ಗರ್ವದಿಂ ಪೇಳು ಮಿತ್ರಯಂದೊಡೆ…

Share Button
Chadrashekhar Reddy

ಚಂದ್ರಶೇಖರ.ಎಸ್. ರೆಡ್ಡಿ

ನೋಟ ಮರೆಯಾದರೇನು
ಮಾತು ಮೌನವಾದರೇನು,
ಕರ್ಣ ಕಿವುಡಾದರೇನು
ಈ ದಿನದ ಅಕ್ಷರ ಕೋಶ  ಮಿಡಿಯುವುದಿಲ್ಲವೆ.
ನೋಡಿ ನಿನ್ನ ದಶಕಗಳೇ  ಕಳದಿವೆ
ನುಡಿಯ ಕೇಳಿ ಋತುಗಳೆ ಮರೆತಿವೆ,
ಮದುರ ಬಾಲ್ಯ ನೆನಪುಗಳ ಕಾಡುತಿವೆ
ಇಂದಿಗೂ ನೆನಪುಗಳ ಒಡನಾಟ ಮಿಡಿಯುತಿವೆ.
”’
ಬಾಲ್ಯದ ಪುಟಗಳು ಸದಾ ಅಮರ
ಶಾಲೆಯ ಪುಸ್ತಕಗಳು ಮಹಾ ಸಾಗರ,
ಕಳೆದ ಕ್ಷಣಗಳು  ದಿನಗಳ ಕ್ಷೀರ
ಬರೆದ  ಪ್ರತಿಜ್ಞೆ  ಬಾಳಿಗೆ  ಪುರ .
ಹಿನ್ನೋಟ ಪಯಣ ಇಂದಿಗೆ  ಗ್ರಂಥಾಲಯ
ಮೊನ್ನೋಟ ಬರಹ ಬವಿಷ್ಯ ವಿಶ್ವಾಲಯ
ಅಕ್ಷರ ಕೋಶವೇ ಜಗತ್ತಿನ  ಚಿತ್ರಾಲಯ
ಸಂಖ್ಯೆಗಳ ಕೇಂದ್ರವೇ  ಮಾನವನ  ಮಿತ್ರಾಲಯ .
….
 
ಫೇಸ್ ಬುಕ್ ಪ್ರಿಯರಿಗೇ ಪ್ರಣಾಮದ ಸಂದೇಶ.
ಎಸ್.ಎಂ.ಎಸ್. ಸ್ನೇಹಿತರಿಗೇ ಶರಣು ಸಂದೇಶ,
ಟ್ವೀಟರ್ಸ್ ತರುಣರಿಗೇ ಮಮತೆಯ  ಸಂದೇಶ
ವಾಟ್ಸ್ ಆಪ್ ವನಿತೆಯರಿಗೇ ವಂದನೆಗಳೇ ಸಂದೇಶ .
…..
ಗೆಳೆಯರ ಬಳಗ ಒಂದಾಗುವ ದಿನ

ನುಡಿ ಸಂತೋಷದಿ ಹಂಚುವ ಕ್ಷಣ,
ನಲಿಯಿಸಿ ನಲಿದಾಡಲು ಈ ಕವನ
ವಂದನೆಗಳೊಂದಿಗೆ ನನ್ನ ನಮನ.

ಸ್ನೇಹ ಚಿರಾಯು.! 

 Freindship day
– ಚಂದ್ರಶೇಖರ.ಎಸ್. ರೆಡ್ಡಿ
..

4 Responses

 1. Avatar Niharika says:

  ಕವನ ಚೆನ್ನಾಗಿದೆ. 🙂

 2. Avatar V K Valpadi says:

  ವೆರಿ ನೈಸ್.ಅಭಿನಂದನೆಗಳು

 3. Avatar savithri s bhat says:

  ಉತ್ತಮ ಕವಿತೆ

 4. Avatar Sneha Prasanna says:

  ನಮನಕೆ ನಮನವು ನಿಮ್ಮ ಈ ಕವಿತೆಯ ಸರಮಾಲೆಗೆ
  ಸ್ನೇಹ ಜೀವಿಯಾಗಿರದ ಬದುಕೇಕೆ ಬಾಳಿಗೆ…

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: