ದನಕಾಯಾಕ ಹೋಗಬೇಕ ಅನಸ್ತದ

Share Button
Basavaraja  Jotiba Jagataapa

ಬಸವರಾಜ ಜೋತಿಬಾ ಜಗತಾಪ

 

ಪ್ರಕೃತಿಯೋಳಗ ಅಗದಿ ಸಿಸ್ತ ಚೋಲೊ ಗಾಳಿ ಹವಾಮಾನದಾಗ ಶುದ್ದ ಗಾಳಿ ಕುಡಕೊಂಡ ಆರೋಗ್ಯವಾಗಿರೊದ ಚೋಲೊ ಅಂತಿರೋ ಏನ ವಿಮಾನದಾಗ ಹತ್ತಿಹೋಗಿ ಅಶುದ್ದ ಕಲುಷಿತ ವಾತಾವರಣ ದೊಳಗ ಪಟ್ಟಣದಾಗ ದುಡ್ಡಿಗೆ ದಾಸರಾಗಿರೊದ ಚೋಲೊ ಅಂತಿರೊ.ನಾನಂತೂ ದುಡ್ಡಿಗೆ ದಾಸ ಆಗಿ ದೇಸಾ ಬಿಟ್ಟನಿ.

ಒಂದೊಂದು ಸರೆ ಹಿಂಗ ಅನಸ್ತತಿ ಎಲ್ಲಾ ಬಿಟ್ಟ ಸುಮ್ಮನ ದನಕಾಯಾಕ ಹೋಗಬೇಕ ಅನಸ್ತದ.ಎನ ತೆಲಿ ತಿಂತಾರಪಾ ಆ ಕೆಲಸ ಈ ಕೆಲಸ ಅದ್ಯಾಕಾಗಿಲ್ ಇದ್ಯಾಕಾಗಿಲ್ಲ.ಅಲ್ಲೆನ ಮಾಡತಿದ್ದಿ ಇಲ್ಲೆನ ಮಾಡತಿದ್ದಿ.ಮತ್ತ ಇಷ್ಟ ಅಲ್ಲದ ಕೆಲಸದ ವೇಳೆ ಸ್ಮಾರ್ಟ ಪೋನ ಉಪಯೋಗ ಮಾಡಬಾರದಂತ.ಮುಖ ಪುಸ್ತಕ ನೋಡಬಾರದಂತ ಹೊಗ್ಲಿ ಬಿಟ್ಟವಿ ಪಗಾರ ಕೊಡತಾರಲ್ಲಪಾ ಅನ್ನೂ ಕಾರಣಕ್ಕರ ಆದರೂ. ಒಬ್ಬ ಮನುಷ್ಯಾನ ಸ್ವಾತಂತ್ರ ಕಿತ್ತಗೊಳೊ ದೊಡ್ಡವರಿಗೆ ಏನ ಮಾಡಬೇಕಾ ಅನಸ್ತದ ಅವರ ಮಾತ್ರ ನಮಗ ಬ್ಯಾಡ ಅಂತ ಹೇಳಿ ಇಪ್ಪತ್ತನಾಕ ತಾಸ ಹಸರ ಲೈಟ್ ಹಚ್ಚಕೊಂಡ ಕುಂತಿರತಾರ ಮುಖ ಪುಸ್ತಕದಾಗ.ಅದಿರಲಿ ಇಗಾ ಹೇಳೊದೆನಪಾ ಅಂದರ ಈ ದನ ಕಾಯುವ ಕೆಲಸ ಆರಾಮ ನೋಡರೀ.

ಮುಂಜೆನೆದ್ದ ಮನಿಯೋಳಗಿನ ಕೆಲಸಾ ಮಾಡಿ ಜಳಕಾ ಮಾಡಿ ದೇವರಿಗೆ ಕೈ ಮುಗದ ನಾಕ ರೊಟ್ಟಿ ತಿಂದ ನಾಕ ರೊಟ್ಟಿ ಕಟಕೊಂಡ ದೊಗಲಚೀಲ ಬಗಲಿಗೊಂದ ಹಾಕ್ಕೊಂಡ.ಅದರಾಗ ರೊಟ್ಟಿಗಂಟ ಇಟಕೊಂಡ ಒಂದ ನಾಕ ಲೀಟರ ನೀರಿನ ತಂತ್ರಾಣಿಗಿ ಹೆಗಲಿಗೆ ಹಾಕೊಂಡ.ಪಾವಸೇರ ಅಡಿಕಿ,ಇಪ್ಪತ್ತ ಎಲಿ ಒಂದ ಸುಣ್ಣದಕಾಯಿ ಕಿಸೆದಾಗ ಇಟಕೊಂಡ ಆರಾಮ ಎಲಿ ಅಡಕಿ ತಿನಕೊಂತ ದನ ಮೇಯಿಸಿ. ಹೈನಾ ಮಾಡಿ ಹಾಲ ಮಾರಿದ ರೊಕ್ಕದಾಗ ಒಂದ ಚೋಲೊ ಸ್ಮಾರ್ಟ ಮೋಬೈಲೊ, ಟ್ಯಾಬೋ ತೊಗಂಡ ಅದಕ ಒಂದ ಆರ ಜಿ ಬಿ ತಿಂಗಳಾ ನೆಟ್ ಹಾಕಿಸಿ.ಒಂದ ಬ್ಯಾಟರಿ ಬ್ಯಾಂಕು ತೊಗಬೇಕ ಮತ್ತ ಯಾಕಂದರ ಬ್ಯಾಟರಿ ಪಿಕ್ ಅಪ್ ಇರೊದಿಲ್ಲ ಅಡವ್ಯಾಗ (ಕಾಡಿನೊಳಗ) ಕರೆಂಟ ಇರೊದಿಲ್ಲ.ಇಗ ಎಷ್ಟ ಬೆಕಾದಷ್ಟು ಮುಖ ಪುಸ್ತಕ ನೋಡ ವಾಟರಶಾಪ್ರ ನೋಡ ವಾಟ್ಸಪ್ನರ ನೋಡ,ಚಾಟಿಂಗರ ಮಾಡ ಪಾಟಿಂಗರಮಾಡ,ಎಷ್ಟರ ಕವಿತೆ,ಕವನ ಹಾಡ ಬರಿ,ಓದ ಯಾರು ಕೇಳಾವರ ಇಲ್ಲ.

Cow-boy-field

ದನಗೋಳಿಗೆನರಿಪಾ ಚೋಲೊ ಹಸಿರ ಹುಲ್ಲ ಇದ್ದಲ್ಲಿ ಹಳ್ಳದ ದಂಡ್ಯಾಗೊ,ಅಡವ್ಯಾಗೊ ಬಿಟ್ಟರ ಹೊಟ್ಟಿತುಂಬ ಮೇಯಿದ ನೀರಡಿಕಿ ಆದಾಗ ಅಂಬಾ ಅಂತ ಒದರತಾವ ಅಷ್ಟ ಅವ ನೀಮ್ಮ ಸ್ವಾತಂತ್ರಕ್ಕ ದಕ್ಕೆ ತರಲ್ಲ.ಏನ ಮೇಲಧಿಕಾರಿಗೋಳ ಕಾಟರಿ ಕಾರ್ಪೋರೆಟ ಕಂಪನಿಯೋಳಗ ಥೋ ಥೋ ಥೋ ಬ್ಯಾಡಪಾ ನಾ ಹೇಳಾಕ ಒಲ್ಲೆ ಅದನ.ಅವರ ಮಾತ್ರ ಡವ್ ಗೋಳಕುಡ ಚಾಟಿಂಗನಾಗ ಇರತಾರ.ಹಸರ ಕಂಡಲ್ಲಿ ಮೇಯ್ದ ನೀರ ಕಂಡಲ್ಲಿ ಕುಡುದ ಬರೊ ದನ ಇವರಿಗಿಂತ ಬಾಳ ವಾಸಿ ಎನಂತಿರಿ?ಮತ್ತ ಇಷ್ಟ ಅಲ್ಲ ಸಂಜಿನ್ಯಾಗ ಬಂದ ಹಿಂಡಕೊಂಡಷ್ಟ ಹಾಲಕೊಡತಾವ ಮಾರಿದರ ರೊಕ್ಕ ಬರತಾವ.“ಮಾಡಿದರ ಮನಿ ದುಡದರ ಹೊಲ” ಅನ್ನೊ ಮಾತೆನ ಸುಳ್ಳೆನರಪಾ.ಯಾಕಬೇಕ ಹೊಟ್ಟಿ ಪಾಡಿಗಿ ಇಷ್ಟ ಕಷ್ಟ ಆ ತಲೆಬಿಸಿ ಬ್ಯಾಡೊ ಬ್ಯಾಡ ಅನಸ್ತತಿ.ಆದರೂ ಚೋಲೊ ಡ್ರೇಸ್ ಹಾಕ್ಕೊಂಡ ಬೈಕ ಕಾರು,ಕಾರಬಾರು ಅಂತ ಓಡ್ಯಾಡವರ ನೋಡಿ ನಾವು ಏನರ ಹೆಸರಮಾಡಬೇಕು ಅಂತ ಬಂದರ ಬ್ಯಾಡದರ ಪಡಿಪಾಟಲ ನಾ ಹೇಳಾಕ ಒಲ್ಲೆ.ಆದರೂ ಎನ ಹೇಳರಿ ಅನಕೊಂಡಿದ್ದ ಮಾಡಿದಾಗ ಸೀಗೊ ಖುಷಿ ಮುಂದ ಮತ್ಯವದೂ ಎಲ್ಲಾ ಸೊನ್ನೆ.

ಎನ್ ಹೇಳರಿ ಊರಾಗಿದ್ದ ಹೊಲಮನಿ ಕೆಲಸಾ ಮಾಡಿ ಲಕ್ಷಗಟ್ಟಲೇ ಗಳಿಸಿದರೂ ಯಾರು ಹೆಣ್ಣ ಕೊಡಾಕ ಮುಂದ ಬರೊದಿಲ್ಲ.ಅದ ನಾಕ ಅಕ್ಷರ ಕಲತಿವಂತ ಸಿಟಿಕಡೆ ಹೋಗಿ ದುಡದ ಅಲ್ಲಿಂದ ವಿಮಾನ ಹತ್ತಿ ಪಾರಿನ್ನಕ್ಕ ಬಂದಾಗ ಏನ ಕೇಳತಿರಿ ಸುದ್ದಿ.ಹೆಣ್ಣಕೊಡತೆನ ಅನ್ನಾವರ ಸಿಟಿಯೋಳಗಿರಾವರಿಗೆ,ಪರದೇಶದಾಗ ಇರಾವರಿಗೆ ಹೆಣ್ಣಕೊಡಾಕ ಅವರಪ್ಪ ಅವ್ವಗ ನಿಮ್ಮ ಹಿರೇಮಗಗ ಕನ್ಯೆತಗದಿರೆನ,ಸಣಣ್ಣಾವ ಅದನಲ್ಲರಿ ಅದ ಪಾರಿನ್ನ ದಾಗ ಅದನಲ್ಲಾ ಅವಂಗ ಕನ್ಯಾ ನೋಡದ್ದವಿ  ಅಂತ ಪೋನ ಮಾಡೊ ಬೀಗರ ಬಾಳಮಂದಿ. ಇವರ ತಂದಿ ತಾಯಿ ಇನ್ನ ಇಲ್ಲ ದೊಡ್ಡಾವಂಗ ನೋಡಾತೆವಿ ಅಂತಾರ.ಅವ ಏನ ಕೆಲಸ ಮಾಡಾಕತಾನ ಅಂದಾಗ ಕಮತಾ ಮಾಡತಾನ(ರೈತಾಪಿ ಕೆಲಸ)ಅಂದರ ಅವಂಗ ಪಿಕ್ಸ ಆಗಿಂದ ಅಟ ನಮಗ ಪೋನ ಮಾಡರಿ ನಿಮ್ಮ ನೌಕರಿ ಹುಡಗಗ ಕನ್ಯೆ ಅದಾವ ಅಂತಾರ.ಹಿಂಗಾದಾಗ ಯಾವ ನವ ಯುವಕರ ಹೊಲಮನಿ ಕೆಲಸಾ ಮಾಡಾಕ ಮನಸ ಮಾಡತಾರರಿ.ಅದಕ ನಮ್ಮ ಧಾರವಾಡ ತಾಲ್ಲೂಕ ಶಾಸಕರ ಶ್ರೀ ವಿನಯ ಕುಲಕರ್ಣಿ ಸಾಹೇಬರ ಪ್ರತಿಯೊಂದ ಬಾಷಣದಾಗ ಹೇಳತಾರಂತ ರೈತರಿಗೆ ಕಮತಾ ಮಾಡಾವರಗೆ ಕನ್ಯೆ ಕೊಡರಿ ಅಂತ.

ಹೇಳಕೊತ ಹೋದರ ಬಾಳ ಅದ ಎನ್ ಮಾಡೊದ ಇಗಾ ವಿಷಯ ಇಷ್ಟರೀಪಾ ಹೈಸ್ಕೂಲದಾಗ ಇದ್ದಾಗಿಂದ

cowsನನ್ನ ಹೈ ಪೈ ಕನಸೆನಪಾ ಅಂದರ ದೊಡ್ಡ ಪ್ರಮಾಣದಾಗ ಹೈನುಗಾರಿಕೆ ಮಾಡಬೇಕ ಅನ್ನೊದ ಅದ ಭಾರತಕ್ಕ ಬಂದ ಮ್ಯಾಲ ಪಿಲಾನ ಮಾಡವ ಅದನಿ ಯಾರರ ಇದಕ್ಕ ಸಂಬಂದ ಪಟ್ಟಂಗ ಸಹಾಯ ಮಾಡಾವರ ಇದ್ದರ ನಮಗೊಂದ ವಿಷಯ ತಿಳಸರಿ ಅದು ಒಳಪಟ್ಟಿಗಿಯೋಳಗ ಬಂದ ಗುಟ್ಟಾಗಿ ಮತ್ತ.

ಹಂಗ ಸುಮ್ಮ ಸುಮ್ಮನ ಏನೇನರ ಬರದನಿ ಅಂತ ತಿಳಕೊಬ್ಯಾಡರಿ ತಪ್ಪಿದ್ದರ ಕ್ಷಮಸಿರಿ.ಕಷ್ಟ ಪಟ್ಟ ಓದಿದ್ದಕರ ನನ್ನಕಡೆಯಿಂದ ತುಂಬೂ ಹೃದಯದ ವಂದನೆಗಳೊಂದಿಗೆ ನೀಮ್ಮವ .

 

– ಬಸವರಾಜ ಜೋತಿಬಾ ಜಗತಾಪ (ಖತರನಿಂದ)

2 Responses

  1. Girish Kotagi says:

    Avar helud khare ada.nanagu hanga anastada.bhala chaloo lekhana bardar.agadi uttam vichara

  2. ishwar says:

    ಕಾಯಕವೇ kailaasa

Leave a Reply to ishwar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: