ಸ್ಮಾರ್ಟ್ ಶಿಕ್ಷಣಕ್ಕೆ ಎಜ್ಯುಕಾಂಪ್

Spread the love
Share Button

 

Surendra P

ಜಗತ್ತು ಈಗಾಗಲೇ ಸಾಕಷ್ಟು ಹೊಸ ಹೊಸ ಸಂಶೋಧನೆಗಳನ್ನು ಮಾಡಿದೆ ಹಾಗೂ ಮಾಡುತ್ತಲೇ ಇದೆ. ಆಧುನಿಕತೆ ಎಂಬುದು ಕೆಲವೊಂದು ಕ್ಷೇತ್ರಕ್ಕೆ ಸಮೀತವಾಗಿರದೆ ಎಲ್ಲಾ ಕ್ಷೇತ್ರದಲ್ಲಿಯೂ ಅದು ತನ್ನ ವ್ಯಾಪ್ತಿಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನವಿಲ್ಲದೇ ಬದುಕುವುದು ಕಷ್ಟಕರವಾಗಿದೆ. ನಾವು ಪ್ರಗತಿಯನ್ನು ಕಾಣಬೇಕಾದರೆ ಅತ್ಯುತ್ತಮ ಶಿಕ್ಷಣ ನಮಗೆ ಬೇಕು.

ಭಾರತದಲ್ಲಿಯೂ ಕೂಡ ಎಲ್ಲಾ ವಿದ್ಯಾರ್ಥಿಗಳಿಗೂ ನೈಜ್ಯ ಹಾಗೂ ಪ್ರಾಯೋಗಿಕ ಜ್ಞಾನವನ್ನು ಬಿತ್ತರಿಸುವಲ್ಲಿ ‘ಎಜ್ಯುಕಾಂಪ್ ಸಂಸ್ಥೆ‘ಯು ಇಂದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ‘ ಸ್ಮಾರ್ಟಕ್ಲಾಸ್ ‘ ಎಂಬ ತಂತ್ರಜ್ಞಾನವನ್ನು ಬಳಸಿ ಪೂರ್ವ ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗದ ಹಂತದವರೆಗೂ ಶಿಕ್ಷಣವನ್ನು ನೀಡುತ್ತಿದೆ. ಪಠ್ಯದಲ್ಲಿರುವ ವಿಷಯಕ್ಕೆ ತಕ್ಕಂತೆ ವಿವಿಧ   ತೀಯ ಪ್ರಾತ್ಯಕ್ಷಿಕೆಗಳನ್ನು, ಆಡಿಯೋ-ವಿಡಿಯೋ ಆಧಾರಿತ ಮೊಡ್ಯುಲ್‌ಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ತೋರಿಸಲಾಗುತ್ತದೆ. ಇದರಿಂದ ಕಲಿಕೆಗೆ ಪೂರಕವಾದ ಕಲಿಕಾ ಸಾಮಗ್ರಿ ಒದಗಿಸುವ ಕಾರ್ಯ ನಡೆಯುತ್ತದೆ. ಎಲ್ಲವನ್ನು ಸಹ ಮಕ್ಕಳು ನೋಡಿ, ಕೇಳಿ ಕಲಿಯಲು ಸಹಾಯಕವಾಗಿದೆ. ಇದರ ಜೊತೆಗೆ ಕಂಪ್ಯೂಟರ ಬಳಕೆಯ ಜ್ಞಾನವು ಹೆಚ್ಚುತ್ತದೆ. ಪಠ್ಯ ವಿಷಯಕ್ಕೆ ಸಂಬಂದಿಸಿದ ಪ್ರಯೋಗವನ್ನು ನೇರವಾಗಿ ನೋಡಬಹುದು, ಮಾಡಬಹುದು. ಇದು ಎಲ್ಲಾ ರಾಜ್ಯದಲ್ಲಿಯು ಇದ್ದು, ಕರ್ನಾಟಕದಲ್ಲಿಯೂ ಅನೇಕ ಶಾಲೆಗಳು ಸ್ಮಾರ್ಟಕ್ಲಾಸ ಶಿಕ್ಷಣವನ್ನು ಒಪ್ಪಿಕೊಂಡಿವೆ.

 

Educomp in education 6

Educomp in education 3

Educomp in education 4

 

ಪ್ರಸ್ತುತ ಈ ‘ಸ್ಮಾರ್ಟಕ್ಲಾಸ’ ಶಿಕ್ಷಣವನ್ನು ಬಹುತೇಕ ಎಲ್ಲಾ ಶಾಲೆಗಳು ಅಳವಡಿಸಿಕೊಂಡಿದ್ದು, ಪಾಲಕರು ಹಾಗೂ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವಿದ್ಯಾರ್ಥಿಯು ಒಂದು ವಸ್ತುವಿನ ಗಾತ್ರ, ಆಕಾರ, ಗುಣಗಳನ್ನು ತಿಳಿಯಲು ಸಾಧ್ಯ. ವಿಜ್ಞಾನ, ಸಮಾಜ, ಗಣಿತ, ವಿಷಯಕ್ಕೆ ಸಂಬಂಧಿಸಿದಂತೆ ಹೇರಳವಾದ ಜ್ಞಾನವನ್ನು ನೀಡುತ್ತದೆ.ಇದು ಸುಲಭವಾಗಿ ಎಲ್ಲರ ಕೈಗೆಟಕುವ ದರದಲ್ಲಿ ದೊರೆಯುತ್ತಿದೆ. ಇದರಿಂದ ಶಿಕ್ಷಣದಲ್ಲಿ ಸುಧಾರಣೆಯನ್ನು ಕಾಣಲು ಸಾಧ್ಯ ಜೊತೆಯಲ್ಲಿ ಕಲಿಕೆಯು ಉತ್ಸಾಹಕವಾಗಿಯೂ ಹಾಗೂ ವೈವಿಧ್ಯಮಯವಾಗುತ್ತಿದೆ ಎನ್ನಬಹುದು.

ಸ್ಮಾರ್ಟ ಕ್ಲಾಸ ಭವಿಷ್ಯದ ಸವಾಲುಗಳನ್ನು ಎದುರಿಸಲು ಇಂದಿನಿಂದಲೇ ಮಕ್ಕಳನ್ನು ತಯಾರಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಸ್ಮಾರ್ಟ ಶಿಕ್ಷಣಕ್ಕೆ ಎಜ್ಯುಕಾಂಪ್ ಮುನ್ನುಡಿಯನ್ನು ಬರೆಯುತ್ತಿದೆ.

.
 – ಸುರೇಂದ್ರ ಪೈ, ಸಿದ್ಧಾಪುರ 

4 Responses

  1. Hema says:

    ಉತ್ತಮ ಮಾಹಿತಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  2. Sneha Prasanna says:

    Houdu.. Shikshanadalli enthaha hosa prayathna makkala kalike ge sahaayaka vagide… Edannu Ella shalegalalliyu saamannikarisabeku… Dhanyavadagalu…

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: