ಆಹಾ!!! ಬಂತು ಸಿಟ್ಟು …

Spread the love
Share Button

ಬಿಸಿರಕ್ತ ಕುದಿಯುತಿದೆ !
ತಲೆ ಸುತ್ತಿ ಕಾಯುತಿದೆ !
ಕೈಕಾಲ್ಗಳದುರುತಿವೆ !
ಎದೆಬಡಿತ ಏರುತ್ತಿದೆ !
ನುಡಿಗಳು ತಡವರಿಸುತಿವೆ !
ಆಹಾ !!!  ಬಂತು ಸಿಟ್ಟು

ನನ್ನ  ಸಿಟ್ಟು ಸಿಂಹಾಸನದಲಿ
ರಾಜನಂತೆ ಕುಳಿತಿದೆ.
ಎದುರು ನಡೆಯುತ್ತಿರುವುದೆಲ್ಲ
ತಪ್ಪಂತೆ ಕಾಣಿಸುತ್ತಿದೆ.
ನಾ ಸಿಟ್ಟುಗೊಳ್ಳುವುದು
ನನ್ನ ಹಕ್ಕೆಂದು ತೋರುತಿದೆ.

ಸಿಟ್ಟು ನನಗೆ ಹೇಳುತಿದೆ ::
“ನಿನ್ನಷ್ಟು ಸರಿ ಯಾರೂ ಇಲ್ಲ.
ನೀನರಿತಿರುವ ಯಾರೂ
ನಿನ್ನಷ್ಟು ಜಾಣರಲ್ಲಾ.
ಬುದ್ದಿ ಹೇಳಬೇಕು ನೀನು
ಈ ಜನರಿಗೆಲ್ಲ”.

ಬಾರಿ ಬಾರಿ ಹೇಳುತಿರುವೆ
ಅವರ ತಪ್ಪನೆತ್ತಿ ತೋರುತಿರುವೆ
ಈ ಜಗತ್ತು ಎಂದು ಅರಿವುದೋ
ಆ ದೇವರೇ ಬಲ್ಲ !!!
ಇವರಿಗಿಂತ ಮೂರ್ಖರಿಲ್ಲ!!

ಅನುಮಾನ, ಮನ ಕೇಳುತಿದೆ-
ನಾ ಎಲ್ಲರಿಗಿಂತ ಜಾಣನದರೂ,
ನನ್ನ ಮನಕೇಕೋ ಸುಖವಿಲ್ಲ ??

ನಿನ್ನೆವರೆಗು ಎಲ್ಲರೂ
ನನ್ನವರಂತೆ ಕಂಡರೂ,
ಇಂದು ನನ್ನ ಸಿಟ್ಟಿನಲ್ಲಿ
ಅಪರಿಚಿತರಂತೆ ಕಂಡರು.

ಈ ದರಿದ್ರ ಸಿಟ್ಟು ಬಂದಿತೇಕೋ ?
ನನ್ನವರ ದೂರ ಮಾಡಿತೇಕೋ?
ಜಾಣನಂತೆ ನನ್ನ ಮೆರೆಸಿ,
ನಿಜದಿ ಮೂರ್ಖನ ಮಾಡಿತು.

ನನ್ನ ಮನದ ಶಾಂತಿ ಕದ್ದ
ಸಿಟ್ಟಿನ ಮೇಲೇ ಸಿಟ್ಟಾಗುವೆ,
ಆ ಸಿಟ್ಟನ್ನೆ  ದೂರ ಓದೆಯುವೆ

ತಲೆಯು ಶಾಂತವಾಯಿತು
ಮನವು ಹಗುರವಾಯಿತು
ನುಡಿಗಳು ಹಾಡಾಯಿತು

“ಸಮರವೇ ಜೀವನ” ಎನ್ನುತ್ತಿತ್ತು ಸಿಟ್ಟು,
“ಸಮರಸವೇ ಜೀವನ” ಎಂಬುದ ಬಚ್ಚಿಟ್ಟು.

ಸಿಟ್ಟಿನಲ್ಲಿ ನನ್ನ, ಮುಸುಕಿತ್ತು ಅಜ್ಞಾನ!
ಜಾಣತನದಿ ಬಂತು ಆ – ಜ್ಞಾನ
ಆ ಜ್ಞಾನಕೆ ನನ್ನ ನಮನ.

-ವಂದನಾ ಹೆಗ್ಡೆ

2 Responses

  1. ನಯನ ಬಜಕೂಡ್ಲು says:

    ಸೂಪರ್. ಹೌದು… ಸಿಟ್ಟು ಬಂದಾಗ ನನಗೂ ಹೀಗೆಲ್ಲ ಆಗುತ್ತದೆ . ಸಿಟ್ಟಿನ ಭಾವದಲ್ಲಿ ತುಂಬಿಕೊಳ್ಳುವ ಭಾವನೆಗಳನ್ನು ಯಥಾವತ್ತಾಗಿ ಬಣ್ಣಿಸಿದ್ದೀರಿ.

  2. ಶಂಕರಿ ಶರ್ಮ says:

    ಅಪರೂಪದ ವಿಷಯದ ಮೇಲಿನ ಅಂದದ ಕವನ. ಸಿಟ್ಟು ತನ್ನ ಸಾಮ್ರಾಜ್ಯದಲ್ಲಿ ಏನೆಲ್ಲಾ ಅನಾಹುತಗಳನ್ನು ಮಾಡಬಹುದೆಂಬುದನ್ನು ತಿಳಿಸಿದ ಪರಿ ಚೆನ್ನಾಗಿದೆ. ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಒಳ ಮನಸ್ಸಿನ ಶಕ್ತಿ ಎಲ್ಲರಿಗೂ ಇಂದು ಅಗತ್ಯವಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: