ತಾ-ಮರೆಯರಸಿ…

Spread the love
Share Button

ತೀರದ ದಂಡೆಯಲಿ ಹೆಜ್ಜೆಗಳ ಗುರುತಿಲ್ಲ

ನಾ ನಡೆವ ಹಾದಿಯಲಿ ಗೆಜ್ಜೆಗಳ ದನಿಯಿಲ್ಲ!

 

ನೋಡ ನೋಡುತ ಬತ್ತುತಿದೆ ಜಲರಾಶಿ

ಮಾಟ ಮಾಡುತ ಏರಿಳಿಯುತಿದೆ ಮೇಘರಾಶಿ

ಉರಿಯುವ ರವಿಯು ತಂಪಾಗಿ ವಿರಮಿಸಿ

ಸೀಳಿದ ಭುವಿಯ ನೋಡಿ ಶಶಿಯೂ ಕಸಿವಿಸಿ…!

 

ಕೆಸರ ಮಾಸದೆ ಉಳಿದ ತಾಮರೆಯಲ್ಲಿ

ಒಂದು ಹನಿ ಸಿಂಪಡಿಸಿ ಒಲವಲ್ಲಿ

ಬೆಂದ ಒಡಲಿನ ದಾಹ ನೀಗಿಸಬಾರದೇ…?

ಚೆಂದ ಮನಸಿನ ಭಾವ ಅರಳಿಸಬಾರದೇ…?

 

ಕಾಲವಲ್ಲದ ಕಾಲವು, ತಿರುಗಿ ಬಾರದ ಕಾಲವು

ಒಮ್ಮೆ ಸುರಿಯಿತು ಸೋನೆಯೂ ಅದರ ಭಾರವೂ

ಕೊಚ್ಚಿ ಹೋಯಿತು, ದಡವ ದಾಟಿತು ಮೋಹವು

ತುಂಬಿ ತುಳುಕಿತು ಮತ್ತೆ ಒಂಟಿಯಾಯಿತು ಜೀವವು….!

 

ಅಶೋಕ್. ಕೆ. ಜಿ. ಮಿಜಾರು.

 

2 Responses

  1. jayashree says:

    ಚೆನ್ನಾಗಿದೆ Ashok

  2. smitha Amrithraj says:

    bhaava poorna kavite-smitha

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: