ಕತ್ತಾಳೆ
ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ ‘ಕತ್ತಾಳೆ’ ಎಂಬ ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರೆಂದು ಇತ್ತೀಚೆಗೆಷ್ಟೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳಿದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.
ಕಾಡು ಬೆಳೆ ಕತ್ತಾಳೆಗೂ ಅದರದ್ದೇ ಆದ ಸ್ತಾನ ಇದೆ .ಇದರ ನಾರಿನ ಹಗ್ಗ ಬಲು ಗಟ್ಟಿ ಎಂದು ಕೇಳಿದ್ದೇನೆ.ಮಾಹಿತಿ ಉಪಯುಕ್ತ .
GOOD ARTICLE ABOUT KATTHALE.
ಕತ್ತಾಳೆಯನ್ನು ,ಚಿತ್ರದುರ್ಗದ ಕಡೆ ಹೊಲದ ಅಂಚಿಗೆ ಬೇಲಿಯಂತೆ ಬೆಳಸಿ ,ಅದರ ಎಲೆಗಳನ್ನು ಕೆರೆಗಳಲ್ಲಿ ಹಾಕಿ ಕೊಳೆತ ಮೇಲೆ ( Retting of fibres )ನಾರನ್ನು ಒಣಗಿಸಿ ,ಹಗ್ಗ ಹೊಸೆಯುವುದನ್ನು ನಾನು ಚಿಕ್ಕಂದಿನಲ್ಲೇ ನೋಡಿದ್ದೆ ! ನಾನೂ ಹಗ್ಗ ಹೊಸೆಯಲು ಪ್ರಯತ್ನಿಸುತ್ತಿದ್ದೆ !
ಈಗೆಲ್ಲ ಯಂತ್ರ ಬಳಸಿ ಮಾಡುವುದನ್ನೂ ನೋಡಿದ್ದೆ !
ಕತ್ತಾಳೆ ಕ್ಯಾಕ್ಟಸ್ ಅಲ್ಲ ! ಕತ್ತಾಳೆಯಂತೆ ಕಾಣುವ ಪುಟ್ಟ succulent cacti ಗಳು ಇರುತ್ತವೆ !
ಕತ್ತಾಳೆ ನೀವು ಹೇಳಿರುವಂತೆ Agave americana ಎಂಬ ಹೆಸರಿನ Agavaceae ಕುಟುಂಬಕ್ಕೆ ಸೇರಿದ ಸಸ್ಯ ! cactus ಗಳು( ಸಾಧಾರಣವಾಗಿ ತುಂಬಾ ಮುಳ್ಳಿರುತ್ತವೆ ) Cactaceae ಕುಟುಂಬಕ್ಕೆ ಸೇರಿವೆ !
During olden days farmers used it for preparing some medicines for cows, baffellows and even for human beings. Thank u for giving info.