ನ್ಯಾನೋ ಕಥೆಗಳು…ತನಿಖೆ…ಹಕ್ಕಿಗೂ ಮನಸಿದೆ

Spread the love
Share Button

 

1. ತನಿಖೆ

 

ಅವರಿಬ್ಬರೂ ತುಂಬಾ ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆ ಬೇರೆ.

ಎರಡೂ ಮನೆಯವರ ಒಪ್ಪಿಗೆಯೂ ಸಿಕ್ಕಿತ್ತು. ಮದುವೆಯೂ ಆಯಿತು.

ತಿಂಗಳು ಕಳೆಯಿತು. ಅವರಿಬ್ಬರೂ ಆತ್ಮಹತ್ಯೆಮಾಡಿಕೊಂಡರು.

ಪೋಲೀಸರು ಬಂದರು; ಸಿ.ಬಿ.ಐ. ಬಂದರು;

ತನಿಖೆ ನಡೆಯುತ್ತಲೇಇದೆ….!  ಜಾತಿ-ಜಗಳ ನಡೆಯುತ್ತಲೇಇದೆ…!

~~  ~~  ~~  ~~  ~~  ~~ ~~  ~~  ~~  ~~  ~~  ~~ ~~  ~~  ~~  ~~  ~~  ~~ ~~  ~~  ~~  ~~  ~~  ~~ 

2. ಹಕ್ಕಿಗೂ ಮನಸಿದೆ

ಜೋರಾದ ಮಳೆ; ಬಿರುಗಾಳಿ!

ಮರದ ಮೇಲಿನ ಗೂಡಿನಲ್ಲಿ ಎರಡೂ ಮರಿಗಳನ್ನು ತನ್ನ ರೆಕ್ಕೆಯೊಳಗೆ ಬಚ್ಚಿಟ್ಟುಕೊಂಡು ಕಾಯುತ್ತಿತ್ತು ತಾಯಿಹಕ್ಕಿ.

ಕಾರ್ಟೂನಿನಲ್ಲಿ ಇದನ್ನೇ ನೋಡುತ್ತಿದ್ದ ಆರುವರ್ಷದ ಪಾಪುವಿಗೆ ಏನನ್ನಿಸಿತೋ ಏನೋ!

ಕಳೆದ ವಾರವಷ್ಟೇ ತಂದ ಎರಡೂ ಗಿಳಿಗಳನ್ನೂ ಮನೆಯ ಗೂಡಿನಿಂದ ಹಾರಿಬಿಟ್ಟಿತು!

‘ಅವುಗಳಿಗೂ ಮರಿಯಿರಬಹುದು ಅಲ್ವಾ ಪಪ್ಪಾ…!? ತಂದೆನಿರುತ್ತರ…!!

 

 

 

 

– ಅಶೋಕ್ ಕೆ.ಜಿ.ಮಿಜಾರು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: