ಈಗಲೀಗಲೆ ಕಾಣಲಾರೆ..
ಯಾವ ಬೇಗುದಿಯಲೋ ಅದಾವ ಸಂತಸದಲೋ ಯಾರೋ ಹೊಸೆದ ಬತ್ತಿಗಳಿಗೆ ನಾನಿಲ್ಲಿ ಬೆಂಕಿಯ ಕಿಡಿಯನಿತ್ತೆ. ಹೊತ್ತಿ ಉರಿಯಿತೋ ಜ್ವಾಲೆ ಬೆಳಗಿ ತೋರಿತೋ ದೀಪ ಆದರೀ ಕ್ಷಣಕೆ ಅದನು ಕಾಣಲಾರೆ.. ಯಾರದೋ ಹಣೆಬೆವರು ಯಾವುದೋ ಹನಿ ನೀರು; ನೆನೆದ ನೆಲಕೆ ಬಿದ್ದ ಬೀಜ- ನೂರು ಬುತ್ತಿ; ಉಂಡು ಚೆಲ್ಲಿದ ಅನ್ನ...
ನಿಮ್ಮ ಅನಿಸಿಕೆಗಳು…