“ಗುರುತು” by Vidya Venkatesh · December 2, 2021 Spread the love ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ ಸಾಗರದಲ್ಲಿಮುಳುಗಿದವಳಿಗೆವಯಸ್ಸು ಕಳೆದಿದ್ದು… ನೆನಪಾದಾಗ,,ಕನ್ನಡಿಯಲ್ಲಿನೋಡಿಕೊಂಡಾಗಅವಳ ಗುರುತುಅವಳಿಗೇ ಹತ್ತಲಿಲ್ಲ…. *ವಿದ್ಯಾ ವೆಂಕಟೇಶ್. ಮೈಸೂರು +13
ತುಂಬಾ ಚೆನ್ನಾಗಿದೆ
ಹೌದು ಹೌದು ಇದು ಹೆಣ್ಣಿಗೆ ಮಾತ್ರ ಅರ್ಥವಾಗುವಂತಹ ಕವನ
ಬೇರೆಯವರು ಹೆಣ್ಣನ್ನು ಲೇವಡಿ ಮಾಡುವವರು
ಚೆನ್ನಾಗಿದೆ.
ಚುಟುಕಾದರೂ ಚುರುಕು ಮುಟ್ಟಿಸುವಂತಿದೆ..ಕವನ
ಸೋದರಿ . ಅಭಿನಂದನೆಗಳು
ತಮ್ಮ ಗುರುತು ತಮಗೇ ಸಿಗದಂತಹ ಪರಿಸ್ಥಿತಿಯಲ್ಲಿ ಜೀವನ ಕಳೆಯುವ ಮಹಿಳೆಯ ಬಾಳಿನ ಕ್ರೂರಸತ್ಯದ ಅನಾವರಣ!… ಸೊಗಸಾದ ಕವನ.
Mana muttitu kavithe.. abhinandanegalu..
Mana muttitu kavithe.. abhinandanegalu..
ತನ್ನ ಕುಟುಂಬದವರ ಗುರುತನ್ನು ಗಾಢವಾಗಿಸುವ ನಿಟ್ಟಿನಲ್ಲಿ ತನ್ನ ಗುರುತನ್ನು ತಾನೇ ಮಸಕು ಮಾಡಿಕೊಂಡು ಬಿಡುವ ಹೆಣ್ಣನ್ನು ನೀವಾದರೂ ಗುರುತಿಸಿದ್ದು ಸಂತೋಷ ತಂದಿದೆ. ಚಂದದ ಕವನಕ್ಕಾಗಿ ಅಭಿನಂದನೆಗಳು
ಎಲ್ಲರ ಮೆಚ್ಚುಗೆಗೆ,, ಅವರವರ ಭಾವಗಳ ಪ್ರತಿಕ್ರಿಯೆ ಗೆ
ಹೃದಯ ಪೂರ್ವಕ ಧನ್ಯವಾದ ಗಳು