ಅರಣ್ಯ ಸಂಪತ್ತನ್ನು ರಕ್ಷಿಸುವ ಕುರಿತು

Spread the love
Share Button

ಪ್ರತಿನಿತ್ಯ ದಿನ ಪತ್ರಿಕೆಗಳಲ್ಲಿ ಮಾನವ ಮನುಷ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ನೋಡುತ್ತಿದ್ದರೆ ಮಾನವ ಮೃಗಗಳಿಗಿಂತ ಕಡೆ ಎಂದೆನಿಸುತ್ತದೆ,ಒಂದು ಕಾಲದಲ್ಲಿ ನಮ್ಮ ಭವ್ಯ ಸಂಸ್ಕೃತಿಗೆ ಹೆಸರಾದ ದೇಶದಲ್ಲಿ ಇಂದು ಸಾಮಾಜಿಕ ನೀತಿ ಎಷ್ಟು ಹೀನಾಯ ಪರಿಸ್ಥಿತಿಯಲ್ಲಿದೆ ಎಂಬುದನ್ನು ಯೋಚಿಸಿದರೆ ದುಃಖವಾಗುತ್ತದೆ. ಈ ರೀತಿ ಇರುವಾಗ ಇನ್ನೂ ಪ್ರಾಣಿ ಪಕ್ಷಿಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬಂತಿದೆ.

ಆಧುನೀಕರಣದ ಹೆಸರಿನಲ್ಲಿ ನಮ್ಮ ದೇಶದ ಪ್ರಕೃತಿ ಸಂಪತ್ತು ನಾಶವಾಗಿ ಹೋಗಿತ್ತಿದೆ,ಬೆಟ್ಟ,ಗುಡ್ಡಗಳು,ಪರ್ವತಶ್ರೇಣಿಗಳೂ ಕೂಡ ಬಲಿಷ್ಟ ಜನರ ಸ್ವತ್ತಾಗಿದೆ ನಮ್ಮ ದೇಶದ ಅರಣ್ಯ ಸಂಪತ್ತು ನಾಶ ಆಗಿ ವನ್ಯ ಮೃಗಗಳು ಬೆರಳೆಣಿಕೆಯಾಗಿದ್ದರೂ ನಾವು ಇನ್ನೂ ಕಾಡು ಪ್ರಾಣಿಗಳ ಜೀವದ ಬೆಲೆ ಅರಿತಿಲ್ಲ ಪ್ರಾಣಿಗಳ ವಾಸಸ್ಥಾನವಾದ ಅರಣ್ಯವನ್ನು ಕಬಳಿಸಿ ತಮ್ಮ ಆಸ್ಥಿಯನ್ನಾಗಿ ಮಾಡಿಕೊಂಡು ಈಗ ಕಾಡು ಪ್ರಾಣಿಗಳಿಂದ ಹಾನಿಯಾಗಿರುವ ಬಗ್ಗೆ ಬೊಬ್ಬಿಡುತ್ತಿದ್ದಾರೆ.

ಮಹಾತ್ಮಗಾಂಧಿ ಒಂದೆಡೆ ಹೇಳಿದ್ದಾರೆ ಭೂಮಿ ಮೇಲೆ ಮಾನವನ ಅವಶ್ಯಕತೆಗೆ ಬೇಕಾಗಿದ್ದು ಎಲ್ಲವೂ ಇದೆ ಆದರೆ ಮನುಷ್ಯನ ದುರಾಸೆಗೆ ಎಷ್ಟಿದ್ದರೂ ಸಾಲದು ಕಾಡು,ಪರ್ವತಶ್ರೇಣಿಗಳು,ಬೆಟ್ಟಗಳು,ನದಿ,ಸರೋವರಗಳು,ಕಾಡುಪ್ರಾಣಿಗಳು,ಪಕ್ಷಿಗಳುಇಲ್ಲದ ಪ್ರಪಂಚವನ್ನು ಕಲ್ಪಿಸಿಕೊಳ್ಳಿ ಪ್ರಪಂಚ ಎಷ್ಟು ಶೂನ್ಯ ಎಷ್ಟು ಬರಡು ಎಂದೆನಿಸುತ್ತದೆ.

ನಾವು ಮುಂದಿನ ಜನಾಂಗಕ್ಕೆ ಸುಂದರ ಪ್ರಪಂಚವನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ದೈವಸೃಷ್ಠಿಯಾದ ಸುಂದರ ಕಾಡುಪ್ರಾಣಿಗಳನ್ನು ಕೆಲವೇ ಕೆಲವು ಜನರು ದುರಾಸೆಯಿಂದ ಕೊಲ್ಲುತ್ತಿರುವುದು ಅಕ್ಷಮ್ಯ ಅಪರಾಧ.ದಿನಬೆಳಗಾದರೆ ಆನೆ,ಚಿರತೆ,ಹುಲಿಗಳು ಮಾನವನ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ವರದಿಯನ್ನು ಓದುತ್ತಿದ್ದರೆ ಮುಂದೊಂದುದಿನ ಮಕ್ಕಳಿಗೆ ನಾವು ಹುಲಿ ಚಿರತೆಗಳನ್ನು ಚಿತ್ರದಲ್ಲಿ ತೋರಿಸಬೇಕಾಗಬಹುದು.

ಹಳ್ಳಿಯ ಜನರು ಮುಗ್ಧರು ಮಾನವೀಯತೆ ಉಳ್ಳವರು ಎಂಬ ನಂಬಿಕೆ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅವರೂ ಸಹ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ನಾವು ಯಾವುದೇ ಪ್ರಯತ್ನವನ್ನು ಮಾಡದೆ,ಜನಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಿ ವನ್ಯ ಪ್ರಾಣಿಗಳ ಬಗ್ಗೆ ಕಾಳಜಿಯು ಬೆಳೆಯುವಂತೆ ಮಾಡದೆ ಇದ್ದರೆ ಅಳಿದುಳಿದಿರುವ ಅರಣ್ಯ ಸಂಪತ್ತು ನಶಿಸಿ ಹೋಗುವುದರಲ್ಲಿ ಸಂದೇಹವಿಲ್ಲ.

ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ವನ್ಯಸಂಪತ್ತು ಕಾಡುಪ್ರಾಣಿರಕ್ಷಣೆಗಾಗಿ ಮುಂದಾಗಿದ್ದಾರೆ.ಆದರೆ ನಮ್ಮ ದೇಶ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು,ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಲ್ಲವನ್ನೂ ಸಕರ್ಾರವೇ ಮಾಡಲಿ ಎಂದು ಕೈಚೆಲ್ಲಿ ಕೂರುವ ಬದಲು ನಾವೆಲ್ಲರು ನಮ್ಮ ದೇಶದ ಪ್ರಕೃತಿಸಂಪತ್ತು,ಜಲಸಂಪತ್ತು,ವನ್ಯಸಂಪತ್ತನ್ನು ಉಳಿಸಲು ಮುಂದಾಗಿ ಪ್ರಕೃತಿಸಂಪತ್ತನ್ನು ಉಳಿಸುವ ಪ್ರಯತ್ನ ಆರಂಭಿಸಬೇಕು.

ಈ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕು, ಜೊತೆಗೆ ಸಾಮಾಜಿಕ ಕಳಕಳಿ ಇರುವ ಸಂಘಸಂಸ್ಥೆಗಳು, ಪ್ರಾಣಿ ದಯಾಸಂಸ್ಥೆಯವರು, ಈ ನಿಟ್ಟಿನಲ್ಲಿ ಚಿಂತಿಸಿ ನಮ್ಮ ದೇಶದ ಪ್ರಕೃತಿಸಂಪತ್ತನ್ನು ಉಳಿಸಲು ಎಲ್ಲರೂ ಪ್ರಯತ್ನಿಸೋಣ ಜನತೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಪ್ರಪಂಚಕ್ಕೆ ತೋರಿಸೋಣ.

ನಮ್ಮ ರೂಪನಗರದಲ್ಲಿ ಸುಮಾರು 80 ವಿಧದ ಪಕ್ಷಿಗಳನ್ನು ನೋಡಬಹುದು ನನ್ನ ಸ್ನೇಹಿತೆ ಶ್ರೀಮತಿ ಉಷಾಮಧುಕರ್ [ಬರ್ಡ್ ವಾಚರ್] ವಿವಿಧ ಪಕ್ಷಿಗಳ ಛಾಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ಪಕ್ಷಿಪ್ರೇಮಿಗಳು ನೋಡಿ ಸಂತೋಷ ಪಡಬಹುದು ಮತ್ತು ಮುಂದೆಯೂ ಈ ಪಕ್ಷಿಗಳ ಸಂತತಿಯನ್ನು ಉಳಿಸಲು ಮತ್ತು ಮರಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆಹಾಕೋಣ.

ಶ್ರೀಮತಿ ನೀಲಮ್ಮ ಕಲ್ಮರಡಪ್ಪ
ರೂಪನಗರ, ಮೈಸೂರು

3 Responses

  1. suragi says:

    ಉತ್ತಮವಾದ ಬರಹ 🙂

    – ಶ್ರುತಿ .

  2. Rekha says:

    ಸಮಯೋಚಿತವಾಗಿದೆ

  3. thank u for your compliments NEELAMMA

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: