ಕಲಬುರಗಿ ನಗರ – ಇತಿಹಾಸದ ಒಂದು ಕಿರುಪರಿಚಯ
ಕಲಬುರಗಿ ನಗರವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ದೊಡ್ಡ ನಗರ. ಹಲವಾರು ದಶಕಗಳ ಇತಿಹಾಸ,ಉದ್ದಿಮೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ.
78 ಡಿಗ್ರಿ 04 ” ರಿಂದ 77 ಡಿಗ್ರಿ – 42 ” ರೇಖಾಂಶಯಲ್ಲಿ ಮತ್ತು 16 ಡಿಗ್ರಿ – 12 ” ರಿಂದ 17 ಡಿಗ್ರಿ – 46″ ಅಕ್ಷಾಂಶಯಲ್ಲಿ ಹಾಗೂ 465 ಮೀಟರ್ ಸಮುದ್ರ ಮಟ್ಟಕ್ಕಿಂತ ಮೇಲ್ಭಾಗದಲ್ಲಿದೆ. ನಮ್ಮ ರಾಜಧಾನಿ ಬೆಂಗಳೂರಿನಿಂದ 613 ಕಿಲೋಮೀಟರ್ ದೂರದಲ್ಲಿದೆ. ಕಲಬುರಗಿ ನಗರವು ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದ ವಿಭಾಗೀಯ ಕೇಂದ್ರವನ್ನಾಗಿ ಬೆಳೆದಿದೆ. ನಮ್ಮ ರಾಜ್ಯ ಸರಕಾರವು ಕಲುಬರಗಿ ನಗರವನ್ನು ಬಿ ದರ್ಜೆಯ ನಗರವೆಂದು ಘೋಷಿಸಿದೆ.ಶಾಂತಿ, ಸಹಭಾಳ್ವೆತೆ ಕೋಮು ಸೌಹಾರ್ದತೆ ಪ್ರಸಿದ್ಧವಾಗಿದೆ.ಎಲ್ಲಾ ಧರ್ಮದ ಜನರು ಒಟ್ಟಾಗಿ ಬಾಳುತ್ತಿದ್ದಾರೆ.
ಪ್ರತಿ ವರ್ಷವು ನೂರಾರು ಇಂಜಿನಿಯರ್ ಗಳು, ಡಾಕ್ಟರ್ ಗಳು,ಪದವೀಧರರು, ಸ್ನಾತಕೋತ್ತರ ಪದವೀಧರರು ಈ ನಗರದಲ್ಲಿ ಶಿಕ್ಷಣವನ್ನು ಮುಗಿಸಿಕೊಂಡು ಹೊರಬರುತ್ತಾಯಿದ್ದಾರೆ.
ಹಲವಾರು ವರ್ಷಗಳಿಂದ ಉತ್ತರ ಭಾರತದ ವಿದ್ಯಾರ್ಥಿಗಳು ಕೂಡ ಇಂಜಿನಿಯರಿಂಗ್, ವೈದ್ಯಕೀಯ ,ದಂತ ವೈದ್ಯಕೀಯ, ಫಾರ್ಮಸಿ (Pharmacy) ಶಿಕ್ಷಣಕ್ಕಾಗಿ ಕಲಬುರಗಿ ನಗರಕ್ಕೆ ವಲಸೆ ಬರುತ್ತಾಯಿದ್ದಾರೆ.ನಮ್ಮ ರಾಜ್ಯದ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗರವರು,ವೀರೇಂದ್ರ ಪಾಟೀಲ್ ರವರು ಹಾಗೂ ಮಾಜಿ ಕೇಂದ್ರ ಸಚಿವರು ಮಲ್ಲಿಕಾರ್ಜುನ ಖರ್ಗೆಯವರು ಕೂಡ ಕಲಬುರಗಿ ನಗರದಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು.ಅಖಂಡ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ವಾಯ್.ಎಸ್.ರಾಜಶೇಖರ ರೆಡ್ಡಿರವರು ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದರು.
ಕಲಬುರಗಿ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಲವಾರು ದಶಕಗಳ ಹಿಂದೆಯೇ ಆಗಿದೆ ಎಂದು ಹೇಳಬಹುದು. 1884 ರಲ್ಲಿ ನ್ಯಾಶನಲ್ ಟೆಕ್ಸ್‌ಟೈಲ್ ಕಾರಪೋರೆಶನ ಅವರು ಕಲಬುರಗಿ ನಗರದಲ್ಲಿ ಮೆಹಬೂಬ ಶಾಹಿ ಕುಲಬುರಗಿ(ಎಂ.ಎಸ್.ಕೆ)ಮಿಲ್ ಎಂಬ ಹೆಸರಿನಲ್ಲಿ ಟೆಕ್ಸ್‌ಟೈಲ್ ಮಿಲ್ ಯನ್ನು ಸ್ಥಾಪಿಸಿದರು.18 ನೇ ಶತಮಾನದಿಂದ 19 ನೇ ಶತಮಾನದವರೆಗೂ ಈ ಭಾಗದ ಸಾವಿರಾರು ನಿರುದ್ಯೋಗ ಯುವಕರಿಗೆ ಉದೋಗ್ಯವನ್ನು ನೀಡಿತ್ತು.ಆದರೆ ಹಲವಾರು ವರ್ಷಗಳ ಹಿಂದೆ ಸರಕಾರವು ಕೆಲವು ಕಾರಣಗಳನ್ನು ನೀಡಿ ಅದನ್ನು ಮುಚ್ಚಿತ್ತು.
ಕಲಬುರಗಿ ನಗರವು ತೊಗರಿ ಬೇಳೆಯ ನಗರಿ.ಉತ್ತರ ಭಾರತದಿಂದ ಉದೋಗ್ಯವನ್ನು ಹುಡುಕಿಕೊಂಡು ವಲಸೆ ಬರುತ್ತಿರುವ ನಿರುದ್ಯೋಗಿ ಯುವಕರಿಗೆ ದಾಲ್ ಮಿಲ್ಸ್ ಗಳಲ್ಲಿ, ಅಪಾರ್ಟ್ಮೆಂಟ್ಗಳ ನಿರ್ಮಾಣದಲ್ಲಿ, ಲಾಡ್ಜ್ ಗಳಲ್ಲಿ, ಬಾರ್ ಮತ್ತು ರೇಸ್ಟೋರೆಂಟ್ ಗಳಲ್ಲಿ ಹೀಗೆ ಹಲವಾರು ಕಡೆಯಲ್ಲಿ ಉದೋಗ್ಯವನ್ನು ನೀಡುತ್ತಿರುವ ಹೆಮ್ಮೆಯ ಕಲಬುರಗಿ ನಗರ.
ಕರ್ನಾಟಕದ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಕಲಬುರಗಿ ನಗರವು ಒಂದಾಗಿದೆ. ಕಲಬುರಗಿ ನಗರದ ಚಿತ್ರಣವು ದಿನದಿನಕ್ಕೆ ಬದಲಾಗುತ್ತಿದೆ. ಹಿಂದುಳಿದ ನಗರದಿಂದ ಅತೀ ವೇಗವಾಗಿ ಏಳಿಗೆ ಹೊಂದುತ್ತಿರುವ ನಗರವನ್ನಾಗಿದೆ ಪರಿವರ್ತನೆಗೊಂಡಿದೆ.
ತಿನಿಸು :
ಜೋಳದ ರೊಟ್ಟಿ: ಇಲ್ಲಿಯ ಜನರ ಮುಖ್ಯ ಆಹಾರ ಜೋಳದ ರೊಟ್ಟಿ. ದಿನದ ಮೂರು ಹೊತ್ತು ಊಟಕ್ಕೆ ಜೋಳದ ರೊಟ್ಟಿ ಬೇಕು.ಜೋಳದ ರೊಟ್ಟಿ ಜೊತೆಯಲ್ಲಿ ಕಡಲೆಕಾಯಿ ಪುಡಿಯನ್ನು (ಶೇಂಗಾ ಚಟ್ನಿ) ಸೇವಿಸುತ್ತಾರೆ.
ಬೇಳೆ ಹೂರಣ ಹೋಳಿಗೆ :ಇದು ಒಂದು ರುಚಿಯಾದ ತಿನಿಸು ಎಲ್ಲಾ ಹಬ್ಬದ ದಿನಗಳಲ್ಲಿ ಮಾಡುತ್ತಾರೆ. ಇದನ್ನು ಮಾವಿನ ಹಣ್ಣಿನ ರಸ,ಹಾಲು ಮತ್ತು ತುಪ್ಪದ ಜೊತೆಯಲ್ಲಿ ಸೇವಿಸುತ್ತಾರೆ.
ಜನಸಂಖ್ಯೆ,ಸಾಕ್ಷರತೆಯ ವಿವರಣೆ (2011 ರ ಜನಗಣತಿಯ ಪ್ರಕಾರ) :
ಕಲಬುರಗಿ ನಗರ | ಒಟ್ಟು | ಪುರುಷ | ಮಹಿಳೆ
|
ನಗರ ಜನಸಂಖ್ಯೆ | 533,587 | 271,660 | 261,927 |
ಅಕ್ಷರಸ್ಥರು | 382,775 | 207,498 | 175,277 |
ಸರಸಾರಿ ಸಾಕ್ಷರತೆ | 82.30% | 87.87% | 76.57% |
ಕಲಬುರಗಿ ನಗರದ ಇತಿಹಾಸ : ಕಲ್ಲಿನಿಂದ ಕುಡಿಯಿರುವ ಭೂಪ್ರದೇಶವನ್ನು ಹೊಂದಿರುವುದರಿಂದ ಈ ನಗರಕ್ಕೆ ಕಲಬುರಗಿ ಎಂದು ಹೆಸರು ಬಂತು. 10 ರಿಂದ 11 ನೇ ಶತಮಾನದಲ್ಲಿ ರಾಜ್ ಗುಲಚಂದ್ ಅವರು ಕಲಬುರಗಿ ನಗರವನ್ನು ಹಾಗೂ ಕೋಟೆಯನ್ನು ನಿರ್ಮಿಸಿದರು,ಬಳಿಕ 13 ನೇ ಶತಮಾನದಲ್ಲಿ ಬಹುಮನಿ ಸುಲ್ತಾನರು ಕಲುಬರಗಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ,ಅದರ ಹೆಸರನ್ನು ಗುಲಬರ್ಗಾ ಎಂದು ಮರುಹೆಸರಿಸಿದರು. ಯಾಕೆಂದರೆ ಅವರ ಕಾಲದಲ್ಲಿ ಗುಲಬರ್ಗಾದಲ್ಲಿ ಒಂದು ಸುಂದರವಾದ ಗುಲಾಬಿ ಹೂವುಗಳ ತೋಟವನ್ನು ನಿರ್ಮಿಸಲಾಗಿತ್ತು ಅದರಿಂದಲೇ ಕಲಬುರಗಿಗೆ ಗುಲಬರ್ಗಾ ಎಂದು ಹೆಸರು ಬಂತು.
ಕಲಬುರಗಿ ನಗರವು ಒಂದು ಪ್ರಮುಖ ನಗರವನ್ನಾಗಿ ಬೆಳೆಯುವುದಕ್ಕಿಂತ ಮೊದಲು ೬ ನೇ ಶತಮಾನದಲ್ಲಿ ರಾಷ್ಟ್ರಕೂಟರು ಗುಲಬರ್ಗಾದಲ್ಲಿ ತಮ್ಮ ಹಿಡಿತವನ್ನು ಸಾಧಿಸಿದರು. ಆದರೆ ಚಾಲುಕ್ಯರು ಮತ್ತೆ ಈ ಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸುಮಾರು ೨೦೦ ವರ್ಷಗಳ ಕಾಲ ಆಳಿದರು. ಸುಮಾರು ೧೨ ನೇ ಶತಮಾನದ ಹತ್ತಿರದಲ್ಲಿ ದೇವಗಿರಿಯ ಯಾದವ ಹಾಗೂ ಹಳೆಬೀಡಿನ ಹೊಯ್ಸಳರು ಈ ಜಿಲ್ಲೆಯ ಮೇಲೆ ಹಿಡಿತವನ್ನು ಸಾಧಿಸಿದರು. ೧೩ ನೇ ಶತಮಾನದಲ್ಲಿ ಗುಲಬರ್ಗಾ ಜಿಲ್ಲೆಯು ದೆಹಲಿಯ ಮುಸ್ಲಿಂ ಸುಲ್ತಾನರ ಹಿಡಿತದಲ್ಲಿಯಿತ್ತು. ೧೭೨೪ ರಿಂದ ೧೯೪೮ ವರೆಗೂ ಗುಲಬರ್ಗಾವು ಶ್ರೀಮಂತ ದೊರೆ ನಿಜಾಮರ ಆಳ್ವಿಕೆಯ ಹೈದ್ರಾಬಾದ್ ರಾಜ್ಯದಲ್ಲಿತ್ತು.ಅಂದಿನ ಗೃಹ ಸಚಿವರಾದ ಸರದಾರ ವಲ್ಲಭಾಯಿ ಪಟೇಲರು ಗುಲಬರ್ಗಾವನ್ನು ೧೯೪೮ ಸೆಪ್ಟೆಂಬರ್ ೧೭ ರಂದು ನಿಜಾಮನ ಆಳ್ವಿಕೆಯಿಂದ ಬಿಡುಗಡೆಗೊಳಿಸಿದರು. ಆದ್ದರಿಂದಲೇ ಸೆಪ್ಟೆಂಬರ್ ೧೭ ರಂದು ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸುತ್ತಾರೆ.
– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ
ಮುಂದುವರೆಯುವುದು…..