ಎಲ್ಲಿರುವೆ ಬಾ ಗುಬ್ಬಿ..

Spread the love
Share Button

ಅಮ್ಮ ಮೊರದಲ್ಲಿದ್ದ ಅಕ್ಕಿ ಆರಿಸುವಾಗ
ಒಂದೊಂದೇ ಕಾಳು ಹೆಕ್ಕಲು ಬರುತ್ತಿದ್ದೆ
ವಿಶಾಲ ಹಜಾರದ ದೊಡ್ಡ ಪಟಗಳ ಹಿಂದೆ
ಗೂಡು ಕಟ್ಟಿ ನಿನ್ನ ಸಂಸಾರ ಹೂಡುತ್ತಿದ್ದೆ.

ಬೆಳಗಾಗುತ್ತಿತ್ತು ನಿನ್ನ ಚಿಂವ್ ಚಿಂವ್ ಕೇಳಿ
ಪುಟ್ಟ ಕಣ್ಣು ಬಿಟ್ಟು ಮರಿ ನೋಡುತ್ತಿತ್ತು ಪಿಳಿಪಿಳಿ
ಮುದ್ದಾಡಲು ಮುಟ್ಟಲು ಹೋದರೆ ಅಮ್ಮನ ಬೈಗುಳ
ಮನುಷ್ಯ ಮುಟ್ಟಿದ ಗುಬ್ಬಿ ಗುಂಪು ಸೇರದು ಮಕ್ಕಳ.

ನೀನೆಷ್ಟು ಮಾಮೂಲಾಗಿ ಬಿಟ್ಟಿದ್ದೆ ನಮ್ಮ ಬಾಳಲ್ಲಿ ಗುಬ್ಬಿ
ಮರ ನಾಶವಾಗಿ ನೀನು ಮರೆಯಾಗಿ ಹೋದೆ ಗುಬ್ಬಿ
ನಿನ್ನ ಕಲರವ ಕಿವಿಗೆ ಬೀಳದಾಗಿ ಹೋಯಿತು
ಮೊಬೈಲ್ ತರಂಗಗಳಿಂದ ನಿನ್ನ ಕುಲ ಅವನತಿಯಾಯ್ತು.

ಕಣ್ಣಿಗೆ ಕಾಣುತ್ತಿದೆ ನಿನ್ನದೊಂದೇ ಉದಾಹರಣೆ
ಮಾನವನ ದುರಾಸೆಯಲ್ಲಿ ಪಶು ಪಕ್ಷಿಗಳಿಗೆಲ್ಲಿ ರಕ್ಷಣೆ
ಪಡುತ್ತಿರುವವು ನೋವು ಅನುಭವಿಸಿ ಬವಣೆ
ಇನ್ಯಾವಾಗ ನಾವು ಬುದ್ಧಿ ಕಲಿಯುವೆವೋ ನಾ ಕಾಣೆ .

-ಸುಜಾತಾ ರವೀಶ್

8 Responses

  1. Anonymous says:

    ಪ್ರಕಟಿಸಿದ್ದಕ್ಕೆ ಸಂಪಾದಕಿ ಅವರಿಗೆ ತುಂಬಾ ಧನ್ಯವಾದಗಳು .

    ಸುಜಾತಾ ರವೀಶ್

  2. Anonymous says:

    ಪ್ರಕಟಿಸಿದ್ದಕ್ಕೆ ಸಂಪಾದಕಿಯವರಿಗೆ ಅವರಿಗೆ ತುಂಬ ಧನ್ಯವಾದಗಳು

    ಸುಜಾತಾ ರವೀಶ್

  3. Anonymous says:

    ಒಳ್ಳೆಯ ಕವನ . ಲೇಖಕಿಗೆ ಧನ್ಯವಾದಗಳು.

  4. ನಯನ ಬಜಕೂಡ್ಲು says:

    ಪುಟ್ಟ ಗುಬ್ಬಚ್ಚಿ ಯಷ್ಟೇ ಸುಂದರ ಕವನ

  5. ಗುಬ್ಬಿ ಯ ನೆನಪು…ಜೊತೆಗೆ ನಮ್ಮ ಬಾಲ್ಯದ ನೆನಪು ಹೊತ್ತು ತಂದ ಕವನ ಸರಳ ಸುಂದರವಾಗಿದೆ… ಸೋದರಿ

  6. Hema says:

    ಚೆಂದದ, ಸಾಂದರ್ಭಿಕ ಕವನ

  7. Anonymous says:

    ಬಾಲ್ಯದ ನೆನಪುಗಳೊಂದಿಗೆಗುಬ್ಬಚ್ಚಿಗಳ ಕುರಿತಾದ ಚಂದದ ಕವನ. ಅಭಿನಂದನೆಗಳು.

  8. . ಶಂಕರಿ ಶರ್ಮ says:

    ಗುಬ್ಬಚ್ಚಿ ಗೂಡಿನಿಂದ ಉದುರಿದ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದ ನೆನಪಾಯ್ತು. ಸಾಂದರ್ಭಿಕ ಕವನ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: