ಪಕ್ಷಿ ಆಕಾಶದಲ್ಲಿ ಹಾರಾಡುತ್ತದೆ. ಅದೇ ರೀತಿ ಜೇನುಹುಳು ಹೂವಿಂದ ಹೂವಿಗೆ ಹಾರುತ್ತಾ ಕಷ್ಟಪಟ್ಟು ಮಧುವನ್ನು ಸಂಗ್ರಹಿಸುತ್ತದೆ. ಅದನ್ನು ಅಂದವಾಗಿ ತಾನೇ ಕಟ್ಟಿದ ಗೂಡಿನಲ್ಲಿ ಶೇಖರಿಸುತ್ತದೆ. ಇದು ನಿರಂತರವಾಗಿ ನಡೆಯುವ ಕ್ರಿಯೆ. ಮನುಷ್ಯರು ಜೇನುಗೂಡನ್ನು ಕಿತ್ತು ಅದರಲ್ಲಿರುವ ಜೇನುತುಪ್ಪವನ್ನು ಕದಿಯುತ್ತಾರೆ.
ಒಮ್ಮೆ ಜೇನುನೊಣದ ಮಿತ್ರನಾದ ಪಕ್ಷಿಯು ಕೇಳಿತು “ಮಿತ್ರಾ ಜೇನುನೊಣವೇ, ನೀನು ಅಷ್ಟು ಕಷ್ಟಪಟ್ಟು ಕಟ್ಟಿದ ಗೂಡಿನಲ್ಲಿ ಜೇನುತುಪ್ಪವನ್ನು ಶೇಖರಿಸಿಡುತ್ತೀಯೆ. ಆದರೆ ಈ ಮನುಷ್ಯರು ಅದನ್ನು ಕದಿಯುತ್ತಾರಲ್ಲಾ, ಅದರಿಂದ ನಿನಗೆ ನೋವಾಗುವುದಿಲ್ಲವೇ?” ಎಂದು ಕೇಳಿತು.
“ಹೌದು ಮಿತ್ರಾ. ಮನುಷ್ಯರು ಜೇನುತುಪ್ಪವನ್ನು, ನನ್ನ ಗೂಡನ್ನು ಕದಿಯುತ್ತಾರೆ. ಅದನ್ನು ಅವರು ವಿಧವಿಧವಾಗಿ ಉಪಯೋಗ ಮಾಡಿಕೊಳ್ಳುತ್ತಾರೆ. ಆದರೆ ಅವರು ನಾನು ಜೇನು ತಯಾರಿಸಿವ ಕೌಶಲ್ಯವನ್ನು ಕದಿಯಲಾರರು. ಹಾಗಾಗಿ ಮತ್ತೆ ಮತ್ತೆ ನಾನು ನನ್ನ ಕೆಲಸವನ್ನು ಮಾಡುತ್ತಲೇ ಇರುತ್ತೇನೆ” ಹಾಗೇ ಮುಂದುವರೆದು “ ಸ್ವಾರ್ಥಿಯಾಗಿ ನಮ್ಮಷ್ಟಕ್ಕೆ ನಾವು ಬದುಕುವುದು ಸಾಮಾನ್ಯವಾದ ಜೀವನ ರೀತಿ. ಆದರೆ ನಾವು ನಿಸ್ವಾರ್ಥಿಗಳಾಗಿ ಬೇರೆಯವರಿಗಾಗಿ ಬದುಕುವುದು “ಜೀವನದ ಕಲೆ” ಅದು ಹೆಚ್ಚು ಮೌಲ್ಯಯುತವಾದದ್ದು” ಎಂದಿತು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು
ಅರ್ಥಪೂರ್ಣ ಕತೆ ಮೇಡಮ್
ಧನ್ಯವಾದಗಳು ಮೇಡಂ
ಅರ್ಥಪೂರ್ಣ ಕತೆ ಮೇಡಮ್
ಪ್ರಕಟಣೆಗಾಗಿ ಸುರಹೊನ್ನೆಯ ಸಂಪಾದಕರಿಗೆ ಧನ್ಯವಾದಗಳು
ಬಹಳ ಸುಂದರವಾದ, ಅರ್ಥಪೂರ್ಣವಾದ ಕಥೆ. ಉತ್ತಮ ಸಂದೇಶವಿದೆ ಕಥೆಯಲ್ಲಿ.
ಧನ್ಯವಾದಗಳು ನಯನ ಮೇಡಂ
ಉತ್ತಮ ಸಂದೇಶ ಹೊತ್ತ ಸುಂದರ, ಚಿಕ್ಕ ಚೊಕ್ಕ ಕಥೆ….ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಜೀವನದ ಕಲೆಯ ಬೆಲೆ ತಿಳಿದಿಕೊಡುವ ಚಿಕ್ಕ ಕಥೆ ಚೊಕ್ಕವಾಗಿದೆ.
ಧನ್ಯವಾದಗಳು ಪದ್ಮಾ ಮೇಡಂ