ಅಕ್ಕಿಮುಡಿ ಕಂಡೀರಾ?

Share Button

 

 

ಈಗಿನಂತೆ ಪ್ಲಾಸ್ಟಿಕ್ ಬ್ಯಾಗ್ ಗಳು, ತರಾವರಿ ಡ್ರಮ್ ಗಳು ಅವಿಷ್ಕಾರವಾಗುವ ಮೊದಲು ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಇಲಿ-ಹೆಗ್ಗಣ ತಿನ್ನದಂತೆ, ಹುಳ-ಹುಫ್ಫಟೆ ಬಾರದಂತೆ, ತೇವಾಂಶಕ್ಕೆ ಕೆಡದಂತೆ ಹೇಗೆ ಶೇಖರಿಸಿ ಇಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ‘ಅಕ್ಕಿ ಮುಡಿ’. 

ಮುಡಿ ಅಕ್ಕಿ ಎಂದರೆ 40 ಸೇರು ತೂಕ, ಸುಮಾರು 41 ಕೆ.ಜಿ ಎಂದು ಎಲ್ಲೋ ಓದಿದ ನೆನಪು. ಆ ಕಾಲದಲ್ಲಿ ತಮ್ಮ ಬಳಿ ‘ಇಷ್ಟು ಮುಡಿ’ ಅಕ್ಕಿ ಇದೆ ಎಂದು ಹೇಳಿಕೊಳ್ಳುವುದು ಸಂಪತ್ತಿನ ಸಂಕೇತವಾಗಿತ್ತು.

ಬೈಹುಲ್ಲಿನಲ್ಲಿ ಅಕ್ಕಿಮುಡಿ ಕಟ್ಟುವುದು ವಿಶಿಷ್ಟ ಕಲೆ. ಇದು ಪರಿಸರ ಸ್ನೇಹಿ ವಿಧಾನ.ಈ ವಿದ್ಯೆ ತಿಳಿದಿರುವವರು ಈಗ ಬಲು ಅಪರೂಪ.

 

– ಹೇಮಮಾಲಾ.ಬಿ

13 Responses

  1. Vinaykumar says:

    Thank u very much ಮಾಲಕ್ಕ. ಪುಸ್ತಕಗಳನ್ನು ಓದುವಾಗ ಒಂದು ಮುಡಿ ಅಕ್ಕಿ ಅಂದ್ರೆ ಎಷ್ಟು ಯೋಚಿಸುತ್ತಿದ್ದೆ. ಈಗ ತಿಳಿಯಿತು.

  2. Manju Manooru says:

    ಈಗ ನಮ್ಮಲ್ಲಿ ಅಕ್ಕಿ ಮುಡಿ ಕಟ್ಟುವ ಕಲೆ ಬಲ್ಲವರಿದ್ದರೂ ಗೋಣಿ ಚೀಲಗಳಿಗೇ ಮೊರೆ ಹೋಗಿದ್ದೇವೆ. ಭತ್ತದ ಬೆಳೆಯನ್ನು ಅಡಕೆ ತೋಟಗಳು ನುಂಗಿವೆ. (14ಸೇರುಗಳ 3 ಕಳಸೆಗೆ 1 ಮುಡಿ. ಇದು ಮುಡಿ ಕಟ್ಟಿದ ನಂತರ 41 kg ಆಗಬೇಕು. ಹುಲ್ಲಿನ ತೂಕ ಕಳೆದು ಅಕ್ಕಿಯ ತೂಕ 38 kg ಇರತಕ್ಕದ್ದು.)

    ಬಹಳ ಹಿಂದೆ ಅಕ್ಕಿಮುಡಿ (ಅರಿ=ಅಕ್ಕಿ)ತ್ತಮುಡಿ)ಯನ್ನು ಕಾಡು ಬಳ್ಳಿಯನ್ನುಪಯೋಗಿಸಿ ಕಟ್ಟುತ್ತಿದ್ದರೇನೊ. ಆದ್ದರಿದಲೇ ಅದು ಮುಡಿತ್ತಲ್ಲ್‌ (ಮುಡಿತ್ತ ಬಲ್ಲ್ ) ಕೆಲವರು ಬಾಳೆ ದಿಂಡನ್ನು ಬಿಡಿಸಿ ಒಣಗಿಸಿ ಮಾಡಿದ ಅಗಲವಾದ ಹಗ್ಗವನ್ನು ಅಡ್ಡಕ್ಕೆ ಉಪಯೋಗಿಸಿ ಕಟ್ಟುತ್ತಾರೆ. ಉದ್ದಕ್ಕೆ ಬೆಳೆಹುಲ್ಲಿನ “ಮೊರಜ್ಜ”ವೆ. ಇನ್ನೊಂದು ಮೇಲಿನ ಚಿತ್ರದಲ್ಲಿರುವಂಥಾದ್ದು. ಉದ್ದಕ್ಕೆ ಮೊರಜ್ಜ ಕೂರುವ edgeಗೆ “ದೆಸೆ” ಅಂತ ಹೆಸರು. ಮುಡಿಯೊಂದರಲ್ಲಿ 16, 18, 22 ದೆಸೆಗಳು ಇರುತ್ತವೆ. ಅಕ್ಕಿಯೊಂದೇ ಅಲ್ಲ, ಬೀಜದ ಭತ್ತ, ಧಾನ್ಯಗಳನ್ನೂ ಈ ರೀತಿ ಮುಡಿ ಕಟ್ಟಿಡುತಿದ್ದರು. ಕೃಷೀ ಸಂಬಂಧ ರೋಗಗಳಿಗೆ ಹರಕೆ ಹೇಳಿದರಾಯ್ತು. ಹರಕೆಗೆಂದೇ ಸಣ್ಣ ಮುಡಿಗಳನ್ನು ಕಟ್ಟುತ್ತಾರೆ. ಅದೇ ಕುರುಂಟು…!

    • Ganesh says:

      @ ಮಂಜು, ಭತ್ತದ ಗದ್ದೆಗಳು ಅಡಕೆ ತೋಟಗಳಗಿದ್ದರೆ ಎಷ್ಟೋ ವಾಸಿ, ಮನೆ ಸೈಟ್ ಗಳಾಗಿವೆ ಸ್ವಾಮಿ!

  3. Dinakar Rao says:

    ನಮ್ ಕಡೆ ಉಪನಯನ ಸಂದರ್ಭದಲ್ಲಿ ವಟುವನ್ನು ಈ ಮುಡಿಯ ಮೇಲೆ ಕುಳ್ಳಿರಿಸುವ ಸಂಪ್ರದಾಯವಿದೆ. ಸಣ್ಣವನಾಗಿದ್ದಾಗ ಮನೆಯಲ್ಲಿ ಅಕ್ಕಿಮುಡಿ ಕಟ್ಟುವುದನ್ನು ಆಶ್ಚರ್ಯ ನೋಡುತ್ತಿದ್ದ ನೆನಪು.. ಯಾವ ಮುಡಿಯಲ್ಲಿ ಯಾವ ಅಕ್ಕಿ ಇದೆ ನೋಡಲು ಒಂದು ಸಣ್ಣ ರೌಂಡೆಡ್ ಚಾಕು ಬೇರೆ..

  4. Krishnaveni says:

    ಅಕ್ಕಿಮುಡಿ ಅಂದರೆ ಏನು ಅಂತ ವಿವರಿಸಿದ ಮೊದಲ ಪ್ಯಾರಾ ಓದಿದವರಿಗೆ ಮತ್ತೂ ಓದುವಂತೆ ಬರಹ ಅಪ್ಯಾಯಮಾನವಾಗಿತ್ತು .ಕೊಳ್ಳುವವರಿಗೆ ಅಕ್ಕಿಯ ವರ್ಗ (ಕಜೆ ,ಅರೆ ಬೆಳ್ತಿಗೆ ,ಯಾವ ಬಿದೆ)ಅಂತ ಪರೀಕ್ಷಿಸಲು ಚೂಪಾದ, ಉದ್ದನೆಯ , ತುದಿಗೆ ನಾಲ್ಕು ಅಕ್ಕಿಕಾಳು ಹೊರಗೆಳೆಯುವಂತೆ ಇರುವ ಸಾಧನ ಇದೆ. ಖರೀದಿಯಲ್ಲಿ ಗ್ರಾಹಕ ಮೋಸ ಹೋಗದಂತೆ ಅದು ನೆರವಾಗುತ್ತದೆ.ಅದನ್ನು ಮುಡಿಯ ಒಳಗೆ ಚುಚ್ಚಿದರೆ ಹೊರಗೆಳೆದಾಗ ಅದರಲ್ಲಿ ಐದಾರು ಕಾಳು ಅಕ್ಕಿ ಬರುತ್ತದೆ . ಗ್ರಾಹಕ ಮೋಸ ಹೋಗುವುದಿಲ್ಲ.

    • ಬಂಟ್ವಾಳ ವೆಂಕಟ್ರಾಯ ಬಾಳಿಗಾ says:

      ಅದನ್ನು ಏನೆಂದು ಕರೆಯುತ್ತಾರೆ?
      ನಾನು GSB- ಅದನ್ನು ಮುರ್ನಾಳಿ ಎನ್ನುತ್ತೇವೆ. ಕನ್ನಡ, ತುಳುವಿನಲ್ಲಿ ಏನೆನ್ನುತ್ತಾರೆ?

  5. Hema says:

    ಪ್ರತಿಕ್ರಿಯಿಸಿದ ಮತ್ತು ಉಪಯುಕ್ತ ಮಾಹಿತಿಯನ್ನು ಸೇರಿಸಿದ ಎಲ್ಲರಿಗೂ ಧನ್ಯವಾದಗಳು.

  6. Ks Mahadevawamy Ponnachi says:

    ಹೌದು ಮೇಡಂ. ನಾವು ಚಿಕ್ಕಂದಿನಲ್ಲಿದ್ದಾಗ ನಮ್ಮ ಮನೆಯಲ್ಲಿ ಅವರೇಕಾಳುಗಳನ್ನು ಅದರಲ್ಲಿ ಕಟ್ಟುತ್ತಿದ್ದರು. ಅದೊಂದು ಸ್ಕಿಲ್. ಈಗ ಬರಿ ನೆನಪಷ್ಟೆ. ಧನ್ಯವಾದ ಮೇಡಂ , ಒಂದು ಮಧುರ ನೆನಪು ಮಾಡಿದ್ದಕ್ಕೆ.

  7. Drshivaji Rao Gaikwad says:

    ನಾನು ಉಡುಪಿಯಲ್ಲಿ ಸೇವೆಯಲ್ಲಿದ್ದಾಗ ಇಂತಹ ಮೂಟೆ ಅಕ್ಕಿ ತರಿಸಿದ್ದು ಜ್ಞಾಪಕ.

  8. vidya says:

    nice article mam

  9. Rachana says:

    ನೈಸ್ ONE

  10. savithrisbhat says:

    ಈಗಲೂ ಕೆಲವು ಕಡೆ ಅಕ್ಕಿ ಮುಡಿ ಕಣ ಸಿಗುತ್ತದೆ .ನಮ್ಮ ಊರಿನ ದೇವಾಲಯದಲ್ಲಿ ಕೊಡಿಯೇರುವ ಸ೦ಧರ್ಭದಲ್ಲಿ ಕೊಡಿಕ೦ಬಕ್ಕೆ ಅಕ್ಕಿ ಮುಡಿಯನ್ನು ಕಟ್ಟುತ್ತಾರೆ.ನೂತನ ಗ್ರಹ ಪ್ರವೇಶ ದ ಸ೦ಧರ್ಭದಲ್ಲೂ ಅಕ್ಕಿ ಮುಡಿಯನ್ನು ಒಳಗೆ ಒಯ್ಯುತ್ತಾರೆ .

  11. Anonymous says:

    ತುಳುನಾಡಲ್ಲಿ ಮುಡಿ ಜನಿಸಿದ್ದು ಅಕ್ಕಿ ಭತ್ತಕ್ಕಾಗಿ ಅಲ್ಲ.
    ಉಪ್ಪಿಗಾಗಿ ಜನ್ಮ ತಾಳಿತ್ತು.ಉಪ್ಪು ತುಳುನಾಡಲ್ಲಿ ನೀರಾಗದಂತೆ ಮುಡಿ ಕಟ್ಟಿ ಇಟ್ಟರು.ನಂತರದಲ್ಲಿ ಇಲ್ಲಿ
    ಸಾಕಷ್ಟು ಭತ್ತ ಬೆಳೆಸಿದ ಬಳಿಕ ಅಕ್ಕಿ ಭತ್ತಕ್ಕಾಗಿ ಮುಡಿ
    ಬಳಕೆ ಆಯಿತು.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: