ಹೂಗವಿತೆಗಳು-ಗುಚ್ಛ 2

Share Button

6
ಇನ್ನೆಷ್ಟು ನಗಲು ಸಾಧ್ಯ
ಉಸಿರು ನಿಂತ ಹೂವು
ಬಾಡಿ ಒಣಗುವುದಷ್ಟೇ
ಗಿಡದಿಂದ ಬೇರ್ಪಟ್ಟು

7
ಗಾಳಿ ಕಾಣಲಿಲ್ಲ
ಗಂಧವು ಕಾಣಲಿಲ್ಲ
ಹೂವಷ್ಟೇ ಕಂಡಿದ್ದು
ಕಂಡಿದ್ದರೆ ಜನ
ಅವುಗಳನ್ನು ದೋಚುತ್ತಿದ್ದರು

8
ಸಂತರು ಹೂ ಕೀಳುವುದಿಲ್ಲ
ದೇವರನ್ನು ನಂಬುವುದಿಲ್ಲ
ಸತ್ಯವನ್ನ ಪ್ರೀತಿಸುವರು
ಪ್ರೇಮವನ್ನ ಪೂಜಿಸುವರು

9
ಮನದ ತೋಟದಲ್ಲಿ
ಅರಳಿದ್ದ ಹೂವಿಗೆ
ಹಾರಿಬಂದ ಚಿಟ್ಟೆ ನೀನು
ಮಕರಂದವಷ್ಟೇ
ನಿನಗೆ ಬೇಕಿತ್ತು

10
ಹೂ ಕಟ್ಟುವ ಹುಡುಗಿಯ
ಕೈ ಬೆರಳು ನೇವರಿಸುತ್ತಿವೆ
ಹಲವು ಹೂವಿನ ಪರಿಮಳ

-ನವೀನ್ ಮಧುಗಿರಿ

4 Responses

  1. ಅರ್ಥಪೂರ್ಣ ವಾದ…ಹನಿಗವನಗಳು…ಸುಂದರವಾಗಿ ಮೂಡಿಬಂದಿವೆ…ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಸುಂದರ ಹೂಗವಿತೆಗಳು

  3. . ಶಂಕರಿ ಶರ್ಮ says:

    ಸೊಗಸಾದ ಹೂ ಕವನಗಳು.

  4. Mittur Nanajappa Ramprasad says:

    ಹೂಗಳ ಕಾವ್ಯಕಥನವು

    ಹೂಗಳ ಹಸನ್ಮುಖವು/
    ಹೂಲತೆಗಳ ಮಂದಸ್ಮಿತವು
    ನಿಸರ್ಗದ ನವನೀತವು/
    ಹೂಬಳ್ಳಿಗಳ ಮಂದಹಾಸವು/

    ವೈವಿದ್ಯತೆಯ ಬಣ್ಣ ಬಣ್ಣಗಳಲ್ಲಿ/
    ಕಣ್ಸೆಳೆಯುವುದು ಸೌಂದರ್ಯದಲ್ಲಿ
    ಸಮ್ಮೋಹಿಸುವ ಸುವಾಸನೆಯಲ್ಲಿ/
    ನವಿರೇಳಿಸುವುದು ತನುಮನದಲ್ಲಿ

    ಅಂದ ಚಂದದ ಹೂಗಳು/
    ವನಸಿರಿಯ ಶೃಂಗಾರವು/
    ಅಂದ ಚಂದದ ಕುಸುಮಗಳು/
    ಬನಸಿರಿಯ ಅಲಂಕಾರವು/

    ಕೋಮಲತೆಯಲ್ಲಿ ಹೂಗಳು /
    ಅರಳುವುದು ಚೆಲುವಿನಲ್ಲಿ/
    ಆಕರ್ಷಣೆಯಲ್ಲಿ ಬೃಂಗಗಳು/
    ನಿರತವಾಗುವುದು ರಸಿಕತೆಯಲ್ಲಿ/

    ಗಿಡದಲ್ಲಿ ಅರಳಲೋ ನೆಲದಲ್ಲಿ ಹೊರಳಲೋ
    ಅರಳುವುದು ಪುಷ್ಪಗಳು ವೈಭವದಲ್ಲಿ/
    ಮುಡಿಸೇರಲೊ ಗುಡಿಸೇರಲೊ/
    ಬಿರಿಯುವುದು ಹೂಗಳು ಭವ್ಯತೆಯಲ್ಲಿ/

    ಹೂಗಳ ಶ್ರುಷ್ಟಿಯಲಿ ಕಾಣುವುದು/
    ಜಗದಲ್ಲಿ ದೈವವಿರುವ ಸತ್ಯಾಂಶವು/
    ಹೂಗಳ ದಳಗಳಲ್ಲಿ ಅಡಗಿರುವುದು/
    ಶ್ರುಷ್ಟಿಕರ್ತನಲ್ಲಿರುವ ರಸಭಾವವು./

    ಕಾಣುವುದು ಹೂಗಳ ವಿನ್ಯಾಸದಲ್ಲಿ/
    ಶ್ರುಷ್ಟಿಕರ್ತನ ಕಲ್ಪನೆಯ ವಿಶಾಲತೆಯು/
    ವೈವಿಧ್ಯ ಚಿತ್ತಾರದ ರೂಪರೇಖೆಗಳಲ್ಲಿ/

    ಹೂಲತೆಯಲ್ಲರಳುವ ಹೂಗಳು/
    ಪ್ರಕೃತಿಯ ಮನದಾಳದ ಕನ್ನಡಿಯು/
    ನಗುವು ಗೆಲುವು ಮಿಶ್ರಣದ ಭಾವಗಳು/

    ಕುಸುಮಗಳ ಕಂಪಿನಲ್ಲಿ/
    ತಂಗಾಳಿಯ ತಂಪಿನಲ್ಲಿ/
    ಮೈಮರೆಯುವುದು ತನ್ಮತೆಯಲ್ಲಿ /

    ಹೂಗಳ ಅಂದ ಚಂದವು/
    ಕವಿಯ ಕಲ್ಪನೆಗೂ ಹೊರತಾದ/
    ಶೃಷ್ಟಿ ಸೌಂದರ್ಯವು/

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: