ಮೌನ….
ಮೌನವೆ ಕೆಲವೊಮ್ಮೆ
ಮುಳುವಾಗುತ್ತದೆ ;
ಬದುಕಿನ ಪ್ರತಿಕ್ಷಣಗಳನ್ನು
ನರಕವಾಗಿಸುತ್ತದೆ.
ಇಷ್ಟವಿಲ್ಲದಿದ್ದರೂ
ಒಪ್ಪಿ ಬದುಕಲು
ದಾರಿ ಮಾಡುತ್ತದೆ ;
ಬದುಕಿದವರನು
ಗುಲಾಮಗಿರಿಗೆ
ತಳ್ಳಿ ಬಿಡುತ್ತದೆ !
ಮೌನವೆ ಕೆಲವೊಮ್ಮೆ
ತಲೆ ಉಳಿಸುತ್ತದೆ ;
ಆಗಾಗ ತಲೆಯನ್ನು
ಧರೆಗುರುಳಿಸುತ್ತದೆ !
ಒಮ್ಮೊಮ್ಮೆಮೌನ
ಮಾನ ಉಳಿಸುತ್ತದೆ…
ಮಗದೊಮ್ಮೆ ಬಾಯಿ ಕೈ ಕಟ್ಟಿ
ಮೂಗರನ್ನಾಗಿಸಿ
ಕೃಪಾ- ಭೀಷ್ಮ ರಂತೆ
ಸೇವಕರನ್ನಾಗಿಸುತ್ತದೆ ! !
– ಎಚ್. ಆರ್ . ಕೃಷ್ಣಮೂರ್ತಿ
ಕವನ ಚೆನ್ನಾಗಿದೆ, ಬರೆಯುತ್ತಿರಿ.
ಥ್ಯಾಂಕ್ಸ್..