ಸ್ವಾಸ್ಥ್ಯ- ಸುವಿಚಾರ

Share Button

ಅದೆಷ್ಟೋ ಬಾರಿ ನಮಗದೆಷ್ಟು ವಿಚಾರಗಳಲ್ಲಿ ತಿಳುವಳಿಕೆ, ಅರಿವುಗಳಿವೆಯೆಂದು ನಾವಂದುಕೊಂಡಿದ್ದರೂ ಪ್ರೇರಣೆ, ಗುರಿ, ಸ್ಫೂರ್ತಿ, ಸಹಕಾರಗಳ ಬಲವಿದ್ದರೆ ಮಾತ್ರ ಮುಂದಕ್ಕೆ ಹೆಜ್ಜೆಯಿಡುವ ಸ್ಥಿತಿ ಎದುರಾಗುತ್ತದೆ. ಉದಾಹರಣೆಗೆ, ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ಅಲ್ಲಿ ಇಲ್ಲಿ ಓದಿ ಕಲೆಹಾಕಿ ಪ್ರಯೋಗಿಸಿಕೊಂಡಿದ್ದರೂ ತಜ್ಞರ ಮಾರ್ಗದರ್ಶನವಿಲ್ಲದಿದ್ದರೆ ಕೆಲವು ಬಾರಿ ಪ್ರತಿಕೂಲ ಸ್ಥಿತಿ ಅನುಭವಿಸಬೇಕಾಗುವುದುಂಟು.

ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿಗಳಿಗೇನೂ ಬರವಿಲ್ಲ. ಯಾರು ಬೇಕಾದರೂ ಮಾಹಿತಿಗಳನ್ನು ಪ್ರಪಂಚಕ್ಕೆ ಕೊಟ್ಟು ಇನ್ನಾರು ಬೇಕಾದರೂ ಆ ಮಾಹಿತಿಯನ್ನು ಪಡಕೊಳ್ಳುವ ಸೌಲಭ್ಯವಿರುವುದೊಂದು ವರದಾನ. ಅನೇಕ ಮಾಹಿತಿಗಳನ್ನು ಕೊಡಬಹುದಾದ ನಮ್ಮ ಸ್ಮಾರ್ಟ್ ಫೋನ್ ಅಂಗೈಯಲ್ಲಿರಬೇಕಾದರೆ ಅದರಲ್ಲಿ ಸರಿಯಾದುದನ್ನು ಮಾತ್ರ ಉಪಯೋಗಿಸುವುದು ಸ್ಮಾರ್ಟ್ ಆಯ್ಕೆಯಾಗುತ್ತದೆ.

 

ಆರೋಗ್ಯ, ಆಹಾರ, ಸ್ಫೂರ್ತಿ, ಗುರಿ, ಕಲಿಕೆ, ಪ್ರೇರಣೆ ಇತ್ಯಾದಿ ವಿಚಾರಗಳಲ್ಲಿ ಆಯಾಯ ಕ್ಷೇತ್ರಗಳ ತಜ್ಞರು ಸಾಕಷ್ಟು ಅನುಭವದ ಆಧಾರದಲ್ಲಿ ತಯಾರಿಸಿದ ಅಧಿಕೃತ ಯೂಟ್ಯೂಬ್ ವಿಡಿಯೋ, ಪಾಡ್ಕಾಸ್ಟ್ ಗಳನ್ನು ನಮ್ಮ ಓದುಗರ ಕೈಯಲ್ಲಿಡುವ ಪ್ರಾಮಾಣಿಕ ಪ್ರಯತ್ನವಿದು. ಈ ಮಾಹಿತಿ ಮುತ್ತಿನ ಸರಮಾಲೆ ಖಂಡಿತಾ ಉಪಯೋಗವಾಗುವುದೆಂಬ ನಂಬಿಕೆಯೊಂದಿಗೆ ಈ ಅಂಕಣವನ್ನು ನಿಮ್ಮ ಮುಂದಿಡುತ್ತಿದ್ದೇವೆ.

  • ಸುರಹೊನ್ನೆ ಬಳಗ
Follow

Get every new post on this blog delivered to your Inbox.

Join other followers: