ಸಂ-ಸ್ವಗತ-2

Share Button

ಮೂರು ವಾರಗಳ ಹಿಂದೆ ಚಾಲನೆಗೊಂಡ www.surahonne.com ಅಂತರ್ಜಾಲಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಮಾನಾಸಕ್ತರಿಂದ ಲೇಖನ, ಕಥೆ, ಹಾಗೂ ಕವನಗಳು ಬರುತ್ತಿವೆ. ಎಳೆಯ ವಿದ್ಯಾರ್ಥಿಮಿತ್ರರೂ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸ್ವಾಗತಾರ್ಹ ವಿಚಾರ. 

ಇನ್ನು www.surahonne.com  ಅನ್ನು ಓದಲು ಸಾಧ್ಯವಾಗುತ್ತಿಲ್ಲ ಎಂದು ವಿಭಿನ್ನ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ಕೆಲವರು ತಂದಿದ್ದಾರೆ. ತೊಂದರೆಯುಂಟಾದುದಕ್ಕಾಗಿ ವಿಷಾದಿಸುತ್ತೇನೆ. ಇವು ಸೈಟ್ ನ ತಾಂತ್ರಿಕ ಸಮಸ್ಯೆಯಲ್ಲ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ.

ಪ್ರತಿಯೊಬ್ಬರಿಗೂ ನಿರ್ಧಿಷ್ಟ ಆಧಾರ್ ಸಂಖ್ಯೆ ಇರುವಂತೆ, ಪ್ರತಿ ಕಂಪ್ಯೂಟರ್ ಗೆ ನಿರ್ಧಿಷ್ಟ IP Code ಇರುತ್ತದೆ. ಸಂಬಂಧಿತ ಸಾಫ಼್ಟ್ ವೇರ್ ಬಳಸಿದಾಗ ಯಾವ ಕಂಪ್ಯೂಟರ್ ನಿಂದ ನಮ್ಮ ಸೈಟ್ ಗೆ ಕ್ಲಿಕ್ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. www.surahonne.com  ಗೆ, ಭಾರತದ ಹಲವಾರು ನಗರಗಳಲ್ಲಿ ಮಾತ್ರವಲ್ಲದೆ, ಕೆಲವು ಪರದೇಶಗಳಲ್ಲೂ ಕ್ಲಿಕ್ ಬೀಳುತ್ತಿವೆ. ಇದುವರೆಗೆ ಬೇರೆ ಬೇರೆ ನಗರಗಳಿಂದ ಸುಮಾರು 100  ಕ್ಕೂ ಹೆಚ್ಚು ಕಂಪ್ಯೂಟರ್ ಗಳಲ್ಲಿ ಓದಲು ಸಾಧ್ಯವಾಗಿದೆ. ನಮ್ಮ ಗಮನಕ್ಕೆ ತರಲಾದ ತೊಂದರೆಗಳು ಹಾಗೂ ಅವುಗಳಿಗೆ ಕಾರಣವಾಗಿರಬಹುದಾದ ವಿಷಯಗಳನ್ನು, ಅಂದಾಜಿನ ಮೇರೆಗೆ ಪಟ್ಟಿ ಮಾಡುತ್ತಿದ್ದೇನೆ:

1. ಸೈಟ್ ಓಪನ್ ಅಗುವುದಿಲ್ಲ, ಬಿಳಿ ಸ್ಕ್ರೀನ್ ಬರುತ್ತದೆ.

ಬಹುಶ: ಆ ಕಂಪ್ಯೂಟರ್ ನಲ್ಲಿ ಸಾಕಷ್ಟು ಡಿಸ್ಕ್ ಸ್ಪೇಸ್ ಮೆಮೊರಿ   ಇಲ್ಲ. ಹಾಗಾಗಿ ತೀರ ನಿಧಾನವಾಗಿ ಓಪನ್ ಆಗುತ್ತಿದೆ. ಅವಶ್ಯವಿಲ್ಲದ ಮಾಹಿತಿಯನ್ನು ಹಾಗೂ ಟೆಂಪರರಿ ಫ಼ೈಲ್ ಗಳನ್ನು ಡಿಲೆಟ್ ಮಾಡಿದರೆ ಪ್ರಯೋಜನವಾಗಬಹುದು.

2.ಮೆನುಗಳು ಅಚ್ಚುಕಟ್ಟಾಗಿ ಕಾಣಿಸುವುದಿಲ್ಲ, ಅಕ್ಷರಗಳು ಚದುರಿದಂತೆ ಕಾಣುತ್ತವೆ.
ಇದಕ್ಕೆ ಕಂಪ್ಯೂಟರ್ ನಲ್ಲಿ ಮೆಮೊರಿ ಕಡಿಮೆ ಇರುವುದು ಹಾಗೂ ತೀರ ಹಳೆಯ ವಿಂಡೊಸ್ ಸಾಫ಼್ಟ್ ವೇರ್ ಕಾರಣವಿರಬಹುದು. ಸಾಫ಼್ಟ್ ವೇರ್ ಅನ್ನು ಅಪ್ ಗ್ರೇಡ್ ಮಾಡುವುದು ಒಳ್ಳೆಯದು.

3. ಓದುತ್ತಾ ಇರುವಾಗ ಆ ಪುಟ ಇದ್ದಕ್ಕಿದ್ದಂತೆ ಮಾಯವಾಗುತ್ತದೆ.
ನಾವು ಯಾವುದಾದರು ಬರಹವನ್ನು ಅಪ್ ಲೋಡ್ ಅಥವಾ ಎಡಿಟ್ ಮಾಡುತ್ತಾ ಇರುವ ಸಂದರ್ಭದಲ್ಲಿ ಹೀಗಾಗುವ ಸಾಧ್ಯತೆಯಿದೆ. ಸ್ವಲ್ಪ ಸಮಯ ಬಿಟ್ಟು ನೋಡಿ.

4. ‘ಅನುಮತಿಯಿಂದ ಮಾತ್ರ ಪ್ರವೇಶ’ ಎಂಬ ಸಂದೇಶ ಬರುತ್ತದೆ.
ನಾವು ಈ ತರಹದ ವ್ಯವಸ್ಥೆ ಅಳವಡಿಸಿಲ್ಲ.  www.surahonne.com ಗೆ ಎಲ್ಲರಿಗೂ ಮುಕ್ತ ಪ್ರವೇಶ.

5. ಕಮೆಂಟ್ ಪೋಸ್ಟ್ ಮಾಡಲಾಗುವುದಿಲ್ಲ.
ಪೋಸ್ಟ್ ಮಾಡಿದ ಕಮೆಂಟ್ಸ್ ಗಳು ತಲಪುತ್ತಿವೆ. ಪುನ: ಪೋಸ್ಟ್ ಮಾಡುವ ಅಗತ್ಯವಿಲ್ಲ, ಅವು ಪುನರಾವರ್ತನೆಯಾಗುತ್ತವೆ.

6. editor@52.55.167.220 ಗೆ ಇಮೈಲ್ ಹೋಗುವುದಿಲ್ಲ.
ಸಾಮಾನ್ಯವಾಗಿ , ಇಂಟರ್ ನೆಟ್ ಕನೆಕ್ಶನ್ ಸರಿ ಇದ್ದರೆ ಈ ಸಮಸ್ಯೆ ಬರಲಾರದು. ನಿಮ್ಮ ಇಮೈಲ್ ನಮಗೆ ತಲಪಿದ ಕೂಡಲೇ ನಿಮಗೆ ಒಂದು ಸಂದೇಶ ಬರುತ್ತದೆ. ಅದು ಬಂದಿಲ್ಲವಾದರೆ ಇಮೈಲ್ ತಲಪಿಲ್ಲ ಎಂದು ಅರ್ಥ. ಹಾಗಾಗಿ ಇಮೈಲ್ ಹೋಗುತ್ತಿಲ್ಲವಾದರೆ  ಇಂಟರ್ ನೆಟ್ ಕನೆಕ್ಟಿವಿಟಿ ಹಾಗೂ ಇಮೈಲ್ ಐಡಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.

 

ಎಲ್ಲರಿಗೂ ವಂದನೆಗಳು.

-ಹೇಮಮಾಲಾ.ಬಿ,

07/02/2014

2 Responses

  1. Krishnaveni Kidoor says:

    ಅತ್ತ್ಯುತ್ತಮ ಸೂಚನೆಗಳು …

  2. saavithri s.bhat says:

    ಮಾಹಿತಿಗಾಗಿ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: