ಅಮೂರ್ತ ವಿಸ್ಮಯ

Spread the love
Share Button

ಮುನಿಸಿಕೊ೦ಡಷ್ಟೂ ಕತ್ತಲು

ತೆಳ್ಳಗೆ ಸೀಳಿ ಬರುತ್ತಿದೆ
ಭರವಸೆಯ ಬೆಳಕು.
ಕೊಟ್ಟು ಕೊಳುವ ಬೆಳಕ ಬಯಲಿನಲ್ಲಿ
ನೂರು ಭಾವಗಳ ತೇರು
*******************
ಮೊಗ್ಗೆಯೊಡೆಯುವ ಚಿಗುರು ಕನಸಿಗೆ
ಆಳದಲ್ಲೆಲ್ಲೋ ಹುದುಗಿ ಎದೆಯ ಬಸಿದು
ಎರಕ ಹೊಯ್ಯುತ್ತಿದೆ ಬೇರು
ದಳ ದಳಗಳನ್ನೆಲ್ಲಾ ಬಿಡಿಸಿ ಪರಿಮಳ
ಪುಳಕಿಸಿದೆ ಹೂವು
ಸದ್ದಿಲ್ಲದ ವಿಸ್ಮಯಕ್ಕೆ ಸೂರ್ಯನಿಗೂ ಬೆರಗು
****************************
ನೆಲದ ನೋವಿಗೆ ಆ ಪರಿ
ಪರಿತಪಿಸುತ್ತಿದೆಯಲ್ಲ ಮುಗಿಲು
ಅಲ್ಲಿ ಬೆಚ್ಚಿ ಬೆದರಿದ ಸದ್ದಿಗೆ
ಇಲ್ಲಿ ನೇವರಿಸಿ ಸ೦ತೈಸುವ ಹಸಿರು
**********************
ಕಾಣದೂರಿನಲ್ಲಿ ಯಾರೋ
ಕಳವಳಿಸುವ ಸದ್ದಿಗೆ
ಕಾರ್ಯ ಕಾರಣವಿಲ್ಲದೆ ಕ೦ಪಿಸುತ್ತದೆ ಒಡಲು
ನಿರ೦ತರ ತೊನೆದಾಡುವ ಅಮೂರ್ತ ಭಾವಕ್ಕೆ
ಹಸನಾಗುತ್ತಿದೆ ಬದುಕು
ಸಾಕ್ಷಿಯಾಗುತ್ತಿದೆ ಕವಿತೆ ಸಾಲು.
*****************************

-ಸ್ಮಿತಾ ಅಮೃತರಾಜ್, ಸ೦ಪಾಜೆ.
ಕೊಡಗು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: