ಸಿರಿಧಾನ್ಯಗಳು

Share Button

ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಹಾರಕ ರಾಗಿ, ಜೋಳ ..ಇವೆಲ್ಲಾ ಸಿರಿಧಾನ್ಯಗಳು. ಮುದ್ದೆ, ರೊಟ್ಟಿ, ಖಿಚಡಿ, ಪಾಯಸ ಇತ್ಯಾದಿ ತಯಾರಿಸಿ ಉಣ್ಣಬಹುದು. ಈ ಧಾನ್ಯಗಳಲ್ಲಿ ಅಕ್ಕಿ/ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಂಶ, ಕಭ್ಭಿಣ, ಕ್ಯಾಲ್ಚಿಯಮ್ ಇರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಮಧುಮೇಹ, ರಕ್ತದೊತ್ತಡ ಇತ್ಯಾದಿ ತೊಂದರೆಯಿರುವವರಿಗೂ ಒಳ್ಳೆಯದು.

ಮೈಸೂರಿನ ದಸರಾ ಆಹಾರಮೇಳದಲ್ಲಿ ಈ ಸಿರಿಧಾನ್ಯಗಳ ಕೆಲವು ಅಡುಗೆಗಳು ಮಾರಾಟಕ್ಕೆ ಲಭ್ಯವಿತ್ತು. ಈ ಚಿತ್ರವನ್ನು ಅಲ್ಲಿ ಕ್ಲಿಕ್ಕಿಸಿದೆ.

 

 

ನಗರಗಳಲ್ಲಿ ಬಿಗ್ ಬಝಾರ್ ,   ರಿಲಯನ್ಸ್ ನಂತಹ ಮಳಿಗೆಗಳಲ್ಲಿ ಮತ್ತು ಸಾವಯವ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ  ರಾಗಿ, ಜೋಳ, ಸಾಮೆ ಮತ್ತು ನವಣೆಯ ಧಾನ್ಯಗಳು, ಕಾಳುಗಳಾಗಿ, ಹಿಟ್ಟಿನ ರೂಪದಲ್ಲಿ, ಉಪ್ಪಿಟ್ಟು ರವೆಯಂತೆ ಹಾಗೂ ಶ್ಯಾವಿಗೆ ರೂಪದಲ್ಲಿಯೂ ಸಿಗುತ್ತವೆ. ನಾನು ಕಂಡಂತೆ ಉಳಿದ ಇನ್ನಿತರೆ ಧಾನ್ಯಗಳು ತೆ ಸಾವಯವ ಮೇಳಗಳಲ್ಲಿ ಮಾತ್ರ ಲಭ್ಯ.

ಬೇಕಿದ್ದಂತೆ ನೆನೆಸಿಯೋ, ರುಬ್ಬಿಯೋ, ಮಸಾಲೆ-ತರಕಾರಿ ಸೇರಿಸಿ ಇಡ್ಲಿ, ದೋಸೆ, ಪೊಂಗಲ್, ಶ್ಯಾವಿಗೆ ..ಇತ್ಯಾದಿ ತಯಾರಿಸಿಕೊಂಡು ತಿನ್ನಬಹುದು.  ಇತ್ತೀಚೆಗೆ ‘ಪತಂಜಲಿ ಸಂಸ್ಥೆಯ’ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ ಕೂಡ ಸಿಗುತ್ತವೆ. ಉದಾ: ಪತಂಜಲಿ ಸಂಸ್ಥೆಯ ‘ಪುಷ್ಟಾಹಾರ್ ದಾಲಿಯಾ’ ಎಂಬ ಧಾನ್ಯಗಳ ಮಿಶ್ರಣ. ಇದಕ್ಕೆ ತರಕಾರಿಗಳನ್ನು ಕಿಚಡಿ ತಯಾರಿಸಿದರೆ ರುಚಿಯೂ ಇರುತ್ತದೆ, ಪೌಷ್ಟಿಕವೂ ಹೌದು.

           

ಈ ಧಾನ್ಯಗಳ ಹಿಟ್ಟಿಗೆ  ಸ್ವಲ್ಪ ಬಿಸಿನೀರು  ಸುರಿದು , ಬೇಕಿದ್ದರೆ ಜಿಗುಟು ಹೆಚ್ಚಿಸಲು ಸ್ವಲ್ಪ ಗೋಧಿಹಿಟ್ಟನ್ನೂ ಬೆರೆಸಿದರೆ ಚಪಾತಿಯಂತೆ ಕಲೆಸಿದರೆ ಲಟ್ಟಿಸಲು ಸುಲಭವಾಗುತ್ತದೆ.

 

 – ಹೇಮಮಾಲಾ.ಬಿ

19 Responses

  1. Neeta Shivanand says:

    Olleya maahiti neediddiri, dhanyawadagalu.

  2. K Ramachandra Reddy says:

    Kiru Dhanyagalu is very good for Diabetic Pt’s—Lot of fibers

  3. Hanumanth Gowda says:

    ಮಾಹಿತಿಗೆ ಧನ್ಯವಾದಗಳು ..

  4. Chandrashekar achar says:

    ಸಿರಿಧಾನ್ಯಗಳು – ಬಹಳೇ ಒಳ್ಳೆಯ ಕಾಮ್ಬೀನೇಸನ್ಸ ಸುಮಾರು ರೋಗ ರೂಜನಗಳ ಉಪಶಮನಕ್ಕೇ

  5. Raghuram says:

    where will i get siri dhaanyas?

    • Hema says:

      Typically we get such millets as wholesome grains, broken grains (rava) or powder form too, in specific shops that sell organic produces. Few shopping malls like Reliance, Big Bazaar too have such items. ‘Patanjali’ outlets sell items like Dhalia ( mixed grains), Navane flour, Sajje Flour etc

  6. Ashok Shetty says:

    E siri dhanyagalu yelli sigabahudu? Plz reply.

    • Hema says:

      ನಗರಗಳಲ್ಲಿ ಬಿಗ್ ಬಝಾರ್ ನಂತಹ ಮಳಿಗೆಗಳಲ್ಲಿ ಮತ್ತು ಸಾವಯವ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ ಸಿಗುತ್ತವೆ. ಇತ್ತೀಚೆಗೆ ‘ಪತಂಜಲಿ ಸಂಸ್ಥೆಯ’ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ ಕೂಡ ಸಿಗುತ್ತವೆ. ಉದಾ: ಪತಂಜಲಿ ಸಂಸ್ಥೆಯ ‘ಪುಷ್ಟಾಹಾರ್ ದಾಲಿಯಾ’ ಎಂಬ ಧಾನ್ಯಗಳ ಮಿಶ್ರಣ. ಇದಕ್ಕೆ ತರಕಾರಿಗಳನ್ನು ಉಪ್ಪಿಟ್ಟಿನಂತೆ/ಕಿಚಡಿ ತಯಾರಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು .

  7. channanagowda says:

    ರೋಗಮುಕ್ತ ಆರೋಗ್ಯಕ್ಕೆ ಒಳ್ಳೆಯ ಮಾಹಿತಿ ಧನ್ಯವಾದಗಳು.

  8. sunanda thali says:

    ನಾನು America ದಲ್ಲಿ ಇರುವುದು, ಇಲ್ಲಿ ಸಿರಿ ಧನ್ಯ ಎಲ್ಲಿ ಸಿಗುತದೆ ತಿಳಿಸುವುದು ? ಇದು ನನಗೆ ತುಂಬ ಸಹಾಯ ಆಗುತ್ತದೆ . ದಯವಿಟ್ಟು ತಿಳಿಸುವುದು

  9. Madhusudhana says:

    ಸಿರಿ ಧಾನ್ಯ ಬೇಕಿದ್ದರೆ ಸಂಪರ್ಕಿಸಿ ನೀಡ್ ಆರ್ಗಾನಿಕ್ ಕಾಂಟಾಕ್ಟ್ 9743766066

  10. santhosh says:

    it is good nutrition food

  11. Mohan says:

    ಸಿರಿಧಾನ್ಯ ಬೆಳೆಗಾರರ ಮತ್ತು ಬಳಕೆದಾರರ ಸಂಘದಲ್ಲಿ ಸದಸ್ಯರಾಗಿ ಮನೆಗೆ ಉಚಿತವಾಗಿ ಸಿರಿಧಾನ್ಯ ತಲುಪಿಸಲಾಗುವುದು. 8217596955

  12. Revathi says:

    ಇದರಲ್ಲಿ ರೊಟ್ಟಿ ಮಾಡಬಹುದಾ ತಿಳಿಸಿ

    • Hema says:

      ಹೌದು. ಮಿಲ್ ನಲ್ಲಿ ಹಿಟ್ಟು ತಯಾರಿಸಿಟ್ಟುಕೊಂಡು ರೊಟ್ಟಿ ತಯಾರಿಸಬಹುದು. ನಗರದ ಮಾಲ್ ಗಳಲ್ಲಿ ಪ್ಯಾಕೇಟ್ ಹಿಟ್ಟು ಕೂಡ ಸಿಗುತ್ತದೆ.

  13. ಅಣ್ಣಪ್ಪ says:

    ನನ್ನ ಗೇ ಸಿರಿಧಾನ್ಯ ಬೇಕಾಗಿದೆ

  14. Madhu p says:

    Energy product

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: