ಎಲ್ಲಾ ನೆನಪಾಗುತ್ತಿದೆ..

Share Button

 

ಎಲ್ಲಾ ನೆನಪಾಗುತ್ತಿದೆ
ಅಂದಿನ ಆ ದಿನಗಳು
ಅಲ್ಲಿನ ಆ ಜನಗಳು
ಹಬ್ಬ ಹುಣ್ಣಿಮೆ ಮದುವೆ ಮುಂಜಿ
ಸ್ಕೂಲ ಸಮವಸ್ತ್ರಕ್ಕೆ ಹಾಕುತ್ತಿದ್ದ ಗಂಜಿ
ಎಲ್ಲ ಎಲ್ಲಾ ನೆನಪಾಗುತ್ತಿದೆ. 

ಆ ಬಸ್ಸಿನ ಡ್ರೈವರ್ ಮಿಯ್ಯಣ್ಣ
ಅಮೀರಣ್ಣ,ಕಂಡಕ್ಟರ್ ಸಾದತ್ತು
ಆ ಹುಸೇನಜ್ಜಿ ನೀಡಿದ ತುತ್ತು
ಅಬ್ಬಾ! ಆ ಹಬ್ಬಗಳೆಂದರೆ ಹಾಗೇ
ಪ್ರೀತಿಯ ಮಳೆ ಸುರಿದಹಾಗೇ

ಮೊಹರಮ್ಮಿನ ಆ ದೇವರ ಹೊತ್ತು
ಕೆಂಡವನ್ನು ಹಾಯ್ದು ಮೂರು ಸುತ್ತು
ಎಲ್ಲ ಎಲ್ಲಾ ನೆನಪಾಗುತ್ತಿದೆ.
ಆ ಲೋಬಾನದ ಹೊಗೆ
ಹುಸೇನಪ್ಪ ಮಾವನ ನಗೆ
ಆ. ಚೋಂಗೀ ರೊಟ್ಟಿಯ ಬಗೆ
ಆ ಹಳ್ಳಳ್ಳೇ ಬುಕ್ಕ
ಆ ಕೋಳಿಯ ಪುಕ್ಕ
ಆ ಪ್ರೀತಿ, ಆ ರೀತಿ, ಆ ನೀತಿ
ಇನ್ನೂ ಅಷ್ಟಿಟ್ಟು ಇದೆ ಅದೇ ರೀತಿ

ನಮ್ಮನಮ್ಮಲ್ಲೇ ಈ ವಿಷಬೀಜವ ಬಿತ್ತುವ
ರಾಮ ರಹೀಮರಿಗೂ ನಾಮವಿಕ್ಕುವ
ಈ ಮಾಧ್ಯಮದ ಮಂದಿ ಅರಿಯಬೇಕು
ನಮ್ಮ ಪಾಡಿಗೆ ನಾವು ಬದುಕ ಬಿಡಬೇಕು

 

– ಬಸವೇಶ ಸಿ ಎಂ ಹೊಳೆ, ಮೈಸೂರು

4 Responses

  1. Shruthi says:

    ಕವನ ಚೆನ್ನಾಗಿದೆ. ನಿಜ, ಬಾಲ್ಯದ ನೆನಪೇ ಚೆಂದ. – ಶ್ರುತಿ .

  2. jayashree says:

    yes sir. communal harmony, along with development is the need of the hour.

  3. Ghouse says:

    Really sir, those days are golden days. If god would have made any time machine in which we can go and see, I would have been the first one to enter in. You made me remember those days once again, thanks for that.

  4. ನಿಮ್ಮ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: