ಪರಾಗ

Share Button

Pollen
ಸಣ್ಣ ಕಥೆಗಳಿಗೆ ‘ಸುರಹೊನ್ನೆ’ಯಲ್ಲಿ ಅವಕಾಶವಿಲ್ಲವೇ ಎಂದು ಕೆಲವು ಓದುಗ/ಬರಹಗಾರರು ಕೇಳಿರುವ ಹಿನ್ನೆಲೆಯಲ್ಲಿ ‘ಪರಾಗ’ ಅಂಕಣವನ್ನು ಆರಂಭಿಸುತ್ತಿದ್ದೇವೆ.

ಇದು ಸಣ್ಣ ಕಥೆಗಳಿಗಾಗಿ ಮೀಸಲಾದ ಅಂಕಣ. ಯಾವುದಾದರೂ ಧನಾತ್ಮಕ ವಿಚಾರವನ್ನು ಬಿಂಬಿಸುವ ಹನಿಕತೆ, ಮಿನಿಕತೆಗಳಿಗೆ ಸ್ವಾಗತ. ಮಕ್ಕಳಿಗಾಗಿ ಬರೆಯುವ ನೀತಿಕತೆಗಳಿಗೂ ಸ್ವಾಗತ. ಕಥೆಗಳು ಸುರಗಿ ಹೂವಿನ ‘ಪರಾಗ’ದಷ್ಟೇ ಪುಟ್ಟದಾಗಿ ನವಿರಾಗಿ, ಕಂಪ್ಯೂಟರ್ ಪರದೆಯ ಮೇಲೆ ಒಂದು ಪುಟದಷ್ಟು ಇದ್ದರೆ ಸಾಕು.

ಯಾವುದೇ ಪಂಥ, ಧರ್ಮ, ರಾಜಕೀಯಕ್ಕೆ ಅವಹೇಳನೆಯಾಗುವಂತಹ ವ್ಯಂಗ್ಯಕಥೆಗಳಿಗೆ ಅವಕಾಶವಿಲ್ಲ. ಹಾಗೆಯೇ, ಗೂಗಲ್ ಹುಡುಕುವಿಕೆಯಲ್ಲಿ ಬರಬಹುದಾದ ಕೆಲವು ಆಕ್ಷೇಪಾರ್ಹವಾದ ಪದಗಳನ್ನು ಸಾಂದರ್ಭಿಕವಾಗಿಯಾದರೂ ಬಳಸಿರುವ ಅಥವಾ ಕೇವಲ ಮನೋರಂಜನೆಗಾಗಿ ಬರೆದ ಧಾರಾವಾಹಿ ಮಾದರಿಯ  ಕತೆಗಳು ಬೇಡ.

‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಾದುದರಿಂದ ಕೆಲವು ತಾಂತ್ರಿಕ ಕಾರಣಗಳಿಂದಾಗಿ, ಎಲ್ಲಾ ವಿಧದ ಕಥೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂಬ ಸೂಕ್ಶ್ಮತೆಯನ್ನು ದಯವಿಟ್ಟು ಪರಿಗಣಿಸಿ. 

 

– ಸಂಪಾದಕಿ

 

 

Follow

Get every new post on this blog delivered to your Inbox.

Join other followers: