲ್ಲಿ (ಚೆನ್ನಾಗಿ ಮಳೆ ಬಂದರೆ) ಸ್ವಾತಿ ನೀರನ್ನು ಸಂಗ್ರಹಿಸಿಟ್ಟು ಕೂದಲು ತೊಳೆಯಲು ಉಪಯೋಗಿಸಿ, ತನ್ನ ದಟ್ಟ ಕೂದಲನ್ನು ಕಾಪಾಡಿಕೊಂಡಿದ್ದಳು. ಪುಟ್ಟ ಮಗುವಿಗೆ ಈ ನೀರು ತಾಯ ಎದೆ ಹಾಲಿನಷ್ಟೇ ಆರೋಗ್ಯಕರವೆಂಬುದನ್ನು ಕೇಳಿ ಬಲ್ಲೆ. ಸ್ವಾತಿ ನೀರಿನಲ್ಲಿ ನಾನು ಐದು ವರ್ಷಗಳ ಹಿಂದೆ ಸಂಗ್ರಹಿಸಿದ ನೀರು ಇನ್ನೂ ಅತ್ಯಂತ ಸ್ವಚ್ಚವಾಗಿರುವುದು ಸೋಜಿಗವಲ್ಲದೆ ಮತ್ತೇನು!
ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ, ನಮಗೆ ತಿಳಿದ ಹಾಗೂ ತಿಳಿಯದ ಅತ್ಯದ್ಭುತ ಔಷಧೀಯ ಗುಣ ಹೊಂದಿದ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು ಬಹಳ ಪ್ರಚಾರ ಪಡೆದಿಲ್ಲ. ಅಗ್ಗದ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುವ ನಮ್ಮ ಸರಕಾರ ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಸಂಶೋಧನೆ ನಡೆಸಿದರೆ ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು.ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಿ ಅದರ ಸದುಪಯೋಗವಾಗಲಿ ಎಂದು ಹಾರೈಸೋಣ.
– ಶಂಕರಿ ಶರ್ಮ, ಪುತ್ತೂರು
Very very useful post.
really informative…!
ಒಳ್ಳೆ ಬರಹ. ಸ್ವಾತಿ ಮಳೆ ನೀರಿನ ಸಂಗ್ರಹದ ಬಗ್ಗೆ, ಅದರ ಸಂಶೋಧನೆ ಬಗ್ಗೆ, ಸರಕಾರವೂ ಎಚ್ಚೆತ್ತುಕೊಳ್ಳಬೇಕೆಂಬ ಅಭಿಪ್ರಾಯ ಉಪಯುಕ್ತ ಸಲಹೆ.
ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು…ಸ್ವಾತಿ ನಕ್ಷತ್ರ ನವಂಬರ ೬ರ ಬೆಳಿಗ್ಗೆ ೮:30 ವರೆಗೆ ಇದೆ. ನಿಮ್ಮೂರಲ್ಲಿ ಮಳೆ ಬಂದರೆ ಯಾಕೆ ತಡ…ಕೂಡಲೇ ಸಂಗ್ರಹಿಸಲು ಸುರುಮಾಡಿರಲ್ಲ…ನಾನು ೨ ಬಾಟಲಿಗಲ್ಲಿ ತುಂಬಿಸಿಟ್ಟಾಯಿತು..!!!
Maahitigaagi dhanyavaadagalu.
Beautiful article…never knew it…
ಉಪಯುಕ್ತ ಮಾಹಿತಿಗಾಗಿ ದನ್ಯವಾದಗಣಳು….
ಸ್ವಾತಿ ಮಳೆಯಲ್ಲಿ ಔಷಧೀಯ ಗುಣವಿರುವುದು ನನಗೆ ತಿಳಿದಿರಲಿಲ್ಲ .ಧನ್ಯವಾದಗಳು
ಪ್ರೀತಿಯ ಸುರಗಿ ಹೂಗಳೇ, ನಿಮ್ಮೆಲ್ಲರಿಗೆ ಹೄತ್ಪೂರ್ವಕ ಕೄತಜ್ನತೆಗಳು..ನಮ್ಮ ಪ್ರೀತಿಯ ಮಾಲಾರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳಲೇ ಬೇಕು,ನನ್ನನ್ನು ಪ್ರೀತಿಯಿಂದ ಸುರಗಿ ಮಾಲೆಯಲ್ಲಿ ಪೋಣಿಸಿಕೊಂಡಿದ್ದಕ್ಕೆ…ಈ ಬರಹಕ್ಕೆ ಹೊಂದುವ ಚಿತ್ರಗಳನ್ನು ಸೇರಿಸಿ ಚೆನ್ನ್ಗಾಗಿಸಿದ್ದಾರೆ…ನನಗೇನೋ ನನ್ನ ಬರಹಕ್ಕಿಂತ ಅವರ ಸಂದರ್ಭೋಚಿತ ಚಿತ್ರಗಳೇ ಚೆನ್ನಾಗಿವೆ ಅನ್ನಿಸುತ್ತಿದೆ…!! ಧನ್ಯವಾದಗಳು ಮಾಲಾ…
ನಿಮ್ಮೆಲ್ಲರ ಪ್ರೋತ್ಸಾಹವೇ ಸುರಹೊನ್ನೆಗೆ ಶ್ರೀರಕ್ಷೆ..ಧನ್ಯವಾದಗಳು 🙂
Good information medam
ಸ್ವಾತಿ ಮಳೆ ನೀರಿನ ಮಹತ್ವವು ಸ್ವತಹ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಕಾಕತಾಳೀಯ ಎನ್ನಿಸುವುದಿಲ್ಲ ನನಗೆ…ಎಡ ಕೈಯ ಕಿರುಬೆರಳಿನ ಉಗುರ ಬುಡದಲ್ಲಿ ಒಮ್ಮಿಂದೊಮ್ಮೆಲೆ ಕೆಂಪಾಗಿ ತುಂಬಾ ನೋವು ಸುರು..ತಿಂಗಳುಗಟ್ಟಲೆ ಔಷಧೋಪಚಾರ ನಡೆಯಿತೆನ್ನಿ.ಯಾವ ವೈದ್ಯರನ್ನೂ ಬಿಡಲಿಲ್ಲ..! ಎಲೊಪತಿ,ಹೊಮಿಯೊಪತಿ,ಆಯುರ್ವೇದ…ಏನನ್ನೂ ಬಿಡಲಿಲ್ಲ…ನೋವು ಜಪ್ಪಯ್ಯ ಅನ್ನಲಿಲ್ಲ.೬ತಿಂಗಳು ಕಳೆಯಿತು.ಕಣ್ಣಿಗೆ, ಒಳ್ಳೆಯದೆಂದು ದಿನಾ ಬೆಳೆಗ್ಗೆ ಎರಡೆರಡು ಬಿಂದು ಸ್ವಾತಿ ನೀರು ಹಾಕುತ್ತಿದ್ದೆ.ಆ ಬಾಟಲಿ ಎದುರಿಗೇ ಕುಳಿತು ನಗುತ್ತಿತ್ತು..!! ಹಾಂ..ಇದನ್ನು ಮರೆತೇ ಬಿಟ್ಟೆನಲ್ಲ ಎನಿಸಿತು.ಸಮಯ ಸಿಕ್ಕಾಗೆಲ್ಲಾ ಉಗುರಿನ ನೋವಿಗೆ ಹಾಕುತ್ತಾ ಬಂದೆ.ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಬರಲು ಪ್ರಾರಂಭವಾಯಿತು.ಸರಿಯಾಗಿ ೨ವರೆ ತಿಂಗಳಲ್ಲಿ ಪೂರ್ತಿ ಉಗುರು ಸರಿಯಾಗಿ ಬಂದಿತ್ತು..!!ಈಗಂತೂ ನನಗೆ, ಹೆಮ್ಮೆಯ ಸ್ವಾತಿ ನೀರಿನ ಬಗ್ಗೆ, ನನ್ನ ಕಿರು ಬೆರಳು ತೋರಿಸಿ ಎಲ್ಲರಿಗೂ ಹೇಳುವುದೇ ಕೆಲಸ…!!!
Wonderful…
ಸುಪರ್ಬ್.ತನಗಾದ ಉಪಯೋಗವನ್ನು ಎಲ್ಲರೊಡನೆ ಹಂಚಿಕೊಳ್ಳಬೇಕು ಅನ್ನುವ ನಿಮ್ಮ ಕಾಳಜಿಗೆ ಶರಣು ಮೇಡಂ
ಹೌದು, ಸ್ವಾತಿ ಮಳೆಯ ಮಹತ್ವ ಈಗಿನ ಕಾಲದಲ್ಲಿ ಯಾರಿಗೂ ತಿಳಿದಿಲ್ಲ. ಅದರ ಸಂಶೋಧನೆ ಆದರೆ ಒಳ್ಳೆದಕ್ಕು,
ಸ್ವಾತಿಮಳೆ ಹನಿಗಳಿಗೆ ಇಷ್ಟೊಂದು ಅದ್ಭುತ ಶಕ್ತಿ….
ಧನ್ಯವಾದಗಳು…ಇಂತಹ ಮಾಹಿತಿಯುಕ್ತ ಲೇಖನ ಬರೆದ ಶಂಕರಿ ಮೇಡಂಗೆ ಅಭಿನಂದನೆಗಳು
ನಾನೂ ನೀರನ್ನು ಸಂಗ್ತಹಿಸುವೆ
ಸುಂದರ ಹಾಗು ಬಹಳ ಉಪಯುಕ್ತವಾದ ಬರಹ . ಈ ಮಳೆಯ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದೆ , ಇಲ್ಲಿ ಸಾಕಷ್ಟು ವಿಚಾರಗಳು ತಿಳಿಯಿತು .
ಸಮಯೋಚಿತ ಬರಹ. ಸ್ವಾತಿ ಮಳೆ ನೀರಿನಿಂದ ಯಾವೆಲ್ಲಾ ರೋಗಗಳಿಗೆ ಫಲಪ್ರದವಾಗುತ್ತೆ ಎನ್ನುವ ಮಾಹಿತಿ ನೀಡಿದ್ದರೆ ಎರಡರಷ್ಟು ಖುಷಿಯಾಗುತ್ತಿತ್ತು. ದಯವಿಟ್ಟು ಮಾಹಿತಿ ಲಭ್ಯವಿದ್ದರೆ ಪೋಸ್ಟ್ ಮಾಡಿ.
ವಸಂತ್ ಮಾಲವಿ
ಹಗರಿಬೊಮ್ಮನಹಳ್ಳಿ
Mobile 9448261916
ವಾವ್ ಅದ್ಬುತ ಮಾಹಿತಿ.ಅಭಿನಂದನೆಗಳು.
ಸುಂದರ ಬರಹಅಕ್ಕಾ
ನಾನು ಸ್ವಾತಿ ಮಳೆ ನೀರನ್ನು ಸಂಗ್ರಹಿಸಿದ್ದನೆ.