ಹೆರಿಗೆ

Spread the love
Share Button

ಒಮ್ಮೊಮ್ಮೆ
ಮನಸ್ಸಿನ ಗರ್ಭದೊಳಗೆ
ಭಾವಗಳ ಭ್ರೂಣ
ತಿಣುಕಾಡಿ ತಿಣುಕಾಡಿ ಕಂಗೆಡುಸುತ್ತಿದೆ
ಒಳಗೆ ಉಳಿಯಲಾರದೆ
ಹೊರಗೆ ಬರಲಾರದೆ
ಒಂಬತ್ತು ತಿಂಗಳು ಒಂಬತ್ತು ದಿನ
ತುಂಬಿದರು ಹೆರಿಗೆಯಾಗದೆ
ಕಂಗೆಟ್ಟು ಕಾಯುವ
ಬಸುರಿ ಹೆಂಗಸಿನಂತೆ
ನನ್ನ ಪಾಡಾಗುತ್ತದೆ

ಕೊನೆಗೊಂದು ದಿನ
ಅಮೃತ ಮುಹೂರ್ತದ ಕ್ಷಣ
ಭಾವ ಬೇನೆ ಹೆಚ್ಚಾಗಿ
ಇನ್ನು ಇರಲಾರೆ ಎನ್ನುತ
ಕವನದ ಮಗು ಜನಿಸಿ
ಕಾಗದದ ತೊಟ್ಟಿಲಲ್ಲಿ ಮಲಗಿಸಿ
ನನ್ನ ಕೂಸನು ಕಂಡು
ನಾ ಸಂಭ್ರಮಿಸಿ
ಹೆರಿಗೆಯಾದ ಈ ಸುದಿನ
ಧನ್ಯಳಾದೆ ಎಂದಿತು ನನ್ನ ಮನ.

– ವಿದ್ಯಾ ವೆಂಕಟೇಶ್

7 Responses

  1. ಬಿ.ಆರ್.ನಾಗರತ್ನ says:

    ಕವನದ ಆಗಮನಕ್ಕೆ ಚಂದದ ಚಿಂತನೆ.ಹೆತ್ತವರಿಗೇ ಗೊತ್ತು ಅದರನೋವು ಎನ್ನುವಂತೆ, ಬರೆಯುವವರಿಗೇ ಗೂತ್ತು ಅದರ ಬವಣೆ.ಚೆನ್ನಾಗಿದೆ ನಿಮ್ಮ ಕಲ್ಪನೆ.ಸೋದರಿ.ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ಸೊಗಸಾಗಿದೆ

  3. ಮನದೊಳಗೆ ಥಿಂಕ್ ಥೈ ಥೈ ಥೈ ಎಂದು ಕುಣಿಯುವ ಭಾವಗಳ ಚಿತ್ರಣ ಸೊಗಸಾಗಿದೆ

  4. ಹೆರುವವರಿಗೆ ಗೊತ್ತು ನೋವಿನ ಅನುಭವ
    ಹೆತ್ತ ಮೇಲೆ ತಿಳಿವುದು ಕವನದ ಮಗುವಿನಿಂದಾದ ಆನಂದ

  5. ಅರ್ಥಪೂರ್ಣವಾಗಿದೆವಕವನ.ಧನ್ಯವಾದಗಳು

  6. ಶಂಕರಿ ಶರ್ಮ says:

    ಭಾವನೆಗಳನ್ನು ಹೆತ್ತು, ಕಾಗದದ ತೊಟ್ಟಿಲಲ್ಲಿಟ್ಟು ತೂಗಿದ ಪರಿ ಬಹಳ ಸೊಗಸಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: