ಕಿತ್ತಳೆ ಹಣ್ಣಿನ ‘ಅರ್ಜೆಂಟ್ ಗೊಜ್ಜು’ …

Share Button

Orange huligojju
ಮನೆಯಲ್ಲಿದ್ದ ಕಿತ್ತಳೆ ಹಣ್ಣು ತಿನ್ನಲಾಗದಷ್ಟು ಹುಳಿ ಇತ್ತು. ಮೈಸೂರಿನಲ್ಲಿ ನಿನ್ನೆಯಿಂದ ಮಳೆ-ತಂಪು. ಈ ಹವೆಗೆ ಕಿತ್ತಳೆಯ ಜ್ಯೂಸ್ ಬೇಡ ಅನಿಸಿತು. ಹಣ್ಣುಗಳನ್ನು ಕೊಂಡು ತಂದವಳು ನಾನೇ ಆದುದರಿಂದ ಮನೆಯ ಇತರ ಸದಸ್ಯರ ಮೇಲೆ  ” ಹುಳಿ ಹಣ್ಣು ತಂದಿದ್ದೀರೆಂದು ” ದೋಷಾರೋಪಣೆ ಮಾಡುವ ಅವಕಾಶವೂ ಇಲ್ಲವಾಗಿತ್ತು! ಏನು ಮಾಡಲಿ ಅಂದುಕೊಳ್ಳುತ್ತಿರುವಾಗ ತಲೆಯೆಂಬ  ‘ಟ್ಯೂಬ್ ಲೈಟ್’ ಜಿಗ್ಗನೆ ಉರಿಯಿತು… ಯುರೇಕಾ!!.:D

ನಾಲ್ಕು ಅಡ್ಡವಾಗಿ ಹಣ್ಣುಗಳನ್ನು ಕತ್ತರಿಸಿ, ರಸ ಹಿಂಡಿ, ಒಂದು ಚಮಚ ಉಪ್ಪು, ಒಂದು ತುಂಡು ಬೆಲ್ಲ ಹಾಕಿ ಕದಡಿಸಿ, ಒಂದೆರಡು ಹಸಿರುಮೆಣಸಿನಕಾಯಿಗಳನ್ನು ಉದ್ದುದ್ದಕ್ಕೆ ಸೀಳಿ ಇದಕ್ಕೆ ಸೇರಿಸಿದೆ. ಅರ್ಧ ಚಮಚ ಎಣ್ಣೆಯಲ್ಲಿ ಸಾಸಿವೆ ಚಟಪಟಗುಟ್ಟಿಸಿ, ಕರಿಬೇವಿನ ಒಗ್ಗರಣೆ ಕೊಟ್ಟಾಯಿತು. ಕೇವಲ 2-3 ನಿಮಿಷದಲ್ಲಿ         ಉಪ್ಪು-ಖಾರ-ಸಿಹಿ-ಹುಳಿ ಮಿಶ್ರಿತ ರುಚಿಯ ಕಿತ್ತಳೆ ಹಣ್ಣಿನ ಗೊಜ್ಜು/ಸಾರು ಸಿದ್ಧವಾಯಿತು. ಅನ್ನದ ಜೊತೆಗೆ ರುಚಿ ಚೆನ್ನಾಗಿತ್ತು. 🙂

ಇದನ್ನು ಅತ್ಯಲ್ಪ ಕಾಲದಲ್ಲಿ ತಯಾರಿಸಬಹುದು, ಅತಿ ಸುಲಭವಾಗಿದೆ, ಹಾಗೂ ಅತಿ ಕಡಿಮೆ ಅವಧಿಯಲ್ಲಿ ಉಪಯೋಗಿಸಬೇಕು. ಹೀಗೆ ಎಲ್ಲದಕ್ಕೂ ಅರ್ಜೆಂಟ್. ಹಾಗಾಗಿ ಇದನ್ನು ‘ ಅರ್ಜೆಂಟ್ ಗೊಜ್ಜು’ ಎಂದು ಕರೆಯೋಣವೇ ?

(ಕಿತ್ತಳೆ ಹಣ್ಣಿನ ರಸ ತೆಗೆದ ಸ್ವಲ್ಪ ಸಮಯದ ಮೇಲೆ ಕಹಿಯಾಗುವುದರಿಂದ ಇದನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಬೇಕಿದ್ದರೆ ನೀರು ಸೇರಿಸಿ ತೆಳ್ಳಗೆ ಮಾಡಬಹುದು.ಒಂದು ಚಿಟಿಕೆ ಸಾರಿನಪುಡಿಯನ್ನೂ ಸೇರಿಸಬಹುದು )

 

 – ಹೇಮಮಾಲಾ.ಬಿ

3 Responses

  1. Bharathi M N says:

    Mouth watering

  2. Gopalakrishna Bhat says:

    ಹುಳಿ ಕಪ್ಪು ದ್ರಾಕ್ಷಿ ಗೊಜ್ಜು ಇದೇ ತರ ಮಾಡಿದ್ರೆ ಚೆನ್ನಾಗಿರುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: