ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

Spread the love
Share Button
PC: Internet

ಮಾರ್ಚ್ 8 ರಂದು ಆಚರಿಸುವ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಪಂಚದ ಎಲ್ಲ ಮಹಿಳೆಯರ ಸ್ಥಾನ-ಮಾನ ಹೆಚ್ಚಿಸುವತ್ತ ಹಾಗೂ ಅವರು – ಅವರ ಕುಟುಂಬದ ಆರೋಗ್ಯ ರಕ್ಷಣೆಯತ್ತ ಒತ್ತು ಕೊಡುತ್ತಿದೆ. ಈ ದೇಶದಲ್ಲಿ ಹಿಂದಿನಿಂದ ಕೆಲವರು ಮನುವಿನ ಸೂತ್ರ ಹೇಳುತ್ತಾರೆ – ‘‘ಪಿತಾ ರಕ್ಷತಿ ಕೌಮಾರೆ, ಭರ್ತಾ ರಕ್ಷತಿ ಯೌವ್ವನೆ, ರಕ್ಷಂತೆ ಸ್ಥಾವರೇ ಪುತ್ರ, ನಾ ಸ್ತ್ರೀಸ್ವಾತಂತ್ರ್ಯಮರ್ಹತೀ”. ಅಂದರೆ ಬಾಲಕಿಯಾಗಿದ್ದಾಗ ತಂದೆ, ಯೌವ್ವನದಲ್ಲಿ ಗಂಡ, ಹಾಗೂ ವೃದ್ಧಾಪ್ಯದಲ್ಲಿ ಮಗ ಮಹಿಳೆಯನ್ನು ಕಾಪಾಡುತ್ತಾರೆ. ಹೀಗಾಗಿ ಸ್ತ್ರೀಗೆ ಸ್ವಾತಂತ್ರ್ಯ ಬೇಕಿಲ್ಲ. ಈ ಮಾತು ಈ ಶತಮಾನದಲ್ಲಿ ಹಾಸ್ಯಾಸ್ಪದವಾಗಿ ಕಾಣಿಸುತ್ತದೆ.

ಇನ್ನೊಂದು ನುಡಿ ಹೇಳುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಅಂದರೆ ಎಲ್ಲಿ ಮಹಿಳೆಗೆ ಗೌರವ ಸಲ್ಲುತ್ತದೋ ಅಲ್ಲಿ ದೇವತೆಗಳು ವಾಸಿಸುತ್ತಾರೆ. ಕಾಲಕ್ಕೆ ತಕ್ಕಂತೆ ಮಹಿಳೆಯ ಶಿಕ್ಷಣ, ಆಕೆಯ ಉದ್ಯೋಗ, ಮಕ್ಕಳ ಬಗ್ಗೆ ಇವರಿಬ್ಬರ ನಿರೀಕ್ಷೆ ಇವುಗಳಿಂದ ಮಹಿಳಾ ಸಮಾನತೆ ಹೆಚ್ಚುತ್ತಿದೆ. ಆದರೂ ಇನ್ನೂ ಗ್ರಾಮಗಳಲ್ಲಿ ಹೆಚ್ಚು ಮಕ್ಕಳನ್ನು ಪಡೆಯುವ ಬಗ್ಗೆ ಹೇಳುವಾಗ, ಮಳೆ ಬಂದರೆ ಕೇಡೇ ಮಕ್ಕಳಾದರೆ ಕೇಡೇ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ, ಬಡಿಯೋ ಕೈಲಿ ಹತ್ತು ರೊಟ್ಟಿ ಹೆಚ್ಚು ಬಡಿ, ಹಡೆಯೋ ಕೈಲಿ ಹತ್ತು ಮಕ್ಕಳನ್ನ ಹೆಚ್ಚು ಪಡಿ ಎಂಬ ಮಾತುಗಳು ಕುಟುಂಬದಲ್ಲಿ ಮಹಿಳೆ ಕೇವಲ ಮಕ್ಕಳನ್ನು ಪಡೆಯುವ ಯಂತ್ರ ಎಂಬ ಅರ್ಥವನ್ನು ಸೂಚಿಸುತ್ತದೆ.ಹಿಂದೆ ಹುಟ್ಟಿದ ಬಹಳಷ್ಟು ಮಕ್ಕಳು ನಾನಾ ತರಹದ ಕಾಯಿಲೆಗಳಿಂದ ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿದ್ದವು. ಈಗ ವೈದ್ಯಕೀಯ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದ ಹುಟ್ಟಿದ ಬಹಳಷ್ಟು ಮಕ್ಕಳು ಖಂಡಿತ ಬದುಕುತ್ತವೆ. ಹೀಗಾಗಿ ಹುಡುಗಿಯ ಓದಿಗೂ, ಆಕೆಯ ಮದುವೆಯ ವಯಸ್ಸಿಗೂ, ಆಕೆ ಪಡೆಯಬಯಸುವ ಮಕ್ಕಳ ಸಂಖ್ಯೆಗೂ ನೇರವಾದ ಕೊಂಡಿ ಇದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅಂತರ್‌ರಾಷ್ತ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ. ಈ ವರ್ಷದ ವಿಶ್ವಸಂಸ್ಥೆಯ ಧ್ಯೇಯವಾಕ್ಯ ನಾಳಿನ ಸುಸ್ಥಿರ ಅಭಿವೃದ್ಧಿಗಾಗಿ ಇಂದಿನ ಲಿಂಗಸಮಾನತೆ.ನಮ್ಮ ದೇಶದಲ್ಲಿ ಇಂದಿಗೂ ಬಹಳ ಕುಟುಂಬಗಳಲ್ಲಿ ಗಂಡು ಮಗುವಿನ ಪ್ರಾಧಾನ್ಯತೆ, ಅದರ ಊಟ, ಶಿಕ್ಷಣ, ಬಟ್ಟೆ, ಸೌಕರ್ಯಗಳಿಗಾಗಿ ಚಿಂತಿಸುವಷ್ಟು ಹೆಣ್ಣು ಮಗುವಿನ ಬಗ್ಗೆ ಚಿಂತಿಸುವುದಿಲ್ಲ. ನಗರ ಪ್ರದೇಶಗಳಲ್ಲಿ ಓದಿರುವ ತಂದೆ ತಾಯಿಗಳಿಗೆ ಮಕ್ಕಳು ಹೆಣ್ಣಾದರೂ ಸರಿ ಗಂಡಾದರೂ ಸರಿ ಚೆನ್ನಾಗಿ ಗಮನಿಸುತ್ತಾರೆ.

ಈ ಮಹಿಳಾ ದಿನಾಚರಣೆಯ ಹಿನ್ನೆಲೆಯ ಬಗ್ಗೆ ಸ್ವಲ್ಪ ಗಮನಿಸೋಣವೇ 1908 ರಲ್ಲಿ ಇಂಗ್ಲೆಂಡಿನ 15 ಸಾವಿರ ಮಹಿಳಾ ಕಾರ್ಮಿಕರು ಕೆಲಸದ ಅವಧಿ ಕಡಿಮೆ ಮಾಡಲು ಕಾರ್ಮಿಕ ಚಳುವಳಿ ಮಾಡಿದರು. 1910 ರಲ್ಲಿ ಕ್ಲಾರಾ ಜೆಟ್‌ಕಿನ್ ಎಂಬ ಮಹಿಳಾ ಹಕ್ಕುಗಳ ಪ್ರತಿಪಾಧಕಿ ಕೋಪನ್ ಹೇಗನ್‌ನಲ್ಲಿ ಮಹಿಳಾ ಸಮಾವೇಶದಲ್ಲಿ ಈ ಬಗ್ಗೆ ಪ್ರಸ್ಥಾಪಿಸಿದರು. 1911 ರಿಂದ ಆಸ್ಟ್ರಿಯಾ ದೇಶ ಮಹಿಳಾ ದಿನಾಚರಣೆ ಆರಂಭಿಸಿತು. 2011 ಕ್ಕೆ ಈ ಆಚರಣೆಗೆ 100 ವರ್ಷ. ಇಲ್ಲಿ ಪ್ರಪಂಚದ ಸುಮಾರು ಅರ್ಧ ಜನಸಂಖ್ಯೆ ಇರುವ ಮಹಿಳೆಯರಿಗೆ ಈ ಮುಂದೆ ಹೇಳಲಾಗುವ 8 ಸೂತ್ರಗಳನ್ನು ವಿಶ್ವಸಂಸ್ಥೆ ಮಂಡಿಸಿದೆ. ಆರ್ಥಿಕ ಪರಿಹಾರಗಳನ್ನು ಕೊಡಿ. ಕೆಲಸ ಕಲಿಸಿ, ವಾಣಿಜ್ಯ ಕೌಶಲ್ಯಗಳನ್ನು ಕಲಿಸಿ, ಆದಾಯ ಹಾಗೂ ಉಳಿತಾಯ ಹೆಚ್ಚಿಸಿ, ಸ್ವಂತ ಗೌರವ ಬೆಳೆಸಿಕೊಳ್ಳಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ, ಆರೋಗ್ಯ ಪರಿಣಾಮಗಳ ಬಗ್ಗೆ ಯೋಚಿಸಿ. ಸಾಮಾಜಿಕ ತಾಣಗಳನ್ನು ಕಟ್ಟಿ ಸಾರ್ವಜನಿಕ ನಾಯಕಿಯರನ್ನು ಸೃಷ್ಟಿಸಿ, ನಿಮ್ಮ ಜೀವನದಲ್ಲಿಯ ಮಹಿಳೆಯರಿಗೆ ಹೇಳಿ ನಿಮ್ಮ ಕಾಳಜಿಗೆ ನಾವಿದ್ದೇವೆ”.

ಎನ್.ವ್ಹಿ.ರಮೇಶ್, ಮೈಸೂರು

9 Responses

 1. Anonymous says:

  ಚೆನ್ನಾಗಿದೆ ಬರಹ. ಸೋದರಿ.

 2. Anonymous says:

  ಚೆನ್ನಾಗಿದೆ ಬರಹ.

 3. sudha says:

  ಒಳ್ಳೆಯ ಲೇಖನ.

 4. ಉತ್ತಮ ಲೇಖನ ಧನ್ಯವಾದಗಳು ಸಾರ್

 5. ನಯನ ಬಜಕೂಡ್ಲು says:

  ಸೊಗಸಾಗಿದೆ ಲೇಖನ

 6. Mittur Nanajappa Ramprasad says:

  ಮಹಿಳೆಯು ಸದ್ಗುಣ ಸಭ್ಯತೆ ಒಲುಮೆಯ ಚಿಲುಮೆಯು
  ಮಹಿಳೆಯು ಸದ್ಗುಣ ಸಭ್ಯತೆ ಒಲುಮೆಯ ಚಿಲುಮೆಯು /\
  ವನಿತೆಯು ಘನತೆ ಗಂಭೀರ ಗೌರವಾನ್ವಿತ ಪ್ರತಿಮೆಯು/
  ನಾರಿಯು ಸೌಜನ್ಯ ಸೌಹಾರ್ದ ನಲುಮೆಯ ಬುಗ್ಗೆಯು/
  ಸ್ತ್ರೀ ಗಣ್ಯತೆ ವಾತ್ಸಲ್ಯ ಆಕರಾಸ್ತೆಯ ಸಂಜೀವಿನಿಯು/

  ಅಕ್ಕರೆಯ ಆಕಾರ ಮಮತೆಯ ಸೌಜನ್ಯ ಮೂರ್ತಿ/
  ಪ್ರೀತಿಯ ಓಡಲು ಸಹನೆ ಸಹಿಷ್ಣುತೆಯ ಶೃಂಗಾರ
  ಅಕ್ಕರೆಯ ಆಕಾರ ಮಮತೆಯ ಸೌಜನ್ಯ ಮೂರ್ತಿ/
  ಅನುಕಂಪದ ಕಡಲು ತಾಳಿಕೆ ಸೈರಣೆಯ ಸಿಂಗಾರ/

  ನಿಸರ್ಗದ ನೆರಳು ಬಾಳು ಬೆಳಗುವ ಜ್ಯೋತಿಯು/
  ಕಾರುಣ್ಯದ ಕಾರಂಜಿ ಮಮತೆಯ ಮೂಲಸತ್ವವು/
  ಪ್ರಕೃತಿಯ ಬಿಂಬ ಮನವ ಶುದ್ದಿಸುವ ಜಾಗೃತಿಯು/
  ಕಕ್ಕುಲತೆಯ ಚಿಲುಮೆಯು ನಿಸ್ವಾರ್ಥದ ರೂಪವು/

  ಪಾಲನೆ ಪೋಷಣೆ ಸಹಾನುಬೂತಿಯ ಸ್ವರೂಪವು/
  ಉದಾರತೆಯಲ್ಲಿ ಆಗಸದ ವಿಶಾಲತೆಯ ಮನವು/
  ಉದಾತ್ತ ಹೃದಯದ ಕ್ಷಮಾಶೀಲತೆಯ ಪ್ರತೀಕವು/
  ಸೋಶೋಭಿತ ಸಜ್ಜನ ಸಂಸ್ಕೃತಿಯ ಸಂಕೇತವು/

 7. Padma Anand says:

  ಸುಂದರ ಸಂದರ್ಭೋಚಿತ ಲೇಖನ.

 8. . ಶಂಕರಿ ಶರ್ಮ says:

  ಸೊಗಸಾದ ಮಾಹಿತಿಪೂರ್ಣ ಬರೆಹ.

 9. dharmanna dhanni says:

  ಬರಹ ಚೆನ್ನಾಗಿದೆ.ಆದರೆ ಮಹಿಳಾ ಚಳುವಳಿಗಾರನ್ನು ಪ್ರಸ್ತಾಪಿಸಿಲ್ಲ.ಇದು ಇಷ್ಟವಾಗಲಿಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: