Monthly Archive: October 2020
ಸಂತ ಶಿಶುನಾಳ ಶರೀಫರ ರಚನೆಗಳನ್ನು ಹಾಗೂ ಕನ್ನಡದ ಭಾವಗೀತೆಗಳನ್ನು ಕ್ಯಾಸೆಟ್ಟುಗಳ ರೂಪದಲ್ಲಿ ಹೊರತರಲು ಕಾರಣರಾದ ಸಹೃದಯ ಕವಿ,ವಿಮರ್ಶಕ, ಚಿಂತಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ನಮ್ಮ ತಂದೆಯವರ ಆಪ್ತಸ್ನೇಹವಲಯಗಳಲ್ಲಿ ಇದ್ದವರೇ. ಎಪ್ಪತ್ತರ ದಶಕದಲ್ಲಿ ಕೆ ಎಸ್ ನ ರ ಶೈಲಿ ನವೋದಯದಿಂದ ನವ್ಯಕ್ಕೂ ಪಲ್ಲಟಗೊಂಡಿದ್ದನ್ನು ತಾರ್ಕಿಕವಾಗಿ ವಿಶ್ಲೇಷಿಸಿ “ಹೊರಳು ದಾರಿಯಲ್ಲಿ ಕೆ...
ಪ್ರಕೃತಿಯ ಮಡಿಲಲ್ಲಿ ಅವೆಷ್ಟು ಸಸ್ಯ ಸಂಕುಲಗಳು! ಆಯಾಯ ಪ್ರದೇಶದ ಭೌಗೋಳಿಕ ಅಂಶವನ್ನು ಹೊಂದಿಕೊಂಡು ಬೆಳೆಯುವ ಸಸ್ಯಗಳ ಸಂಖ್ಯೆಗೆ ಮಿತಿಯುಂಟೇ? ನೆಲದ ಮೇಲೆ ಬೆಳೆಯುವ ಪುಟ್ಟ ಗಿಡಗಳು, ಬಳ್ಳಿಗಳು, ಪೊದೆ ಸಸ್ಯಗಳು, ಆಕಾಶದೆತ್ತರಕ್ಕೆ ತನ್ನ ಕೊಂಬೆ ರೆಂಬೆಗಳನ್ನು ಚಾಚಿ ಬೆಳೆಯುವ ಮರಗಳು! ಮರಗಳನ್ನು ಆಶ್ರಯಿಸಿ ಬೆಳೆಯುವ ಬಂದಣಿಕೆ ಗಿಡಗಳು! ...
ಟಪಟಪನೆ ಉದುರಿದ ನಾಲ್ಕು ಹನಿಗೆ ಭುಗಿಲೆದ್ದ ಒಡಲ ಧಗೆ ಕನಸಿನ ಲೋಕದ ಬಾಗಿಲು ತೆರೆದಂತೆ ಹೊರ ಹೊಮ್ಮಿದ ಮಣ್ಣ ವಾಸನೆ ಬಿಸುಸುಯ್ದು ಮೆಲ್ಲನೆ ನಾಚಿ ನಸು ನಕ್ಕ ವಸುಂಧರೆ ತಣ್ಣಗೆ ನರಳಿ ಕಣ್ಮುಚ್ಚಿ ಹೊರಳಿ ಬಾಯಾರಿ ಅರಳಿದ ಮರ , ಗಿಡಬಳ್ಳಿ ಅಂಗಾಂಗ ನಿಶ್ಯಬ್ದ ನೀರವ ನಿರಾತಂಕ...
ಮೇಘದ ಅಲೆಗಳ ಬೆನ್ನೇರಿ. (ಪ್ರವಾಸ ಕಥನ) ಲೇಖಕರು: ಶ್ರೀಮತಿ ಹೇಮಮಾಲಾ. ಶ್ರೀಮತಿ ಹೇಮಮಾಲಾ ತಮ್ಮ ಮೊದಲ ಮಾತುಗಳಲ್ಲಿ ದೇಶಸುತ್ತಿ, ಕೋಶಓದಿ ಜ್ಞಾನಾರ್ಜನೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಸತ್ಯವಾದ ಮಾತು. ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಇಪ್ಪತ್ತೆರಡು ವರ್ಷ ಸೇವೆ ಸಲ್ಲಿಸಿರುವ ಇವರು ತಮ್ಮ ಕಾರ್ಯ ನಿರ್ವಹಣೆಯ ಸಂಬಂಧದಲ್ಲಿ ಪ್ರವಾಸ...
ಪ್ರವಾಸವೆಂದರೆ ಖುಶಿಪಡದವರು ಯಾರು? ದಿನ ದಿನದ ಕೆಲಸಗಳ ಒತ್ತಡದಲ್ಲಿ, ಎಲ್ಲಿಗಾದರೂ ಸರಿ, ಕುಟುಂಬ ಸಮೇತ ಸ್ವಲ್ಪ ದಿನ ಹೊರಗಡೆ ಸುತ್ತಾಡುವುದು ಮೈಮನಸ್ಸನ್ನು ಹಗುರಗೊಳಿಸಿ ಮುಂದಿನ ದಿನಗಳ ಕೆಲಸಗಳಿಗೆ ಸ್ಫೂರ್ತಿಯನ್ನೀಯುತ್ತದೆ. ಆದರೆ, ಕೈಯಲ್ಲಿರುವ ಹಣದ ಲಭ್ಯತೆಗೆ ಅನುಸಾರವಾಗಿ ಪ್ರವಾಸವನ್ನು ರೂಪಿಸಬೇಕಾಗುವುದು ಅಗತ್ಯ ತಾನೇ? ಹಿಂದಿನ ಕಾಲದಲ್ಲಿ ಯಾತ್ರೆಯೆಂಬುದಾಗಿ ಹೆಸರಿಸಲ್ಪಡುತ್ತಿದ್ದ...
ಹಿರಿಯ ಜೀವ ಎಂದೆನ್ನದೆ ಹೊರಗಟ್ಟುವರು ಈ ಜಗದಿ ಅರಿಯಬೇಕು ಮುಂದೆ ಕಾಲಚಕ್ರವು ಉರುಳುವುದೆಂದು ಮರೆತು ಹೋಯಿತೇ ಬಾಲ್ಯದಿ ತೋರಿದ ಪ್ರೀತಿ ವಾತ್ಸಲ್ಯ ಮನಸಲಿ ಅಳಿದೇ ಹೋಯಿತೇ ಅವರ ಶ್ರಮದ ಕಷ್ಟ – ಕಾರ್ಪಣ್ಯ ಸ್ವಾರ್ಥ ಲಾಲಸೆಯ ಈ ಬದುಕಲಿ ಮರೆಯಬೇಡ ಹೆತ್ತವರ ಮಂದಹಾಸ ತೆರೆದಿಡು ಹೃದಯದ ಕಣ್ಣನು...
“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತೆಂದೆತ್ತ ಸಂಬಂಧವಯ್ಯ” ಎನ್ನುವಂತೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಹೆಣ್ಣು ಗಂಡು ವಿವಾಹ ಎಂಬ ಬಂಧನಕ್ಕೊಳಗಾಗಿ ಸತಿ ಪತಿಗಳಾಗಿ ಪರಸ್ಪರ ಪ್ರೀತಿ, ಪ್ರೇಮ, ಆದರದಿಂದ ಹೊಂದಿಕೊಂಡು ಬಾಳುವುದೇ ಒಂದು ಆದ್ಭುತ ಎನಿಸುತ್ತದೆ. ರಕ್ತ ಸಂಬಂಧಿಗಳಾದ ಕಾರಣಕ್ಕೆ ಅಣ್ಣ ತಮ್ಮ, ಅಕ್ಕ ತಂಗಿ,...
‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಬಹಳಷ್ಟು ಸಾರಿ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಚ್ಚರಿಸಿ ಬುದ್ದಿ ಹೇಳುವಾಗ ಒಮ್ಮೆಯಾದರೂ ಅವರ ನಾಲಗೆಯ ಮೇಲೆ ಈ ಜನಪ್ರಿಯ ಗಾದೆ ಮಾತು ಮಿಂಚಿನಂತೆ ಸುಳಿದು ಹೋಗುತ್ತಿತ್ತು. ನಾನು ಪ್ರೌಢಶಾಲೆ ಓದುವ ಸಮಯದಲ್ಲಿ ಮನೆ-ಸಂತೆ-ಶಾಲೆ ಇವು...
ಪ್ರತಿ ವರ್ಷ ರಜಾ ಕೊಡುತ್ತಾರೆ ನಿನ್ನ ಜಯಂತಿಯ ಆಚರಣೆಗೆ ಆಸ್ಪತ್ರೆಗಳಲ್ಲಿ ಹಣ್ಣು ಹಂಚುತ್ತಾರೆ ನಾಯಕರುಗಳು ರೋಗಿಗಳಿಗೆ. ಸದಾ ನೆನಪಿಸುವಂತೆ ಇಟ್ಟಿದ್ದೇವೆ ನಿನ್ನ ಹೆಸರನ್ನು ನಾನಾ ಕಡೆಗಳಲ್ಲಿ ಲೋಹದ ಮೂರ್ತಿಗಳನ್ನು ಕಡೆದು ಸ್ಥಾಪಿಸಿದ್ದೇವೆ ರಸ್ತೆಗಳು ಕೂಡುವಲ್ಲಿ. ಕಾರಣಗಳೇನೇ ಇರಲಿ ಪ್ರತಿಭಟನೆಗಳಿಗೆ ಸತ್ಯಾಗ್ರಹದ ಅಸ್ತ್ರ ಬಳಸಿಕೊಳ್ಳುತ್ತಿದ್ದೇವೆ. ಓಟು ಕೇಳಲು ಉಪಯೋಗಿಸುತ್ತೇವೆ...
ಮಾತು ಬೇಸರವಾಗಿದೆ ಮೌನ ಸಾಗರ ಮೊರೆದಿದೆ ಜೀವ ಭಾವವು ನೊಂದು ಬೆಂದು ಸಾವಿನೊಲೆಮನೆ ಮುಂದಿದೆ ಗುಪ್ತಗಂಗೆಯು ಮಲಿನಗೊಂಡಿದೆ ಕಸದ ಕೊಳೆ ಕಳೆಗಟ್ಟಿದೆ ಒಳಗಿನೊಳಗಿನ ಉಸಿರುಕಟ್ಟಿ ಹಾಡು ಬಿರಿಯದೆ ಮುರುಟಿದೆ ಸುದ್ದಿ ನುಂಗಿದ ಸದ್ದುಗದ್ದಲ ಮೌನ ಕಣಿವೆಗೆ ಬಡಿದಿದೆ ಬಂಜೆಬೇನೆಗೆ ಟಿಸಿಲುಮೂಡಿದೆ ನರನರವು ಮರ್ಮರ ಮೊರೆದಿದೆ ಯುಗಯುಗದ ಕತ್ತಲು...
ನಿಮ್ಮ ಅನಿಸಿಕೆಗಳು…