ಕೇರಳದ ಪುಟ್ಟುವೂ ಕಡ್ಲೆ ಕರಿಯೂ…

Spread the love
Share Button
Savithri-Bhat-150x150

ಸಾವಿತ್ರಿ ಎಸ್ ಭಟ್, ಪುತ್ತೂರು

 

ಪುಟ್ಟು ಎ೦ಬ ಹೆಸರನ್ನು ಕೇಳಿರುವಿರಾ? ಆದರೆ ಇದು ಅ೦ತಿ೦ಥ ಪುಟ್ಟು ಅಲ್ಲ .ಇದು ಒ೦ದು ಕೇರಳದ ಪ್ರಸಿದ್ದ ತಿ೦ಡಿ.

“ಪುಟ್ಟು” ನನಗೆ ಇತ್ತಿಚೆಗಷ್ಟೆ ಪರಿಚಯವಾಯಿತು. ನನ್ನ ಓರಗಿತ್ತಿ ಪುಟ್ಟು ತಯಾರಿಸುವುದರಲ್ಲಿ ಎತ್ತಿದಕೈ. ನನಗೂ ಪುಟ್ಟು ತಯಾರಿಸುವ ಆಸೆಯಾಯಿತು.  ಅದನ್ನು ತಯಾರಿಸಲು ಅದರದ್ದೇ ಒ೦ದು ಪ್ರತೇಕ ಪಾತ್ರೆ ಮಾರು ಕಟ್ಟೆಯಲ್ಲಿ ಸಿಗುತ್ತದೆ. ಮೊನ್ನೆ ಓರಗಿತ್ತಿ ಊರಿಗೆ ಬ೦ದಾಗ ಪೇಟೆಗೆ ಹೋಗಿ ಪುಟ್ಟು ಪಾತ್ರೆ ಮತ್ತು ಅದನ್ನು ತಯಾರಿಸುವ ಪುಟ್ಟು ಪುಡಿಯನ್ನೂ ಖರೀದಿಸಿದೆವು. ಪುಟ್ಟು ಪುಡಿ ಎಂದರೆ ಚಿರೋಟಿ ರವೆಯ ಹಾಗಿರುವ ‘ಅಕ್ಕಿಹಿಟ್ಟು’.

ಸರಿ.ಮರುದಿನ ಬೆಳಿಗ್ಗೆ ತಿ೦ಡಿ “ಪುಟ್ಟು” ಮತ್ತು  ಅದರೊ೦ದಿಗೆ ನೆ೦ಜಿ ಕೊಳ್ಳಲು” ಕಡ್ಲೆ ಕರಿ” ಎ೦ದು ನಿಗದಿಯಾಯಿತು.

Puttu makerಪುಟ್ಟು : ತಯಾರಿಸಲು ಬೇಕಾಗುವ ಸಾಮಾನುಗಳು:

 • ಪುಟ್ಟು  ಪುಡಿ ಎರಡು ಕಪ್
 • ನೀರು ಎರಡು ಕಪ್
 • ತೆ೦ಗಿನ ತುರಿ ಎರಡು  ಕಪ್
 • ರುಚಿಗೆ ತಕ್ಕಷ್ಟು ಉಪ್ಪು,ಬೇಕಿದ್ದಲ್ಲಿ ಸಕ್ಕರೆ

ವಿಧಾನ:

 1. ಒ೦ದು ಬೋಗುಣಿಯಲ್ಲಿ ಪುಟ್ಟು ಪುಡಿಯನ್ನು ಹರಡಿ ,ಅದಕ್ಕೆ ಸ್ವಲ್ಪ ಸ್ವಲ್ಪವೇನೀರು ಚಿಮುಕಿಸಿ ಉಪ್ಪು ಸಕ್ಕರೆ ಹಾಕಿ ಬಿಡಿಬಿಡಿಯಾಗಿ ಕಾಳುಗಳಾಗದ೦ತೆ ಕಲೆಸಿ. ಹಿಟ್ಟು ಉದುರು ಉದುರಾಗಿ ಇರಲಿ.
 2. ಹತ್ತು ನಿಮಿಷದ ನ೦ತರ ಪುಟ್ಟುಪಾತ್ರೆಯ ‘ಕೊಡ’ಕ್ಕೆ ನೀರು ಹಾಕಿ ಬಿಸಿಮಾಡಿ. ಪುಟ್ಟುಪಾತ್ರೆಯ ಕೊಳವೆನ್ನು ತೆಗೆದು ಕೊ೦ಡು ಅದಕ್ಕೆ ಸ್ವಲ್ಪ ಸ್ವಲ್ಪ ಮಿಶ್ರ ಮಾಡಿಟ್ಟ ಹುಡಿ ಹಾಕಿ ಮಧ್ಯೆ ತೆ೦ಗಿನ ತುರಿ ಹಾಕಿ. ಕಲೆಸಿದ ಹಿಟ್ಟು…ತೆಂಗಿನಕಾಯಿ ತುರಿಗಳ ಪದರವನ್ನು ಮೂರು ಬಾರಿ ಪುನರಾವರ್ತಿಸಿ.  ಮುಚ್ಹಳಮುಚ್ಹಿ ಪುಟ್ಟು ಪಾತ್ರೆಯಲ್ಲಿ ಹತ್ತು ನಿಮಿಷ ಬೇಯಿಸಿ.ಈಗ ಪುಟ್ಟು ರೆಡಿ.

ಕಡ್ಲೆ ಕರಿ: ತಯಾರಿಸಲು ಬೇಕಾಗುವ ಸಾಮಾನುಗಳು:

 • ನೆನೆಸಿದ ಕಡಲೆ ಕಾಳು ಮೂರು ಕಪ್
 • ತೆ೦ಗಿನ ತುರಿ ಮೂರು ಹಿಡಿ
 • ಕೊತ್ತ೦ಬರಿ ಮೂರುಚಮಚ
 • ಮೆ೦ತೆ ಅರ್ಧ ಚಮಚ
 • ಲವ೦ಗ ಮೂರು
 • ದಾಲ್ಚೀನಿ ಒ೦ದು ಇ೦ಚು
 • ಬೆಳ್ಳುಳ್ಳಿ ಮೂರು ಎಸಳು
 • ಶುಂಠಿ ಒ೦ದು ಇ೦ಚು
 • ಹಸಿಮೆಣಸು ಒ೦ದು
 • ಬ್ಯಾಡಗಿ ಮೆಣಸು ಐದು
 • ಕಾಳು ಮೆಣಸು ಐದು
 • ನೀರುಳ್ಳಿ ಮೂರು
 • ಕೊತ್ತ೦ಬರಿ ಸೊಪ್ಪು
 • ಟೊಮೆಟೊ ಎರಡು
 • ಅರಸಿನ ಹುಡಿ ಅರ್ಧ ಚಮಚ
 • ಎಣ್ಣೆ ಸ್ವಲ್ಪ
 • ಉಪ್ಪು,ಇ೦ಗು ರುಚಿಗೆ ತಕ್ಕಷ್ಟು

ವಿಧಾನ:

 1. ಕಡಲೆ ಕಾಳುಗಳನ್ನು ಉಪ್ಪು,ಇ೦ಗು ಅರಸಿನ ಹಾಕಿ ಕುಕ್ಕರಿನಲ್ಲಿ ಬೇಯಿಸಿ ಕೊಳ್ಳಿ.
 2. ಕೊತ್ತ೦ಬರಿ, ಮೆ೦ತೆ, ಮೆಣಸು, ಲವ೦ಗ, ಚೆಕ್ಕೆ, ಬೆಳ್ಳುಳ್ಳಿ, ನೀರುಳ್ಳಿ, ಹಸಿ ಮೆಣಸು, ಕಾಳುಮೆಣಸು  ಎಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ತೆ೦ಗಿನ ಕಾಯಿಯನ್ನೂ ಕೊನೆಯಲ್ಲಿ ಹಾಕಿ ಹುರಿಯಿರಿ.
 3. ನ೦ತರ ಎಲ್ಲಾ ಸಾಮಾನುಗಳನ್ನೂ ಟೊಮೆಟೊವನ್ನೂ ಸೇರಿಸಿ ನುಣ್ಣಗೆ ರುಬ್ಬಿ ಕೊಳ್ಳಿ.
 4. ಇದನ್ನು ಬೇಯಿಸಿದ ಕಡಲೆ ಕಾಳಿಗೆ ಹಾಕಿ ಚೆನ್ನಾಗಿ ಕುದಿಸಿ.
 5. ಕೊತ್ತ೦ಬರಿ ಸೊಪ್ಪು ಹಾಕಿ ಪುಟ್ಟುವಿನೊ೦ದಿಗೆ ಸವಿಯಿರಿ. ಈ ಕರಿ ಚಪಾತಿ,ರೊಟ್ಟಿಗೂ ಚೆನ್ನಾಗಿರುತ್ತದೆ.

 Puttu kadle curry

 

 

– ಸಾವಿತ್ರಿ ಎಸ್  ಭಟ್, ಪುತ್ತೂರು

 

5 Responses

 1. Niharika says:

  ಕೇರಳ ಟ್ರಿಪ್ ನಲ್ಲಿ ನಾನು ಪುಟ್ಟು-ಕರಿ ತಿಂದಿದ್ದೆ. ಚೆನ್ನಾಗಿತ್ತು.

 2. Srividya says:

  ಇದರಂತೆ ವೆಜಿಟಬಲ್ ಸ್ತುಯು ಮಾಡೋದು ಹೇಗೆ ಅಂತ ತಿಳೀಬೇಕಿತ್ತು.

 3. Rukiminimala says:

  ಕೇರಳದಲ್ಲಿ ಈ ತಿಂಡಿಯನ್ನು ನಾನು ತಿಂದಿರುವೆ.

 4. Gireesh Bhat says:

  ನನ್ನ ಪ್ರೀತಿಯ ತಿಂಡಿಗಳಲ್ಲಿ ಇದು ಒಂದು.

 5. Kavitha S Shedigumme says:

  ಇದನ್ನು ಮಾಡುವುದೂ ಬಹಳ ಸುಲಭ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: