ನಿಮ್ಹಾನ್ಸ್‌ನಲ್ಲಿ ಒಂದು ವಾರ..

Share Button


ನಿಮ್ಹಾನ್ಸ್ ಅಂದ ತಕ್ಷಣ ನಮ್ಮೆಲ್ಲರ ನೆನಪಿಗೆ ಬರುವ ಒಂದೇ ವಿಷಯ ಏನೆಂದರೆ ಅದೊಂದು ಮಾನಸಿಕ ಆರೋಗ್ಯ ಸಂಸ್ಠೆ ಮತ್ತು‌ ಅಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ನಿಮ್ಹಾನ್ಸ್ ಬಗ್ಗೆ ಅನೇಕ ವಿಷಯಗಳನ್ನು ಓದಿ ತಿಳಿದುಕೊಂಡಿದ್ದ ನನಗೆ ಆ ಆಸ್ಪತ್ರೆಯ ಕುರಿತು ಒಂದು ಕುತೂಹಲವಿತ್ತು. ಯಾವತ್ತಾದರೂ ಒಮ್ಮೆ ಬೆಂಗಳೂರಿಗೆ ಹೋದಾಗ ನಿಮ್ಹಾನ್ಸ್ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಅಂದುಕೊಂಡಿದ್ದೆ. ಆ ಶುಭ ದಿನವೂ ಬಂದು ಬಿಟ್ಟಿತು. ಬೆಂಗಳೂರಿನಲ್ಲಿ ನಿಮ್ಹಾನ್‌ನಲ್ಲಿ ನಡೆಯುವ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಕಾಲೇಜಿನಿಂದ ಒಂದು ವಾರ ಕಾಲ ನಿಯೋಜಿಸಲ್ಪಟ್ಟಿದ್ದೆ. ಅಂತೂ ನಿಮ್ಹಾನ್ಸ್ ಕ್ಯಾಂಪಸ್‌ಗೆ ಕಾಲಿಟ್ಟಾಗ ಏನೋ ಒಂದು ರೀತಿಯ ಅನುಭವ. ಆ ತರಬೇತಿ ಶಿಬಿರದಲ್ಲಿ ನಾನು ಗಮನಿಸಿದ್ದು ಬಹುತೇಕ ಉಪನ್ಯ್ಯಾಸಕರು ಆಗ ತಾನೇ ಸೇವೆಗೆ ಸೇರಿದವರಾಗಿದ್ದು, ಇನ್ನು ಕೆಲವರು ಆರೇಳು ವರ್ಷದ ಅನುಭವವುಳ್ಳವರಾಗಿದ್ದರು. ಹೆಚ್ಚಿನವರು ತಮ್ಮ ವೃತ್ತಿಗೆ ಅಗತ್ಯವಾದ ಮಾನದಂಡಗಳಲ್ಲಿ ಒಂದಾದ ತರಬೇತಿಯನ್ನು ಮುಗಿಸುವ ಸಲುವಾಗಿ ಬಂದಿದ್ದರು. ನಾನು ನಿಮ್ಹಾನ್ಸ್‌ನವರಿಂದ ಜರಗುವ ಈ ಶಿಬಿರದ ಬಗ್ಗೆ ಅನೇಕರಿಂದ ಕೇಳಿ ತಿಳಿದುಕೊಂಡು ಕುತೂಹಲದಿಂದ, ಆಸಕ್ತಿಯಿಂದಲೂ ಬಂದಿದ್ದೆ. ಅದಲ್ಲದೆ ಜೀವನ ಕೌಶಲ್ಯಗಳನ್ನು ಈಗಾಗಲೇ ಅರಗಿಸಿಕೂಂಡ ನನಗೆ ಇನ್ನೂ ಹೆಚಿನ ಮಟ್ಟದಲ್ಲಿ ಕಲಿಯುವ ತವಕವೂ ಸೇರಿತ್ತು. ನಿವೃತ್ತಿಯ ಅಂಚಿನಲ್ಲಿದ್ದ ನನಗೆ ಈ ಹದಿಹರೆಯದ ಮನಸ್ಸುಗಳೊಂದಿಗೆ ಬೆರೆಯುವ ಸಂಕೋಚವೂ, ಅಳುಕು ಇತ್ತು.

ಸರಿ, ಮೊದಲನೇ ದಿನ ಶಿಬಿರಾರ್ಥಿಗಳ ಪರಿಚಯದೊಂದಿಗೆ ತರಬೇತಿ ಶಿಬಿರವು ಪ್ರಾರಂಭವಾಯಿತು. ನಮಗೆಲ್ಲರಿಗೂ ವೈಯಕ್ತಿಕ ವಿಷಯಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಒಳಗೊಂಡ ಒಂದು ಪ್ರಶ್ನಾವಳಿಯನ್ನು ಕೊಡಲಾಗಿತ್ತು. ಅದನ್ನೆಲ್ಲಾ ಉತ್ತರಿಸಿದ ನಂತರ ನಮ್ಮನ್ನು ನಿಮ್ಹಾನ್ ಆಸ್ಪತ್ರೆಯ ಪರಿಚಯ ಮಾಡಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ. ಪ್ರತಿ ನಿತ್ಯ ಉತ್ತಮ ಸಂವಹನ, ಸಂವಾದ ಹಾಗೂ ಗುಂಪು ಚರ್ಚೆಗಳಿಂದ ಕೂಡಿದ ಈ ತರಬೇತಿಯು ಬಹಳ ಪರಿಣಾಮಕಾರಿಯಾಗಿತ್ತು. ಎಲ್ಲಾ ಅವಧಿಗಳು ಆಸಕ್ತಿದಾಯಕವಾಗಿದ್ದವು. ಸಕಾರಾತ್ಮಕ ಚಿಂತನೆಯಿಂದ ಮಾನಸಿಕ ಆರೋಗ್ಯ ವೃದ್ದಿಸುವ ಸರ್ವ ಕಲೆಯನ್ನು ಕಲಿಸಿ ಕೊಡಲಾಗುತ್ತಿತ್ತು. ಕಠಿಣ ಪರಿಸ್ಥಿತಿಯಲ್ಲಿ ನಿರ್ಣಯ ಕೈಗೊಳ್ಳುವಿಕೆ, ಜಟಿಲ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವ ರೀತಿ ಅಥವಾ ಸಮರ್ಥ ನಾಯಕತ್ವ ಹೊಂದುವುದು, ಈ ರೀತಿಯ ಎಲ್ಲಾ ಗುಣಗಳನ್ನು ನಮ್ಮಿಂದಲೇ ಆಡಿ ತೋರಿಸಿ ನಮ್ಮಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸ ನಿಜಕ್ಕೂ ಅದ್ಭುತವಾಗಿತ್ತು.ಆ ದಿನದಿಂದಲೇ ಜೀವನ ಕೌಶಲ್ಯಗಳಾದ ಸಂಯಮ, ಸಹನೆ, ಸಹಾನುಭೂತಿ, ಕ್ಷಮೆ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಒತ್ತಡ ನಿರ್ವಹಣೆ, ಮತ್ತು ಇತರ ಕಲೆಗಳನ್ನು ಮೈಗೂಡಿಸಿಕೊಂಡು ಇನ್ನು ಮುಂದೆ ಈ ಎಲ್ಲಾ ಕೌಶಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಬೇಕೆಂದು ತೀರ್ಮಾನಿಸಿದೆ. ಯಾವತ್ತೂ ದುಡುಕದೆ ಸಮಚಿತ್ತದಿಂದ, ಶಾಂತಿಯಿಂದ ವ್ಯವಹರಿಸಬೇಕೆಂದು, ಯಾರ ಮೇಲೂ ಹಗೆತನ, ಸೇಡು, ಈರ್ಷ್ಯೆ, ಅಹಂ, ಇತ್ಯಾದಿಗಳಿಗೆಳ್ಲಾ ವಿರಾಮ ನೀಡಬೇಕೆಂದೂ ಮನಸ್ಸಿನಲ್ಲೇ ದೃಢ ಸಂಕಲ್ಪ ಮಾಡಿಕೂಂಡೆ.

ಮರುದಿನ ನನಗೆ ಹೆಚ್ಚಿನ ಎಲ್ಲಾ ಶಿಬಿರಾರ್ಥಿಗಳಲ್ಲೂ ಹೊಸ ವಿಧದ ಬದಲಾವಣೆಯು ಗೋಚರಿಸುತ್ತಿತು. ಬಹುಶಃ ನನ್ನ ಹಾಗೇ ಅವರೂ ಅಂದುಕೊಂಡಿರಬಹುದು ಅಂತ ಅನಿಸಿತು. ನಮ್ಮ ನಡವಳಿಕೆಗಳು, ವಿಚಾರ ವಿನಿಮಯಗಳು ಒಂದು ವಾರದೂಳಗೆ ಅಭೂತಪೂರ್ವ ರೀತಿಯಲ್ಲಿ ಮಾರ್ಪಾಡಾಗಿತ್ತು. ವಾರಾಂತ್ಯದಲ್ಲಿ ಎಲ್ಲರಲ್ಲೂ ನವ ನವೀನತೆಯಿಂದ ಕೂಡಿದ ವ್ಯಕ್ತಿತ್ವವು ನಿರ್ಮಾಣ ಗೊಂಡದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಂತೂ ತರಬೇತಿಯ ಕೊನೆಯ ದಿನ ಬಂದೇಬಿಟ್ಟಿತು. ಅಂದು ನಾವೆಲ್ಲರೂ ಇದುವರೆಗೂ ತರಬೇತಿ ಪಡೆದ ಕೌಶಲ್ಯಗಳ ಬಗ್ಗೆ ಎಲ್ಲರ ಮುಂದೆ ಪ್ರದರ್ಶಿಸಬೇಕಿತ್ತು. ಎಲ್ಲರೂ ಅದ್ಭುತವಾಗಿ ಅಭಿನಯಿಸಿದರು. ನಮ್ಮ ನಮ್ಮ ಅನಿಸಿಕೆಗಳನ್ನು ಮಂಡಿಸಿದೆವು. ಮಧ್ಯಾಹ್ನ ಊಟದ ಬಳಿಕ ಎಲ್ಲರೂ ಹೊರಡುವ ತರಾತುರಿಯಲ್ಲಿದ್ದರು. ಜೀವನ ಕಲೆಗಳನ್ನು ಕರಗತ ಮಾಡಿಕೊಂಡ ನಾವು ದೂರದೂರಿಗೆ ಹೋಗುವವರನ್ನು ತಾಳ್ಮೆಯಿಂದ ಮೊದಲು ಬೀಳ್ಕೊಟ್ಟು ನಂತರ ನಿಧಾನವಾಗಿ ನಾವೂ ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು. ತರಬೇತಿಯಲ್ಲಿ ಕಲಿತ ಎಲ್ಲಾ ವಿಧದ ಕಲೆಗಳನ್ನು ಮುಂದಿನ ಜೀವನದಲ್ಲಿ ಅಳವಡಿಸಬೇಕೆಂಬ ಹಂಬಲದಿಂದ ನಾನು ನನ್ನೂರಿಗೆ ಮರಳಿದೆನು.

PC: Internet

ಮರುದಿನ ಕಾಲೇಜಿನಲ್ಲಿ ನನ್ನೆಲ್ಲಾ ಸಹದ್ಯೋಗಿಗಳನ್ನು ಹಾಗು ವಿದ್ಯಾರ್ಥಿಗಳನ್ನು ವಿಶೇಷ ರೀತಿಯ ನಡೆ ನುಡಿಗಳಿಂದ ಸ್ವಾಗತಿಸಿದ್ದೆ. ಮನೆಯಲ್ಲೂ ನನ್ನಲ್ಲಾದ ಬದಲಾವಣೆ ಕಂಡು ಮನೆಯವರು ಸಂತೋಷ, ಅಚ್ಹರಿ ಪಟ್ಟರು. ಸಣ್ಣ ಪುಟ್ಟ ವಿಷಯಗಳಿಗೂ ದುಡುಕುತಿದ್ದ, ರೇಗುತ್ತಿದ್ದ ನಾನು ಒಂದು ವಾರದ ತರಬೇತಿಯಲ್ಲಿ ಅದ್ಬುತ ಪಾಠವನ್ನು ಕಲಿತಿದ್ದೆ. ಸಮಾಧಾನ ಚಿತ್ತದಿಂದ ಇದ್ದು ಇಲ್ಲರಲ್ಲೂ ಸಹನೆಯಿಂದ ಇರಲು ಪ್ರಯತ್ನಿಸುತ್ತಿದ್ದೆ. ಆದರೆ ದಿನ ಕಳೆದಂತೆ ನಾನು ಪುನಃ ಮೊದಲಿನ ಸ್ವಭಾವಕ್ಕೆ ಮರಳಿದೆನೋ ಅಂತ ಭಾಸವಾಗಿ ಭಯಪಟ್ಟಿದ್ದೆ. ಜೀವನ ಕೌಶಲ್ಯ ತರಬೇತಿಯ ಹೊಸತನ ಮಾಗುತ್ತಿದ್ದಂತೆ ಹಳೆಯ ಚಾಳಿಯನ್ನು ಮುಂದುವರೆಸುವ ಆತಂಕ ಮನೆ ಮಾಡಿತ್ತು. ಛೆ! ಹಾಗಾಗಬಾರದು. ಈ ತರಬೇತಿಯು ನನ್ನ ಜೀವನದ್ದುದ್ದಕ್ಕೂ ಉತ್ತಮ ಪಾಠವಾಗಬೇಕು ಎಂದು ಮನಸ್ಸು ಬಯಸಿತ್ತು.

ಮಾರನೇ ದಿನವೇ ನಿಮ್ಹಾನ್ಸ್ ವತಿಯಿಂದ ಕೊಡಲ್ಪಟ್ಟ ಕೈಪಿಡಿ, ಇನ್ನಿತರ ಪುಸ್ತಕಗಳು ಹಾಗೂ ಚಟುವಟಿಕೆಯ ಡೈರಿಗಳನ್ನು ಹೊರತೆಗೆದು ಪುನರ್ಮನನ ಮಾಡತೊಡಗಿದೆ. ಈ ರೀತಿಯ ಪುನಶ್ಚೇತನ ಅಧ್ಯಯನಗಳು ನನ್ನನ್ನು ಅಧೀರಳನ್ನಾಗಿಸದೆ ಮತ್ತೆ ಸೆಟೆಯುವಂತೆ ಮಾಡಿತು. ನಾವು ಕಲಿತ ಯಾವುದೇ ವಿದ್ಯೆಯು ನಮ್ಮನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಲು ಆ ವಿದ್ಯೆಯನ್ನು ಒರೆಗೆ ಹಚ್ಚುವ ಕೆಲಸ ನಿರಂತರವಾಗಿ ನಡೆಯುವುದು ಅತೀ ಅವಶ್ಯ ಅಂದುಕೊಂಡೆ. ಆಗಲೇ ಜೀವನ ಕಲೆಯಲ್ಲಿ ಪರಿಪೂರ್ಣತೆ ಸಾಧ್ಯ ಎಂಬ ಕಟು ಸತ್ಯ ಮನದಟ್ಟಾಗಿತ್ತು. ನಿಜಕ್ಕೂ ಈ ತರಬೇತಿಯು ನನ್ನ ಜೇವನದಲ್ಲಿಮರೆಯಲಾಗದ ಪಾಠವನ್ನು ಕಲಿಸಿತ್ತು. ವ್ರತ್ತಿ ಜೀವನದ ಹೊಸ್ತಿಲಲ್ಲಿರುವ ಮಿತ್ರರಿಗೆ ಇಂತಹ ತರಬೇತಿ ಶಿಬಿರಗಳು ಅತೀ ಅಗತ್ಯ. ದೇಶದ ಮುಂದಿನ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಯುವ ಶಿಕ್ಷಕರಿಗೆ ದಾರಿದೀಪವಾಗಬಲ್ಲ ಈ ಶಿಬಿರದ ಸದುಪಯೋಗ ಎಲ್ಲರೂ ಪಡೆಯುವಂತಾಗಲಿ ಎಂದು ನನ್ನ ಆಶಯ.

-ಶೈಲಾರಾಣಿ. ಬಿ. ಮಂಗಳೂರು. 

17 Responses

  1. ಡಾ. ಕೃಷ್ಣಪ್ರಭ ಎಂ says:

    ಉತ್ತಮ ಲೇಖನ…ಇಂತಹ ಅವಕಾಶಗಳು ಹೆಚ್ಚಿನ ಜನರಿಗೆ ಸಿಗುವಂತಾಗಬೇಕು

  2. ರಾಜಶೇಖರ ಕೆಸಿ says:

    ನಿಮ್ಮ ಲೇಖನ ಓದಿ ನನಗಿರುವ ನಿಮ್ಮ ಮೇಲಿನ ಲೇಕ್ಕಚಾರವನ್ಮೇ ಬದಲಿಸಿ ನಿಮ್ಮ ಮೇಲೆ ಇನ್ನೂ ಹೇಚ್ಚಿನ ಗೌರವಾಭಿಮಾನವನ್ನು ಮೂಡಿಸಿದೆ.ಹೀಗೇಯೇ ನಿಮ್ಮ ಲೇ(ಖಾನ)ವನ್ನು ನಮಗೆ ಉಣಿಸುತ್ತಾ ಇರಿ
    ಧನ್ಯವಾದಗಳೋಂದಿಗೆ

  3. Anonymous says:

    ನಮಸ್ಕಾರ, ಇಂತಹ ಶಿಬಿರಗಳು ಎಲ್ಲಾ ಊರುಗಳಲ್ಲಿ ನಡೆದರೆ ಅಗತ್ಯ ಇರುವವರಿಗೆ ಸಹಾಯ ವಾಗುತ್ತದೆ
    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ
    .ವಿದ್ಯಾ

  4. Samatha.R says:

    ಶಿಬಿರದಲ್ಲಿ ಭಾಗವಹಿಸಲು ಮಾರ್ಗಸೂಚಿ ಇದ್ದರೆ ತಿಳಿಸಿ..ನಿಮ್ಮ ಲೇಖನ ಬಹಳ ಆಸಕ್ತಿ ದಾಯಕ ಹಾಗೂ ಮಾಹಿತಿ ಪೂರ್ಣವಾಗಿದೆ.

  5. ಬಿ.ಆರ್.ನಾಗರತ್ನ says:

    ಅತ್ಯಂತ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ ಚೆನ್ನಾಗಿದೆ.ಅಭಿನಂದನೆಗಳು.

  6. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ ಗಮನ ಸೆಳೆಯುವಂತಿದೆ.

  7. Shashidhar says:

    Very good article

  8. Savithri bhat says:

    ಉತ್ತಮ ಮಾಹಿತಿ ಪೂರ್ಣ ಲೇಖನ..

  9. Hema says:

    ಅಪರೂಪದ ಅನುಭವ..ಚೆನ್ನಾಗಿ ಬರೆದಿದ್ದೀರಿ

  10. ಶಂಕರಿ ಶರ್ಮ says:

    ನಮ್ಮ ವ್ಯಕ್ತಿತ್ವವನ್ನೇ ಬದಲಿಸುವ ಇಂತಹ ಶಿಬಿರಗಳ ಅಗತ್ಯತೆ ಈಗಿನ ಪರಿಸ್ಥಿತಿಯಲ್ಲಿ ಬಹಳವಿದೆ. ಸೊಗಸಾದ ಮಾಹಿತಿಪೂರ್ಣ ಲೇಖನ.. ಧನ್ಯವಾದಗಳು.

  11. Seema Prabhu S. says:

    You have penned down your experiences so well shaila ma’am. Superb .
    I too attend the life skills training of NIMHANS. One of the best trainings.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: