ನೆನಪುಗಳು…..

Share Button

ಹಸಿರುಟ್ಟ ಮರದ ತುಂಬಾ
ನಿಗಿ ನಿಗಿ ಕೆಂಡಗಳು
ಅರಳಿ ಹೂವಾದಂತೆ
ಮುಗಿಲು ಮುಖ ಗುಲ್ಮೊಹರು
ಕೆಂಪು ಕೆಂಪು …….
ಹೂ ಹಣ್ಣುಗಳ ಭಾರಕ್ಕೆ
ತೂಗಿ ತೊನೆಯುತ್ತಿದೆ
ಈಗಷ್ಟೇ ಬಿದ್ದ ಹನಿ ಮಳೆಗೆ
ತೊಯ್ದು ಮಣ್ಣರಳಿ
ಕಮ್ಮನೆಯ ಕಂಪು ತಂಪು …..

ಚಿಗುರು ಪಾದದ ತುಳಿತಕ್ಕೆ
ಮೈ ಅರಳಿಸಿದೆ ಹುಲ್ಲು
ಹರಿದ ಹೊಳೆ ಜುಳು ಜುಳು ನಡುವೆ
ಹಲ್ಲು ಕಿರಿಯುವ ಮುಗುದೆಯೊಡಲ
ಕಂಡು ಸೂರ್ಯನ ಚೆಲುವು
ಬಯಕೆ ಕನಸುಗಳ ಓಕುಳಿಯಾಟಕ್ಕೆ
ಧರೆಯೇ ಸಜ್ಜಾಗಿ ನಿಂತು
ತಲೆದೂಗಿ ಕರೆದಿದೆ
ಸೀತಾಳೆ ಹೂದಂಡೆ

ಮಾಮರದ ಒಡಲಿಂದ
ಹರಿದು ಬರುತಿದೆ ಹಾಡು
ಕೋಗಿಲೆಯ ಜೀವಂತ ಗೀತೆ
ಮುಚ್ಚಿರುವ ಕಣ್ಣು ತೆರೆ
ಕಾಣುವುದು ನೋಡು
ಈ ನೆಲದ ಹಚ್ಚನೆಯ ತುಂಬು ಬಾಳು

ಅಂತರಾಳದಲ್ಲಿ ಹನಿಯೊಡೆದ ಪ್ರೀತಿ
ಮನಸ್ಸೆಲ್ಲ ತೇವ ತೇವ
ತಂಗಾಳಿ ಬೀಸಿ , ಹೂಗಂಧ ತೀಡಿ
ಝಲ್ಲೆನಿಸುವ ಮನದ ಭಾವ
ಚಿಗುರು ,ಹೂ ,ಹಣ್ಣು ಬೆಳೆಯುವುದೇ ಬದುಕು
ಒಳಗಿರಲಿ ಅನುಭಾವದೊಂದು ಪಲಕು
ಸಂಜೆ ಇಳಿಗಂಪಿನಲಿ
ಕಸುವಳಿದ ದವಡೆಯಲಿ
ನೆನಪುಗಳ ಮೆಲುಕು.

-ಪ್ರಭಾಕರ ತಾಮ್ರಗೌರಿ, ಗೋಕರ್ಣ

4 Responses

  1. Anonymous says:

    ಬಹಳ ಚಂದದ ಕವಿತೆ.ಅಭಿನಂದನೆಗಳು ಸಾರ್.

  2. ನಯನ ಬಜಕೂಡ್ಲು says:

    ಸೊಗಸಾದ ಕವನ

  3. ಶಂಕರಿ ಶರ್ಮ, ಪುತ್ತೂರು says:

    ಪ್ರಕೃತಿಯೊಂದಿಗೆ ಮಿಳಿತವೀ ಸುಂದರ ಕವನ.

  4. ಪ್ರಭಾಕರ ತಾಮ್ರಗೌರಿ says:

    ಧನ್ಯವಾದಗಳು ಶಂಕರಿ ಮೇಡಂಗೆ

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: