ಪಯಣ

Share Button

 

Sahana Pundikai

ಸಹನಾ

ಬದುಕಿನ ನದಿಯಲ್ಲಿ ಆಳವೆಷ್ಟೋ, ಸುಳಿಗಳೆಷ್ಟೋ ಬಲ್ಲವರಾರು?

ಪ್ರವಾಹದಲ್ಲಿ ಸಾಗುವ ಪಯಣಿಗರೆಷ್ಟೋ?

ಅಂಬಿಗನ ನಂಬುಗೆಯಲಿ ಕುಳಿತು ಸಾಗುವರೆಷ್ಟೋ?

ಈಜಿ ಸಾಗುವ ಗಟ್ಟಿಗರೆಷ್ಟೋ?

ದಡ ಸೇರುವೆನೆಂಬ ದೃಢ ಮನಸಿನವರೆಷ್ಟೋ?

ನದಿಯ ಕೆಸರಿನಲಿ ಹೂತು ಹೋದೆನೆಂದು ಹಲುಬುವರೆಷ್ಟೋ?

ಈಜುವವರೆದುರು ತೊಡರುವ ಕೊರಡುಗಳೆಷ್ಟೋ?

ನದಿಯಲ್ಲಿ ಮುಳುಗುವವರೆಷ್ಟೋ? ತೇಲುವವರೆಷ್ಟೋ? ದಡ ಸೇರುವವರೆಷ್ಟೋ?

ವಿಧಾತನ ವಿಧಾನವನ್ನು ಅರಿತವರೆಷ್ಟೋ?

 

 

 

– ಸಹನಾ

1 Response

  1. Avatar vinay Kumar says:

    ಚೆನ್ನಾಗಿದೆ 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: