ಬಾದಾಮಿಯ ಬನಶಂಕರಿ ದೇವಾಲಯ….ರೊಟ್ಟಿಯೂಟ

Share Button

Banashankari temple Badami

ಬಾದಾಮಿಯ ಬನಶಂಕರಿ ದೇವಾಲಯವು ಬಹಳ ಪ್ರಸಿದ್ಧವಾದ ಕ್ಷೇತ್ರ.ಶಕ್ತಿದೇವತೆ ಪಾರ್ವತಿಯ ಅವತಾರವಾದ ಬನಶಂಕರಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ

ನಾವು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ( ಜನವರಿ 20, 2016), ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಜಾತ್ರೆಗೆ ಸಿದ್ಧತೆ ನಡೆದಿತ್ತು . ಅಲ್ಲಿಯ ಜಾತ್ರೆಯು ಒಂದು ತಿಂಗಳ ಕಾಲ ನಡೆಯುತ್ತದೆಯೆಂದೂ, ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆಂದೂ ಸ್ಥಳೀಯರು ತಿಳಿಸಿದರು. ಅಲ್ಲಿ ಪಾರ್ಕಿಂಗ್ ಸೌಲಭ್ಯ, ನೈರ್ಮಲ್ಯ ಮತ್ತು ನೀರಿನ ವ್ಯವಸ್ಥೆ ಅಷ್ಟಕ್ಕಷ್ಟೆ. ಬಹಳಷ್ಟು ಜನ ಸೇರುವುದಾದರೆ, ಹೇಗೆ ನಿಭಾಯಿಸುತ್ತಾರೋ ಎನಿಸಿತು. ನಾವು ಹೋಗಿದ್ದ ಸಮಯ ಕಡಿಮೆ ಜನರಿದ್ದುದರಿಂದ ಸಾವಕಾಶವಾಗಿ ದೇವಿಯ ದರ್ಶನ ಮಾಡಲು ಅನುವಾಯಿತು.

ಬಾಗಿಲಿನಲ್ಲೆಯೇ ಕಂಡ ಎತ್ತರವಾದ ದೀಪದ ಕಂಬಗಳು ವಿಶಿಷ್ಟವೆನಿಸಿದುವು. ದೇವಾಲಯದ ಹೊರಗಡೆ ಮಹಿಳೆಯರು ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ವಿವಿಧ ಪಲ್ಯಗಳು, ಗಟ್ಟಿಮೊಸರು, ತರಾವರಿ ಚಟ್ನಿಗಳು ಇತ್ಯಾದಿ ತುಂಬಿದ ಬುಟ್ಟಿಯನ್ನು ಪಕ್ಕದಲ್ಲಿ ಇರಿಸಿಕೊಂಡು ಅಥವಾ ತಲೆ ಮೇಲೆ ಹೊತ್ತುಕೊಂಡು  ಊಟ ಮಾಡಬರ್ರೀ, ಮಜ್ಜಿಗೆ ಕುಡಿಬರ್ರೀ, ಕೆನಿ-ಮೊಸರು ಐತಿ ಬರ್ರೀ “ ಎಂದು ಕರೆಯುತ್ತಿದ್ದರು.

ತಟ್ಟೆಯಲ್ಲಿ ಅನ್ನ ಸಾರು/ಪಲ್ಯ ಇತ್ಯಾದಿ ಮಿಶ್ರ ಮಾಡಿ ಕೈಯಿಂದ ಅಥವಾ ಚಮಚೆಯಿಂದ ‘ಉಣ್ಣುವುದು’ ಮತ್ತು ಇತರ ತಿಂಡಿಗಳನ್ನೂ ಚಿಕ್ಕ ಅಥವಾ ದೊಡ್ಡ ತಟ್ಟೆಯಲ್ಲಿ ಇರಿಸಿಯೇ ‘ತಿನ್ನುವುದು’ ನಮಗೆ ರೂಢಿಯಾದ ಅಭ್ಯಾಸ . ಹಾಗಾಗಿ, ಖಡಕ್ ರೊಟ್ಟಿಯನ್ನೇ ತಟ್ಟೆಯ ಹಾಗೆ ಹಿಡಿದು, ರೊಟ್ಟಿಯ ಮಧ್ಯೆ ಕಾಳಿನ ಪಲ್ಲೆ ಹಾಕಿ, ಚಟ್ನಿ ಸವರಿ, ಹಸಿ ಮೂಲಂಗಿಯನ್ನು ಕಡಿಯುತ್ತಾ, ಚಟ್ನಿಪುಡಿ-ಮೊಸರನ್ನು ನೆಂಚಿಕೊಳ್ಳುತ್ತಾ, ತಟ್ಟೆಯೇ ಇಲ್ಲದೆ ‘ರೊಟ್ಟಿ ಉಣ್ಣುವುದು’ ನಮಗೆ ಒಂದು ಹೊಸ ಪ್ರಯೋಗವಾಯಿತು.

ನಮ್ಮ ಸಡಗರ ಮತ್ತು ಸಂಕಷ್ಟ ನೋಡಿ, ರೊಟ್ಟಿ ಮಾರುವಾಕೆ ನಗುತ್ತಾ ಪ್ಲೇಟ್ ಕೊಟ್ಟರು. ಪಕ್ಕದಲ್ಲಿಯೇ ತನ್ನ ರೊಟ್ಟಿಬುಟ್ಟಿಯನ್ನಿರಿಸಿಕೊಂಡು, ಕುಶಲೋಪರಿ ಮಾತನಾಡುತ್ತಾ ಆತ್ಮೀಯವಾಗಿ ‘ಪಲ್ಲೆ ಹಚ್ಲಿ,..ಮಜ್ಜಿಗಿ ಕೊಡ್ಲಿ’ ಅಂತ ಉಪಚರಿಸುತ್ತಾ ಇದ್ದ ಅನ್ನಪೂರ್ಣೆ ದುಡ್ಡು ಕೊಡುವಾಗ ಮಾತ್ರ ನಿಗದಿತ ಮೊತ್ತಕ್ಕಿಂತ ದುಪ್ಪಟ್ಟು ತೆಗೆದುಕೊಂಡು, ಇನ್ನೂ ಸಾಲದು ಎಂಬಂತೆ ಸಿಡುಕಿದರು. ನಮ್ಮ ಪಕ್ಕ ಕುಳಿತಿದ್ದ ಸ್ಥಳೀಯರಿಗೂ ಇದರಿಂದ ಇರಿಸು-ಮುರಿಸಾಗಿ, ಪರಊರಿನಿಂದ ಬಂದವರಿಗೆ, ಗೊತ್ತಿಲ್ಲದವರಿಗೆ ಮೋಸ ಮಾಡಬಾರದು ಎಂದು ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಇರಲಿ, ಅದೂ ಒಂದು ಅನುಭವ, ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಸ್ಥಳೀಯರಲ್ಲದವರಿಗೆ ಈ ರೀತಿ ಸಣ್ಣಪುಟ್ಟ ಮುಜುಗರದ ಪ್ರಸಂಗಗಳು ಎದುರಾಗುತ್ತವೆ.

Banshankari-Temple- Badami    Banashankari temple Jolada rotti- Badami

ಹೋಟೆಲ್ ಉದ್ಯಮ ಇಲ್ಲದ ಹಿಂದಿನ ಕಾಲದಲ್ಲಿ , ದೂರದಿಂದ ಬಂದ ಯಾತ್ರಿಕರಿಗೆ ಆಹಾರ,ನೀರು ಒದಗಿಸುವ ಸಂಸ್ಕೃತಿಯಾಗಿ ಬೆಳೆದ ಬಂದ ಈ ರೊಟ್ಟಿಯೂಟವು ಈಗ ಸಹಜವಾಗಿಯೇ ಗೃಹ ಉದ್ಯಮದ ರೂಪ ತಾಳಿದೆ.

 

 

 – ಹೇಮಮಾಲಾ.ಬಿ

 

4 Responses

  1. ಬಸವರಾಜ ಜೋತಿಬಾ ಜಗತಾಪ says:

    ಅಹಲ್ಯಬಾಯಿ ಹೊಳಕರ ಅವರಿಂದ ಸ್ಥಾಪಿಸ್ಲಟ್ಟ ದೇವಾಲವೇ ಇದು.

  2. Guru Vittal says:

    ಮಹಾರಾಣಿ ಅಹಲ್ಯಾ ಬಾಯಿ ಹೊಳ್ಕರ್ ಕಟ್ಟಿಸಿದ ದೇವಸ್ಥಾನ (ಮೇಲೆ ಶ್ರೀ Krishna Doleh ಹೇಳಿದಂತೆ) ಆದ್ದರಿಂದ ಮರಾಠಿ ಶೈಲಿಯ ದೀಪದ ಕಂಭಗಳು. ಇಂತಹ ಕಂಭಗಳನ್ನು ಮಧ್ಯ ಪ್ರದೇಶದ ಇಂದೋರ್, ಉಜ್ಜಯನಿಯಲ್ಲಿ ಸಹ ನೋಡಬಹುದು

  3. M H Doddamani says:

    Madam at least you really remember the North karnataka my Devate., thanks.

  4. Pushpalatha M says:

    ಯಾರೋ ಪರದೇಸಿಗಳು ,ಕಡಕ್ ರೊಟ್ಟಿ ಯಲ್ಲಿ ಹಾಕಿ ಕೊಟ್ಟ ಕಾಳಿನ ಪಲ್ಯ ತಿಂದು ,ರೊಟ್ಟಿ ಬಿಸಾಡಿದರಂತೆ ,ಅದು disposable ಪ್ಲೇಟ್ ಎಂದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: