ಯುಗಾದಿಯ ಶುಭಾಶಯಗಳು..

Spread the love
Share Button

ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಇಂದು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಕರ್ನಾಟಕದಲ್ಲಿ ಯುಗಾದಿ, ನೆರೆಯ ಕೇರಳ ರಾಜ್ಯದಲ್ಲಿ ವಿಷು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಉತ್ತರದ ಪಂಜಾಬಿನಲ್ಲಿ ವೈಶಾಖಿ  ಹೀಗೆ ಹಲವಾರು ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ತಾವು ಅನುಸರಿಸುವ ಚಾಂದ್ರಮಾನ, ಸೌರಮಾನ ಅಥವಾ ಬೃಹಸ್ಪತಿ ಕ್ಯಾಲೆಂಡರ್ ನ ಅನ್ವಯ ದಿನಾಂಕಗಳೂ ಬೇರೆ ಬೇರೆ ಆಗಿರುತ್ತವೆ. ಆದರೆ ಎಲ್ಲರ ಉದ್ದೇಶಗಳು ಒಂದೆ. ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಮತ್ತು ಲೋಕಾ: ಸಮಸ್ತಾ: ಸುಖಿನೋ ಭವಂತು!

 

    

‘ಜಯ’ ಸಂವತ್ಸರ ಎಲ್ಲರಿಗೂ ಶುಭ ತರಲಿ ಎಂದು ಆಶಿಸುತ್ತೇವೆ.ಶ್ರೀ ದ.ರಾ. ಬೇಂದ್ರೆ ಯವರು ರಚಿಸಿದ ಚಿರನೂತನ ಹಾಡು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ …”  ಹಾಡಿನ ಧ್ವನಿ ಮುದ್ರಣ ಇಲ್ಲಿದೆ. ಕೇಳಿ ಅನಂದಿಸಿ.

ಜನವರಿ 15, 2014 ಸಂಕ್ರಾಂತಿಯಂದು ಆರಂಭವಾದ ಸುರಹೊನ್ನೆ ಜಾಲತಾಣವು ನಿಧಾನವಾಗಿ ಬೆಳೆಯುತ್ತಿದೆ. ದಿನೇ ದಿನೇ ಉತ್ತಮ ಲೇಖನಗಳಿಂದ ಸಂಪನ್ನವಾಗುತ್ತಿದೆ. ಈ ಎರಡುವರೆ ತಿಂಗಳಿನಲ್ಲಿ 120 ಬರಹಗಳು ಪ್ರಕಟಗೊಂಡಿವೆ. ಜಾಲದ ವಿನ್ಯಾಸದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ.

‘ಸುರಗಿ ಬಳಗ’ಕ್ಕೆ ಹೊಸ ಸದಸ್ಯರು ಸೇರುತ್ತಿರುವುದು ಸಂತಸದ ಸಂಗತಿ. ಇನ್ನೂ ಬಹಳಷ್ಟು ಮಂದಿ ನಮ್ಮ ಜಾಲವನ್ನು ವೀಕ್ಷಿಸಿ, ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರೆಲ್ಲರಿಗೂ ವಂದನೆಗಳು..

 

– ಸಂಪಾದಕಿ.

3 Responses

 1. Sangeeta Muraleedhar says:

  ಯುಗಾದಿಯ ಹಾಡು ಹಾಗೂ ಚೆನ್ನಾದ ಬರಹ, ಚಿತ್ರಗಳ ಮೂಲಕ ಶುಭಾಶಯಗಳನ್ನು ಕೋರಿದ ಸಂಪಾದಕರಿಗೂ, ಎಲ್ಲ ಓದುಗರಿಗೂ, ನಮ್ಮ ಬಳಗಕ್ಕೂ ಹೊಸ ವರುಷದ ಶುಭಾಶಯಗಳು.

  ಸುರಗಿ ಈ ವರುಷ ಮತ್ತಷ್ಟು ಬೆಳೆದು ಹೆಮ್ಮರವಾಗಿ ನಾಡಿನಾದ್ಯಂತ ಸುಗಂಧವನ್ನು ಪಸರಿಸಲಿ.. 🙂

 2. Rakesh says:

  Dear Surahonne team,

  Wish you happy Yugadi. All the best! I wish the site to flourish and shine further!

 3. Rekha B.P says:

  ಹಾಡು ತುಂಬಾ ಮುದ ನೀಡಿತು. ಈ ಹಾಡನ್ನು ಹಬ್ಬದ ದಿನ ಕೇಳಲಿಲ್ಲವಲ್ಲ ಅಂತ ಬೇಸರಿಸಿದ್ದೆ ಈಗ ಖುಷಿಯಾಯಿತು .

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: