ನಕ್ಕು ಬಿಡು ಮನವೇ..

Spread the love
Share Button
Smith Amritaraj

ಸ್ಮಿತಾ ಅಮೃತರಾಜ್

ನಕ್ಕು ಬಿಡು ಮನವೇ..
ನಕ್ಕು ಬಿಡು.
ಅದರಾಚೆಗೆ ಇನ್ನೇನು ತಾನೇ
ಮಾಡಲು ಸಾಧ್ಯ?
ಬಿಟ್ಟು ಬಿಡು.

ಮುಷ್ಠಿ ಗಾತ್ರದ ಎದೆಯೊಳಗೆ
ಬೆಟ್ಟ ಭಾರದ ನಿಟ್ಟುಸಿರ
ಬೇಗೆ
ಉಸಿರು ಹೊಮ್ಮುವ ಬಗೆಯಾದರೂ
ಹೇಗೆ?

ಜಂಜಡಗಳಿಗೇನು ಬರ
ಸಾಲು ಸಾಲಾಗಿ ಅಮರಿಕೊಂಡು
ಹೆಗಲೇರಿ ಕುಳಿತುಕೊಳ್ಳುವ ಚಟ
ಮುಲಾಜು ಬೇಡ. ಕೊಡವಿ ಬಿಡು
ಹಾಗೇ.

ಬೇಗ ಬೇಗ ಗುಡಿಸಿ ಬಿಡು
ಎದೆಯ ನಡುವಿನ ಜಾಗ
mindಅತ್ತ ಇತ್ತ ಕಂಗಾಲಾಗಿ
ಕವಿತೆ ಸುಳಿಯುತ್ತಿದೆ ನೋಡು
ದಾರಿ ಬಿಡು.

ಹೊಸಿಲು ತೆರೆದೇ ಇರಲಿ
ಹಾಗೇ
ಕಸ ಕಡ್ಡಿ ಒಳ ಹೊಕ್ಕದಂತೆ ಮಾತ್ರ
ಸದಾ ಒಂದು ನಿಗಾ ಇರಲಿ.

.

– ಸ್ಮಿತಾ ಅಮೃತರಾಜ್.

2 Responses

  1. Nagesh M J Ragimuddanahalli says:

    Very nice

  2. Girish Hulikantimath says:

    ನೀವೆ ಓದಿ ಹೇಳಬಿಡಿ ಅಕ್ಕಾ..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: