“ದೇವರ ಸಾಲ”

Share Button
Mohini Damle (Bhavana)

ಮೋಹಿನಿ ದಾಮ್ಲೆ

ಮಗನ ಹುಟ್ಟುಹಬ್ಬದಂದು ಆನೆಗುಡ್ಡೆ , ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ….ಹೀಗೆ ದೇವಸ್ಥಾನಗಳಿಗೆ  ಕಿರುಕಾಣಿಕೆಯನ್ನು M.O. ಮಾಡುವ ಪರಿಪಾಠ ಹಲವು ವರ್ಷಗಳಿಂದ ನಡೆದುಬಂದಿದೆ. ಹಾಗೆಯೇ ಕುಟುಂಬದಲ್ಲಿ ಏನಾದರೂ ಆಪತ್ತು ಬಂದಾಗ, ಅಥವಾ ಶುಭಕಾರ್ಯದ ಮೊದಲು ವಿಶೇಷ ಪ್ರಾರ್ಥನಾ ರೂಪವಾಗಿ ದೇವರ ಬಳಿ ದುಡ್ಡು ತೆಗೆದಿಡುವುದೂ ಇದೆ.

ಈ ಸಲ ದೇವರ ಪೀಠದ ಕೆಳಗೆ ಸುಮಾರು ದುಡ್ಡು ಜಮೆಯಾಗಿ ಇನ್ನೂ ಆಯಾ ಕ್ಷೇತ್ರಗಳಿಗೆ ತಲುಪಿಸಿಲ್ಲವೆನ್ನುವ ಹೊಣೆ ನೆನಪಿಸಿತು. ಆಗ ಥಟ್ಟನೆ ಅನ್ನಿಸಿದ್ದು …ಇದು “ದೇವರ ಸಾಲ ”  ಇದನ್ನು ಚುಕ್ತಾ ಮಾಡದೇ ಮತ್ತೇನೂ ಬೇಡಲು ಹಕ್ಕಿಲ್ಲವೆನ್ನುವ ಭಾವನೆ. ಇದರ ಹಿಂದೆಯೇ ಬಂದ ಚಿಂತನೆ “ದೇವರ ಸಾಲ” ತೀರಿಸಲು ನನಗೆ ಸಾಧ್ಯವೇ? ನನ್ನ ಬದುಕಿನಲ್ಲಿ ಸುಂದರ ಸಂಬಂಧಗಳನ್ನು , ಚಂದದ ಕ್ಷಣಗಳನ್ನು, ಕರುಣಿಸಿದ ಆ ದೇವರ ಸಾಲ ಅಗಾಧ, ಅನಂತ.

ಹೀಗೇ ಕೊಡುತಿರು ದೇವಾ ಕೊನೆಯಿಲ್ಲದ ಸಾಲ
ಹಾಗೇ ನೀಡುತಿರು ಎನಗೆ ಮರಳಿಸುವ ಬಲ

 

– ಮೋಹಿನಿ ದಾಮ್ಲೆ (ಭಾವನಾ)

4 Responses

  1. Hema says:

    ಈ ಬರಹ ಎಲ್ಲರಿಗೂ ದೇವರ ಸಾಲ ಉಳಿಸಿಕೊಂಡ ಎಲ್ಲರಿಗೂ ಅನ್ವಯಿಸುತ್ತೆ.. ಚೆನ್ನಾಗಿದೆ. .

  2. ಸರ ಕಾರ ಕ್ಕೆ ಸಲ್ಲುವ ದೇವಾಲಯಗಳ ಗಂಟು
    ಈಗ ಆ ಸಾಲಕ್ಕೆ ಅಂತ ಕೊಟ್ಟ ಹಣ ಎಲ್ಲಿಗೆ ಹೋಗುತ್ತಿದೆ ಅಂತ ಕಂಡು ಕೊಳ್ಳುವುದೂ ವಿಹಿತ

    • Bhavana says:

      ನೀವು ಹೇಳೋದು ಸರಿ. ಆದರೆ, ನನ್ನ ಸಾಲಪಾವತಿಯಾಗುವ ದೇವಳ (ದೇವರು) ಗಳ ಸನ್ನಿಧಿಯಲ್ಲಿ ನಿತ್ಯ ಅನ್ನದಾನ ನಡೆಯುವುದರಿಂದ ನನ್ನ ಕಾಣಿಕೆಯ ಸದ್ವಿನಿಯೋಗವಾಗುವುದೆಂಬ ಸಾರ್ಥಕಭಾವ ಇದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: